ವೀರಾಜಪೇಟೆ, ಸೆ. ೨೯: ಸಂಸ್ಕೃತಿಗಳ ಸಮಾಗಮದಿಂದ ಸಮುದಾಯ ಸಂಘಟನೆಗಳ ಏಳಿಗೆ ಸಾದ್ಯವಾಗುತ್ತದೆ. ವಿವಿಧತೆಯಲ್ಲಿ ಏಕತೆ ಎನ್ನುವುದು ದಿವ್ಯ ಮಂತ್ರವಾಗಬೇಕು ಎಂದು ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರು ಮತ್ತು ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಅವರು ಹೇಳಿದರು.

ಶ್ರೀ ಮುತ್ತಪ್ಪನ್ ಮಲಯಾಳಿ ಸಮಾಜ ಮೀನುಪೇಟೆ ವೀರಾಜಪೇಟೆ ವತಿಯಿಂದ ಶ್ರೀ ಚೈತನ್ಯ ಮಠಪುರ ಮುತ್ತಪ್ಪನ್ ದೇವಾಲಯದ ಆವರಣದಲ್ಲಿ ೧೭ನೇ ವರ್ಷದ ಓಣಂ ಹಬ್ಬದ ಆಚರಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಶಾಸಕರು. ಕೊಡಗು ಜಿಲ್ಲೆಗೂ ನೆರೆಯ ಕೇರಳ ರಾಜ್ಯಕ್ಕೂ ಅವಿನಾಭಾವ ಸಂಬAಧವಿದೆ. ಕೊಡಗಿನಲ್ಲಿ ಆರಾಧಿಸುವ ಅನೇಕ ದೈವ ಕೇರಳ ರಾಜ್ಯದಿಂದ ಬಂದಿರುವುದಾಗಿದೆ. ಮಲಯಾಳಿ ಸಮಾಜ ಬಾಂಧವರು ಆಚರಿಸುವ ಓಣಂ ಹಬ್ಬವು ವಿಶಿಷ್ಟ ಆಚರಣಾ ಪದ್ದತಿಯಾಗಿದೆ. ಧೀಮಂತ ಸಂಸ್ಕೃತಿ, ಸಂಪ್ರದಾಯ, ಆಚರಣಾ ವಿಧಿ ವಿಧಾನಗಳು, ಆಚಾರ ವಿಚಾರಗಳು ವಿನಾಶವಾಗದೆ.. ಎಂದಿಗೂ ಜೀವಂತವಾಗಿಸಿರುವ ನಿಟ್ಟಿನಲ್ಲಿ ಸಮುದಾಯಗಳು ಸಂಘಟನೆಗಳು ಪ್ರಯತ್ನ ಪಡಬೇಕು. ಸಂಸ್ಕೃತಿಗಳ ಅನಾವರಣಕ್ಕೆ ಸಂಘಟನೆಯ ಕಾರ್ಯಕ್ರಮಗಳು ಪೂರಕವಾಗಿದೆ. ಸÀಮುದಾಯ ಬೆಳೆಯುವುದರೊಂದಿಗೆ ಸಮಾಜಿಕ ಕಳಕಳಿಗೂ ಗೌರವ ಸೂಚಿಸುವಂತಾಗಬೇಕು ಎಂದು ಹೇಳಿದರು.

ಕರ್ನಾಟಕ ರಾಜ್ಯ ವಿಧಾನ ಪರಿಷತ್ ಸದಸ್ಯರಾದ ಎಂ.ಪಿ. ಕುಶಾಲಪ್ಪ ಅವರು ಮಾತನಾಡಿ, ಸÀಮುದಾಯ, ಸಂಪ್ರದಾಯ, ಸಂಸ್ಕೃತಿ ಅಚಾರ ವಿಚಾರ ಪದ್ದತಿಗಳು ಎಂದಿಗೂ ಶಾಶ್ವತ. ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ. ಮಲಯಾಳಿಗರ ಹಬ್ಬಗಳಲ್ಲಿ ಓಣಂ ಹಬ್ಬವು ವಿಶಿಷ್ಟ ಸ್ಥಾನ ಪಡೆದಿದೆ. ಭೌವ್ಯ ಭಾರತದ ಸಾಂಪ್ರದಾಯಿಕ ಸಂಸ್ಕೃತಿಗಳು ಮರೆಯಾಗದೆ ಜೀವಂತವಾಗಿರಿಸಬೇಕು ಎಂದು ಹೇಳಿದರು.

