ಗೋಣಿಕೊಪ್ಪಲು, ಸೆ. ೨೯: ರೋಮಾಂಚನಗೊಳಿಸುವ ನೃತ್ಯಗಳ ಸಂಗಮದೊAದಿಗೆ ಗೋಣಿಕೊಪ್ಪದಲ್ಲಿ ನಡೆದ ಯುವ ದಸರಾ ಕಾರ್ಯಕ್ರಮ ಕಲಾಪ್ರೇಮಿಗಳನ್ನು ಸೂಜಿಗಲ್ಲಿನಂತೆ ಸೆಳೆಯಿತು.

ಕೊಡಗು ಸೇರಿದಂತೆ ವಿವಿಧ ಜಿಲ್ಲೆಗಳಿಂದ ೨೦ಕ್ಕೂ ಹೆಚ್ಚು ತಂಡಗಳು ಸ್ಪರ್ಧೆಯಲ್ಲಿ ಪಾಲ್ಗೊಂಡು ಅದ್ಭುತ ನೃತ್ಯ ಪ್ರಾಕಾರಗಳನ್ನು ಪ್ರದರ್ಶಿಸಿದವು. ಪೌರಾಣಿಕ ಹಿನ್ನೆಲೆ ಸಾರುವ ಮನಮೋಹಕ ನೃತ್ಯಗಳು ನೋಡುಗರನ್ನು ಪುಳಕಿತಗೊಳಿಸಿದವು. ಭಾರತ ದೇಶದ ಭವ್ಯ ಇತಿಹಾಸ ಸಾರುವ ನೃತ್ಯವನ್ನು ಸಾಹಸಮಯವಾಗಿ ಪ್ರದರ್ಶಿಸಿ ಜನರನ್ನು ನೃತ್ಯಪಟುಗಳು ರೋಮಾಂಚನಗೊಳಿಸಿದರು. ಆಧುನಿಕ ನೃತ್ಯ ಪ್ರಕಾರಗಳು ಜನರನ್ನು ಸೆಳೆದವು.

ಶ್ರೀ ಕಾವೇರಿ ದಸರಾ ಸಮಿತಿ ವತಿಯಿಂದ ಗೋಣಿಕೊಪ್ಪದಲ್ಲಿ ನಡೆಯುತ್ತಿರುವ ದಸರಾ ಕಾರ್ಯಕ್ರಮದಲ್ಲಿ ಭಾನುವಾರ ಯುವ ದಸರಾ ಸಂಭ್ರಮ ಸೃಷ್ಟಿಯಾಯಿತು. ಪ್ರೇಕ್ಷಕರ ದಂಡು ಕಲಾ ವೇದಿಕೆಯತ್ತ ದೌಡಾಯಿಸಿತು. ವಿಶೇಷವಾಗಿ ಯುವಸಮೂಹ ಸಂಭ್ರಮಕ್ಕೆ ಸಾಕ್ಷಿಯಾಗಿ ಕುಣಿದು ಕುಪ್ಪಳಿಸಿತು.

ಡ್ಯಾನ್ಸ್ ಲ್ಯಾಬ್ ಚಾಂಪಿಯನ್

ರಾಜ್ಯಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಮಡಿಕೇರಿಯ ಡ್ಯಾನ್ಸ್ ಲ್ಯಾಬ್ ಗೆದ್ದು ಚಾಂಪಿಯನ್‌ಪಟ್ಟ ಮುಡಿಗೇರಿಸಿಕೊಂಡಿತು. ಭಾರತ ಸ್ವಾತಂತ್ರö್ಯಗೊAಡ ಇತಿಹಾಸವನ್ನು ನೃತ್ಯ ರೂಪಕದ ಮೂಲಕ ಪ್ರಸ್ತುತಪಡಿಸಿದ ನೃತ್ಯಪಟುಗಳು ವ್ಯಾಪಕ ಶ್ಲಾಘನೆಗೆ ಪಾತ್ರರಾದರು. ‘ಏರಿಯಲ್’ ಮೂಲಕ ಕಲಾವಿದರು ವೇದಿಕೆಯಲ್ಲಿ ಚಿಮ್ಮುತ್ತಿದ್ದದ್ದು ಬೆರುಗು ಮೂಡಿಸಿತು.

ಮಡಿಕೇರಿಯ ನಾಟ್ಯಕಲಾ ತಂಡ ಕಾಲಭೈರವೇಶ್ವರ ನೃತ್ಯರೂಪಕ ಸಾದರಪಡಿಸಿ ರನ್ನರ್ ಅಪ್ ಸ್ಥಾನ ಪಡೆದುಕೊಂಡಿತು. ಕಿಂಗ್ಸ್ ಆಫ್ ಕೂರ್ಗ್ ಶಿವ-ಗಣೇಶ ನೃತ್ಯ ಪ್ರದರ್ಶಿಸಿ ತೃತೀಯ ಸ್ಥಾನ ಪಡೆಯಿತು. ಸುಂಟಿಕೊಪ್ಪದ ನಾಟಿ ಕಿಡ್ಸ್ ತಂಡ ಮೊದಲನೇ ಪುಟದಿಂದ ಸಮಾಧಾನಕಾರ ಬಹುಮಾನಕ್ಕೆ ಪಾತ್ರವಾಯಿತು. ವರ್ಷ, ರಣ್ವಿತ್ ಹಾಗೂ ಮಹೇಶ್ ತೀರ್ಪುಗಾರರಾಗಿ ಭಾಗವಹಿಸಿದ್ದರು. ಶ್ರೀ ಕಾವೇರಿ ದಸರಾ ಸಮಿತಿಯ ಅಧ್ಯಕ್ಷ ಪ್ರಮೋದ್ ಗಣಪತಿ, ದಸರಾ ಸಮಿತಿಯ ಅಧ್ಯಕ್ಷ ನಾಮೇರ ಅಂಕಿತ್ ಸೇರಿದಂತೆ ಸಮಿತಿ ಪ್ರಮುಖರು ಪಾಲ್ಗೊಂಡಿದ್ದರು.