ಮಡಿಕೇರಿ, ಸೆ. ೩೦: ಮಡಿಕೇರಿ ನಗರ ದಸರಾ ಸಮಿತಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ ವತಿಯಿಂದ ನಗರದ ಗಾಂಧಿ ಮೈದಾನದಲ್ಲಿ ಕಲಾ ಸಂಭ್ರಮ ವೇದಿಕೆಯಲ್ಲಿ ಜನೋತ್ಸವ ಅಂಗವಾಗಿ ಏರ್ಪಡಿಸಲಾಗಿರುವ ಸಾಂಸ್ಕೃತಿಕ ಕಾರ್ಯಕ್ರಮದ ಎಂಟನೇ ದಿನದ ಕಾರ್ಯಕ್ರಮದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳು ಜರುಗಿದವು. ವೀರಾಜಪೇಟೆಯ ನಾಟ್ಯಾಂಜಲಿ ನೃತ್ಯ ಸಂಸ್ಥೆಯಿAದ ಸಾಂಸ್ಕೃತಿಕ ವೈವಿಧ್ಯ, ಮಂಗಳೂರು ಯಶಸ್ವಿ ಗ್ರೂಪ್‌ನಿಂದ ತುಳುನಾಡು ಸಂಸ್ಕೃತಿ ವೈವಿಧ್ಯ, ಹುಬ್ಬಳ್ಳಿಯ ಭೂಮಿಕಾ, ದೀಪಿಕಾ ಸಹೋದರಿಯರು ಹಾಗೂ ಗಣೇಶ್ ಅವರಿಂದ ಗಾನಸುಧೆ, ಸುಳ್ಯದ ಪ್ಯೂಷನ್ ನೃತ್ಯ ಸಂಸ್ಥೆಯಿAದ ವೈವಿಧ್ಯಮಯ ಕಾರ್ಯಕ್ರಮ ಸೇರಿದಂತೆ ಇತರ ಕಾರ್ಯಕ್ರಮಗಳು ಜನಮನಸೂರೆಗೊಂಡವು.