ಮಡಿಕೇರಿ, ಸೆ. ೨೭: ಮಡಿಕೇರಿ ದಸರಾ ಜನೋತ್ಸವ ಅಂಗವಾಗಿ ನಗರ ದಸರಾ ಸಾಂಸ್ಕೃತಿಕ ಸಮಿತಿ ವತಿಯಿಂದ ನಡೆಯುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತಾ.೨೬ರ ಕಾರ್ಯಕ್ರಮ ಜನ ಮನ ಸೂರೆಗೊಂಡಿತು.
ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುಶಾಲನಗರದ ಕುಂದನ ನೃತ್ಯಾಲಯ, ಕುಶಾಲನಗರದ ಶಿವಧಾರೆ ಸ್ಕೂಲ್ ಆಫ್ ಡ್ಯಾನ್ಸ್, ಭಾರತೀಯ ಸಂಗೀತ ನೃತ್ಯ ಕಲಾ ಶಾಲೆ, ಮೂರ್ನಾಡುವಿನ ಸ್ಟೆಪ್ ಆಫ್ ಶಾಡೋವ್ಸ್ ಡ್ಯಾನ್ಸ್ ಅಕಾಡೆಮಿ. ಪೊಮ್ಮಾಲೆ ಪೊಮ್ಮಕ್ಕಡ ಕೂಟ ಹಾಗೂ ಡ್ರೀಮ್ ಅಚೀರ‍್ಸ್ ತಂಡದ ಕಲಾವಿದರು ತಮ್ಮ ನೃತ್ಯದ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಇವರೊಂದಿಗೆ ಕುಶಾಲನಗರದ ಕನ್ನಡ ಸಾಹಿತ್ಯ ಪರಿಷತ್ತು ನಿಕಟಪೂರ್ವ ಅಧ್ಯಕ್ಷ ಲೋಕೇಶ್ ಸಾಗರ್ ನೇತೃತ್ವದ ಕನ್ನಡ ಸಿರಿ ಕಲಾವೃಂದ ತಂಡದವರು ಸುಮಧುರ ಗಾನದೊಂದಿಗೆ ಗಮನ ಸೆಳೆದರು.