ವೀರಾಜಪೇಟೆ, ಸೆ. ೨೯: ವೀರಾಜಪೇಟೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ತಾಲೂಕಿನ ವೀರಾಜಪೇಟೆ ವಲಯದ ಬಿಟ್ಟಂಗಾಲ ಕಾರ್ಯಕ್ಷೇತ್ರದ ಶ್ರೀಗೌರಿ ಜ್ಞಾನವಿಕಾಸ ಕೇಂದ್ರದಲ್ಲಿ ಸೃಜನಶೀಲಾ ಕಾರ್ಯಕ್ರಮದಲ್ಲಿ ಪೈಪ್ ಕಾಂಪೋಸ್ಟ್ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಕುರಿತು ಮಾತನಾಡಿದ ಜಿಲ್ಲಾ ನಿರ್ದೇಶಕರಾದ ಲೀಲಾವತಿ, ಕ್ಷೇತ್ರದ ಕಾರ್ಯಕ್ರಮಗಳ ಸೃಜನಶೀಲಾ ಪೈಪ್ ಕಾಂಪೋಸ್ಟ್ ಬಗ್ಗೆ, ಎಲ್ಲರೂ ಸಾವಯವ ಗೊಬ್ಬರವನ್ನು ಬಳಸುವ ಬಗ್ಗೆ ಮಾಹಿತಿ ನೀಡಿದರು. ಬಿಟ್ಟಂಗಾಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೃಷಿ ಸಖಿ ಶೋಭಾ ಅವರು ಮಾತನಾಡಿ, ಪೈಪ್ ಕಾಂಪೋಸ್ಟ್ ತಯಾರಿ ಮಾಡುವುದು, ಕೃಷಿ ಇಲಾಖೆಯಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಒಕ್ಕೂಟದ ಉಪಾಧ್ಯಕ್ಷ ರಾದ ಗೀತಾ, ಕೇಂದ್ರ ಅಧ್ಯಕ್ಷರಾದ ಶಾರದಾ, ಯೋಜನಾಧಿಕಾರಿ ಹರೀಶ್, ಮೇಲ್ವಿಚಾರಕ ಶಿವಕುಮಾರ್, ಜ್ಞಾನವಿಕಾಸ ಸಮನ್ವಯಾಧಿಕಾರಿ ಉಷಾರಾಣಿ, ಸೇವಾಪ್ರತಿನಿಧಿ ಪುಷ್ಪ üಉಪಸ್ಥಿತರಿದ್ದರು.