ನಾಪೋಕ್ಲು, ಸೆ. ೨೯ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ನೆಲೆಬೀಡಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಲೀಲಾವತಿ ಹೇಳಿದರು.

ಮಡಿಕೇರಿಯ ರಾಣಿಪೇಟೆಯಲ್ಲಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಕಛೇರಿಯ ಸಭಾಂಗಣದಲ್ಲಿ ಆಯೋಜಿಸಿದ್ದ ಆಯುಧ ಪೂಜೆ, ಗಣ ಹೋಮ ಮತ್ತು ಲಕ್ಷಿö್ಮÃಪೂಜೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಈ ಸಂದರ್ಭ ಆಯುಧ ಪೂಜೆ, ಗಣ ಹೋಮ, ಲಕ್ಷ್ಮಿ ಪೂಜೆ ಮತ್ತು ಭಜನಾ ಸೇವೆಯನ್ನು ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಐ.ಡಿ.ಬಿ.ಐ ಬ್ಯಾಂಕಿನ ಮಡಿಕೇರಿ ಶಾಖಾ ಪ್ರಬಂಧಕರಾದ ಮಿಥುನ್ ಕುಮಾರ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕೊಡಗು ಜಿಲ್ಲೆಯ ಸದಸ್ಯರುಗಳಾದ ದೀರ್ಘಕೇಶಿ ಶಿವಣ್ಣ, ಟಿ.ಎಂ ಅಯ್ಯಪ್ಪ, ಧನಂಜಯ ಅಗೋಳಿಕಜೆ, ಬೆಳ್ಯನ ಚಂದ್ರ ಪ್ರಕಾಶ್, ತಾಲೂಕು ಕ್ಷೇತ್ರ ಯೋಜನಾಧಿಕಾರಿ ಪುರುಷೋತ್ತಮ, ವಲಯದ ಮೇಲ್ವಿಚಾರಕರು, ಮೇಲ್ವಿಚಾರಕ ಶ್ರೇಣಿಯ ಸಿಬ್ಬಂದಿಗಳು, ಕಛೇರಿ ಪ್ರಬಂಧಕರು, ಸಹಾಯಕ ಪ್ರಬಂಧಕರು ಮತ್ತು ಕಛೇರಿ ಸಹಾಯಕರುಗಳು ಉಪಸ್ಥಿತರಿದ್ದರು.