ಗೋಣಿಕೊಪ್ಪಲು, ಸೆ. ೨೯ : ಸವಿತಾ ಸಮಾಜದಲ್ಲಿನ ಒಗ್ಗಟ್ಟು ಮತ್ತಷ್ಟು ಗಟ್ಟಿಯಾಗಬೇಕು. ಆಚಾರ ವಿಚಾರ, ಪದ್ಧತಿ, ಪರಂಪರೆ ನಮ್ಮ ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡುವ ಜವಾಬ್ದಾರಿ. ಸಮಾಜ ಬಾಂಧವರ ಮೇಲಿದೆ ಈ ನಿಟ್ಟಿನಲ್ಲಿ ಕೊಡಗಿನ ಸಾಂಪ್ರದಾಯಿಕ ಹಬ್ಬಗಳನ್ನು ಯಶಸ್ವಿಯಾಗಿ ಆಚರಿಸುವಂತಾಗಬೇಕು ಎಂದು ಕೊಡವ ಭಾಷಿಕ ಸಮುದಾಯಗಳ ಕೂಟದ ಅಧ್ಯಕ್ಷÀ ಡಾ. ಮೇಚಿರ ಸುಭಾಶ್ ನಾಣಯ್ಯ ಕರೆ ನೀಡಿದರು.
ಗೋಣಿಕೊಪ್ಪ ಸಮೀಪದ ಕೈಕೇರಿ ಸವಿತಾ ಸಮಾಜದ ಸಭಾಂಗಣದಲ್ಲಿ ಕೊಡಗು ಕೊಡವ ಸವಿತಾ ಸಮಾಜ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೨ನೇ ವರ್ಷದ ಕೈಲ್‌ಪೊಳ್ದ್ ನಮ್ಮೆ ಒತ್ತೋರ್ಮೆ ಕೂಟದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಇವರು, ಕೊಡಗಿನಲ್ಲಿ ಮೂಲ ನಿವಾಸಿಗಳು ತಮ್ಮ ಪದ್ಧತಿ ಪರಂಪರೆಯನ್ನು ಉಳಿಸುವತ್ತ ಹೆಚ್ಚಿನ ನಿಗಾವಹಿಸಬೇಕು. ಈ ನಿಟ್ಟಿನಲ್ಲಿ ಸವಿತಾ ಸಮಾಜವು ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ನಮ್ಮ ಮುಂದಿನ ಪೀಳಿಗೆಗೆ ಸಂಪ್ರದಾಯಗಳನ್ನು ಪಾಲಿಸುವ ಕೆಲಸ ನಿರ್ವಹಿಸುತ್ತಿದೆ. ಸಮಾಜ ಬಾಂಧವರು ವಾರ್ಷಿಕವಾಗಿ ಒಂದೆಡೆ ಸೇರುವ ಪ್ರಯತ್ನ ನಡೆದಿರುವುದು ಶ್ಲಾಘನೀಯ ಎಂದರು.
ಕಾಫಿ ಬೆಳೆಗಾರ, ಕೊಡವ ಭಾಷಿಕ ಸಮುದಾಯದ ಕೂಟದ ಸದಸ್ಯ ವೇದಪಂಡ ಕಿರಣ್ ಮಾತನಾಡಿ, ಸವಿತ ಸಮಾಜವು ಸಣ್ಣ ಜನಸಂಖ್ಯೆಯನ್ನು ಹೊಂದಿದೆ. ಭಾಷಿಕ ಸಮುದಾಯಗಳು ಒಟ್ಟಾಗಿ ಸೇರುವ ಮೂಲಕ ನಮ್ಮ ಪದ್ದತಿ ಪರಂಪರೆಯನ್ನು ಉಳಿಸುವ ಮೂಲಕ ಯುವ ಪೀಳಿಗೆಗೆ ಕೊಡುಗೆಯಾಗಿ ನೀಡಬೇಕು. ಇದರಿಂದ ನಮ್ಮ ಪದ್ದತಿ ಪರಂಪರೆ ಉಳಿಸಲು ಸಾಧ್ಯವಾಗಲಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಮಾಜದ ಅಧ್ಯಕ್ಷ ತಾಪನೇರ ಸಾಬು, ಚದುರಿ ಹೋಗಿರುವ ಸವಿತಾ ಸಮಾಜ ಬಾಂಧವರನ್ನು ಒಂದೆಡೆ ಸೇರಿಸುವ ಪ್ರಯತ್ನ ಆರಂಭಗೊAಡಿದೆ. ಕಳೆದ ೨ ವರ್ಷದಿಂದ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಒಂದೆಡೆ ಸೇರುವ ಪ್ರಯತ್ನ ಯಶಸ್ವಿಯಾಗುತ್ತಿದೆ. ಹೊರ ಜಿಲ್ಲೆಯಲ್ಲಿರುವ ಸಮಾಜ ಬಾಂಧವರು ಕೈಲ್‌ಪೊಳ್ದ್ ನಮ್ಮೆಯ ಅಂಗವಾಗಿ ಒಂದೆಡೆ ಸೇರುತ್ತಿದ್ದಾರೆ. ಇದರಿಂದ ಸಮಾಜದಲ್ಲಿ ಪರಸ್ಪರ ಪ್ರೀತಿ ಬಾಂಧವ್ಯ ವೃದ್ದಿಸಲು ಅವಕಾಶ ವಾಗುತ್ತಿದೆ. ಮೊದಲ ಪ್ರಯತ್ನವಾಗಿ ಸಮುದಾಯದಲ್ಲಿರುವ ನಿವೃತ್ತ ಯೋಧರನ್ನು ಗುರುತಿಸುವ ಮೂಲಕ ಗೌರವಿಸಲಾಗುತ್ತಿದೆ.
