ಶನಿವಾರಸAತೆ, ಸೆ. ೨೯: ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿಯ ಗ್ರಂಥಾಲಯ ಅರಿವು ಕೇಂದ್ರದಲ್ಲಿ ಅಗಲಿದ ಕನ್ನಡ ಸಾಹಿತ್ಯ ಲೋಕದ ಧೀಮಂತ ಸಾಹಿತಿ, ಕಾದಂಬರಿಕಾರ ಎಸ್.ಎಲ್.ಭೈರಪ್ಪ ಅವರಿಗೆ ಶ್ರದ್ಧಾಂಜಲಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.

ಪಂಚಾಯಿತಿ ಅಧ್ಯಕ್ಷೆ ಭವಾನಿಗುರು ಭೈರಪ್ಪ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಜ್ಯೋತಿ ಬೆಳಗಿಸಿ ಸಂತಾಪ ವ್ಯಕ್ತಪಡಿಸಿದರು.

ಗ್ರಂಥಾಲಯ ಮೇಲ್ವಿಚಾರಕಿ ಎಸ್.ಪಿ.ದಿವ್ಯಾ ಭೈರಪ್ಪ ಅವರ ಬದುಕು-ಬರಹದ ಬಗ್ಗೆ ಮಾತನಾಡಿ, ಭೈರಪ್ಪ ಅವರು ತಮ್ಮ ಸಾಹಿತ್ಯ ಸೇವೆಗಾಗಿ ಪದ್ಮಭೂಷಣ ಮತ್ತಿತರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ವಂಶವೃಕ್ಷ, ದಾಟು, ಪರ್ವ, ತಂತು, ಇತ್ಯಾದಿ ಕೃತಿಗಳು ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿವೆ ಎಂದರು.

ಪAಚಾಯಿತಿ ಸಿಬ್ಬಂದಿ ಪೂರ್ಣಿಮಾ, ಭಾರತಿ, ಶ್ರೀದೇವಿ, ವೀಣಾ, ರಂಜಿತಾ, ವಿದ್ಯಾರ್ಥಿಗಳಾದ ವಿಷ್ಣು, ಭೂಮಿಕಾ, ಅಮೃತಾ, ರೋಶಿತ್, ತುಳಸಿ, ಲಿಖಿತ್, ಇಂಪನಾ ಇತರರು ಹಾಜರಿದ್ದರು