ಪುರಸಭೆಯ ಅಧ್ಯಕ್ಷರಾದ ಎಂ.ಕೆ. ದೇಚಮ್ಮ ಕಾಳಪ್ಪ ಅವರು ಮಾತನಾಡಿ ನಾಡಿನಸರ್ವತೋಮುಖ ಅಭಿವೃದ್ಧಿಗೆ ಮಲಯಾಳಿ ಸಮಾಜದ ಕೊಡುಗೆ ಅಪಾರ, ಸಂಸ್ಕೃತಿಗಳನ್ನುಬಿAಬಿಸಲು ಇಂತಹ ಕಾರ್ಯಕ್ರಮಗಳು ಪೂರಕವಾಗಿದ್ದು, ಮುಂದಿನ ಪೀಳಿಗೆಗೆ ತಿಳಿಸುವ ಕಾರ್ಯವಾಗಬೇಕು ಎಂದರು.

ಶ್ರೀ ಮುತ್ತಪ್ಪ ಮಲಯಾಳಿ ಸಮಾಜ ಅದ್ಯಕ್ಷರಾದ ಪಿ.ಜಿ. ಸುಮೇಶ್ ಅವರು ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಮಾತನಾಡಿ ಸಂಘಟನೆಯು ಸ್ಥಾಪನೆಗೊಂಡು ೧೬ ವರ್ಷಗಳು ಸಂದಿದೆ. ಸ್ಥಾಪಕರಾದ ದಿ. ಇ.ಸಿ. ಜೀವನ್ ಅವರ ಪರಿಕಲ್ಪನೆಗೆ ಮಿಗಿಲಾಗಿಸÀಮುದಾಯ ಬಾಂಧವರಿಗೆ ಹೊಸ ಹೊಸ ಕಾರ್ಯಕ್ರಮ ನೀಡುತ್ತಾ ಬಂದಿದೆ.

ಹಿಂದೂ ರುಧ್ರ ಭೂಮಿ ಅಭಿವೃದ್ಧಿಗಾಗಿ ಸಹಾಯ ಧನ ನೀಡುವಂತೆ ಸಂಘಟನೆಯ ವತಿಯಿಂದ ವಿಧಾನ ಪರಿಷತ್ ಸದಸ್ಯರು ಮತ್ತು ಶಾಸಕರಿಗೆ ಮನವಿ ಪತ್ರ ನೀಡಲಾಯಿತು. ಮನವಿ ಸ್ವೀಕರಿಸಿದ ಶಾಸಕದ್ವಯರು ತಲಾ ರೂ. ೫ ಲಕ್ಷ ನೀಡುವ ಭರವಸೆ ನೀಡಿದರು.

ಪುರಸಭೆಯ ಸದಸ್ಯರಾದ ಎಂ.ಕೆ. ಕುಟ್ಟಪ್ಪ, ಹಮೀದ್, ಎಸ್.ಎನ್.ಡಿ.ಪಿ ವೀರಾಜಪೇಟೆ ಶಾಖೆಯ ಅಧ್ಯಕ್ಷರಾದ ನಾರಾಯಣ, ಶ್ರೀ ಚೈತನ್ಯ ಮಠಪುರ ಮುತ್ತಪ್ಪ ದೇವಾಲಯದ ಕಾರ್ಯದರ್ಶಿಕೆ.ಪಿ. ಪ್ರಭಾಕರ, ಹಿಂದೂ ಮಲಯಾಳಿ ಸಮಾಜ ಮಹಿಳಾ ಘಟಕದ ಅಧ್ಯಕ್ಷರಾದ ಶೀಭಾ ಪ್ರಥ್ವಿನಾಥ್ ಉಪಸ್ಥಿತರಿದ್ದರು.