ಸಂಸ್ಕೃತಿ, ಆಚಾರ ವಿಚಾರಗಳಿಗೂ ಒತ್ತು ನೀಡಲಾಗುತ್ತಿದೆ ಎಂದರು. ವೇದಿಕೆಯಲ್ಲಿ ಕೊಡವ ಭಾಷಿಕ ಸವಿತಾ ಸಮಾಜದ ಕಾರ್ಯದರ್ಶಿ ಹಲ್ಚಿರ ದೇವಯ್ಯ, ನಿರ್ದೇಶಕರುಗಳಾದ ಹೊನ್ನೆಪಂಡ ಮನು, ಪೂಣಚ್ಚೀರ ಮನೋಜ್, ವೇದಪಂಡ ಆರ್. ಬಿದ್ದಪ್ಪ, ತಾಪನೇರ ಮಹೇಶ್, ವೇದಪಂಡ ವಿಷ್ಮ, ಹಲ್ಚಿರ ಎಂ.ತಮ್ಮುಣಿ, ಹಲವು ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಪೂಣಚ್ಚೀರ ಸುಮನ್ ಮನೋಜ್ ನಿರೂಪಿಸಿ, ಪ್ರಜ್ಞ, ತೃಷ್ಯ, ದಿಶಾ ಪ್ರಾರ್ಥಿಸಿ, ತಾಪನೇರ ಸುಷ್ಮಿ ಸ್ವಾಗತಿಸಿ, ಹಲ್ಚಿರ ರೋನಿಷ ವಂದಿಸಿದರು.
ಕಾರ್ಯಕ್ರಮದ ಅಂಗವಾಗಿ ಮುಂಜಾನೆಯಿAದ ಸಂಜೆಯವರೆಗೂ ವಿವಿಧ ಪೈಪೋಟಿಗಳು ನಡೆದವು. ಕೊಡವ ಸಾಂಪ್ರದಾಯಿಕ ಉಡುಗೆ ತೊಟ್ಟ ಮಹಿಳೆಯರು ಹಾಗೂ ಪುರುಷರು ಸವಿತಾ. ಸಮಾಜದಿಂದ ಮೆರವಣಿಗೆಯ ಮೂಲಕ ತೆರಳಿ ಸಮೀಪದ ಮೈದಾನದಲ್ಲಿ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಗೆ ಹಲ್ಚಿರ ಬೋಪಣ್ಣ ಚಾಲನೆ ನೀಡಿದರು. ಸಾಂಪ್ರದಾಯಿಕ ಪೂಜೆ ಸಲ್ಲಿಕೆಯ ನಂತರ ಆಕಾಶಕ್ಕೆ ಗುಂಡು ಹಾರಿಸುವ ಮೂಲಕ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.
ಕೈಲ್‌ಪೊಳ್ದ್ ನಮ್ಮೆಯ ಅಂಗವಾಗಿ ಸಾಂಪ್ರದಾಯಿಕ ಪೂಜೆಯನ್ನು ಸಲ್ಲಿಸಿದ ತರುವಾಯ ಮಕ್ಕಳು, ಮಹಿಳೆಯರಿಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ವಿಜೇತರಿಗೆ ಬಹುಮಾನಗಳನ್ನು ನೀಡಲಾಯಿತು. ಯುವತಿಯರು ನಡೆಸಿಕೊಟ್ಟ ಉಮ್ಮತ್ತಾಟ್ ಹಾಗೂ ಕೊಡವ ನೃತ್ಯ ಕಾರ್ಯಕ್ರಮವು ಗಮನ ಸೆಳೆಯಿತು. ಕಾರ್ಯಕ್ರಮದ ಅಂಗವಾಗಿ ಸೇನೆಯಲ್ಲಿ ನಿವೃತ್ತಿ ಹೊಂದಿದ ಯೋಧರನ್ನು ಗುರುತಿಸಿ ಗೌರವಿಸಲಾಯಿತು.ಅಲ್ಲದೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕೊಡವ ಭಾಷಿಕ ಸಮುದಾಯದ ಅಧ್ಯಕ್ಷ ಕೂಟದ ಡಾ. ಮೇಚಿರ ಸುಭಾಶ್ ನಾಣಯ್ಯನವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕೈಲ್‌ಪೊಳ್ದ್ ನಮ್ಮೆಯ ಅಂಗವಾಗಿ ವಿವಿಧ ಭಾಗದಿಂದ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.