ಓಣಂ ಆಚರಣೆಯ ಪ್ರಯುಕ್ತ ಮಲಯಾಳಿ ಸಂಸ್ಕೃತಿಯನ್ನು ಬಿಂಬಿಸುವ ಕಥಕ್ಕಳಿ, ಮೋಹಿನಿ ಅಟ್ಟಂ ನ ರೂಪಕದ ಪ್ರಸ್ತುತಿಯೊಂದಿಗೆ ಮಾವೇಲಿ ಚಕ್ರವರ್ತಿಯನ್ನು ದೇಗುಲದಲ್ಲಿ ಬರಮಾಡಿಕೊಂಡು, ಪಟ್ಟ್ ಮುಂಡ್ ಪಟ್ಟ್ ಸ್ಯಾರಿ ಧರಿಸಿದ ಸಮುದಾಯ ಬಾಂಧವರು ಮೆರವಣಿಗೆಯಲ್ಲಿ ಸಾಗಿದರು, ಕೇರಳ ರಾಜ್ಯದ ಚಿಂಗಾರಿ ಮೇಳಂ. ಚಂಡೆ ಮೇಳ ಹಾಗೂ ದೇವಿಯ ವೇಷಭೂಷಣ ಧರಿಸಿದ ತಂಡಗಳು ಮೆರವಣಿಗೆಗೆ ಸಾಥ್ ನೀಡಿದವು. ದೇಗುಲದ ಮುಂಭಾಗದಿAದ ಸಾಗಿದ ಶೋಭಯಾತ್ರೆಯು. ಖಾಸಗಿ ಬಸ್ಸು ನಿಲ್ದಾಣ, ಸುಣ್ಣದ ಬೀದಿ, ಮಾಂಸ ಮಾರುಕಟ್ಟೆ, ಕೆ.ಎಸ್.ಆರ್.ಟಿ.ಸಿ. ಬಸ್ಸು ನಿಲ್ದಾಣ, ದೊಡ್ಡಟ್ಟಿ ಚೌಕಿ, ಮುಖ್ಯ ರಸ್ತೆಯಿಂದ ದೇಗುಲದಲ್ಲಿ ಅಂತಿಮವಾಯಿತು.

ದೇಗುಲದ ಆವರಣದಲ್ಲಿ ಕೇರಳದ ವಿಶಿಷ್ಟ ಖಾದ್ಯಗಳ ಓಣಂ ಸದ್ಯ ವಿಶೇಷ ಭೋಜನ ಏರ್ಪಡಿಸಲಾಗಿತ್ತು.

ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ ಪರೀಕ್ಷೆಯಲ್ಲಿ ಉನ್ನತ ಅಂಕ ಗಳಿಸಿದ ವಿದ್ಯಾರ್ಥಿಗಳು, ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ವಿಶಿಷ್ಟ ಸಾಧಕರು, ದೇಗುಲದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ದೈವ ನರ್ತಕರು, ಚಂಡೆ ವಾದಕರು ಮತ್ತು ಇತರರನ್ನು ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.

ವಿದ್ಯಾರ್ಥಿಗಳಿಂದ ತಿರುವಾದಿರ ನೃತ್ಯ, ಮಾವೇಲಿ ಚಕ್ರವರ್ತಿಯ ಹಿನ್ನೆಲೆಉಳ್ಳ ನೃತ್ಯ ರೂಪಕಹಾಗೂ ಮೆಗಾ ಶೋ ಕಾರ್ಯಕ್ರಮ ವೇದಿಕೆಯಲ್ಲಿ ಪ್ರದರ್ಶನ ಕಂಡಿತು.

ಶ್ರೀ ಮುತ್ತಪ್ಪ ಮಲಯಾಳಿ ಸಮಾಜ ವೀರಾಜಪೇಟೆಯ ಪದಾಧಿಕಾರಿಗಳು, ಶ್ರೀ ಚೈತನ್ಯ ಮಠಪುರ ಮುತ್ತಪ್ಪನ್ ದೇವಾಲಯದ ಆಡಳಿತ ಮಂಡಳಿಯ ಸದಸ್ಯರು,ಓಣಂ ಆಚರಣಾ ಸಮಿತಿಯ ಸದಸ್ಯರು ಹಾಜರಿದ್ದರು.