ಮಡಿಕೇರಿ, ಸೆ. ೩೦: ಮಡಿಕೇರಿ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ಪಿಕಾರ್ಡ್ ಬ್ಯಾಂಕ್) ತನ್ನ ಸಾಧನೆಗಾಗಿ ರಾಜ್ಯಮಟ್ಟದಲ್ಲಿ ಮೂರು ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಈ ಬಗ್ಗೆ ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬ್ಯಾಂಕ್ನ ಅಧ್ಯಕ್ಷ ಎ.ಕೆ. ಮನು ಮುತ್ತಪ್ಪ ಹಾಗೂ ಪದಾಧಿಕಾರಿಗಳು ಮಾಹಿತಿ ನೀಡಿದರು.
ಮಡಿಕೇರಿ ಪಿಕಾರ್ಡ್ ಬ್ಯಾಂಕ್ ೨೦೧೭-೧೮, ೨೦೧೮-೧೯, ೨೦೨೩-೨೪ ಹಾಗೂ ೨೦೨೪-೨೫ನೇ ಸಾಲಿನಲ್ಲಿ ೧೮೩ ಪಿಕರ್ಡ್ ಬ್ಯಾಂಕ್ಗಳ ಪೈಕಿ ಅತ್ಯುತ್ತಮ ಬ್ಯಾಂಕ್ ಎಂದು ರಾಜ್ಯದಲ್ಲಿ ನಾಲ್ಕು ಬಾರಿ ಪ್ರಥಮ ಸ್ಥಾನ ಪಡೆದಿದ್ದು ಹಾಗೂ ವಸೂಲಾತಿಯಲ್ಲಿಯೂ ೧೮೩ ಪಿಕರ್ಡ್ ಬ್ಯಾಂಕ್ಗಳ ಪೈಕಿ ರಾಜ್ಯದಲ್ಲಿ ೨೦೨೩-೨೪, ೨೦೨೪-೨೫ ನೇ ಸಾಲಿನಲ್ಲಿ ಎರಡು ಬಾರಿ ಪ್ರಥಮ ಸ್ಥಾನ ಪಡೆದ ಹೆಗ್ಗಳಿಕೆ ಹೊಂದಿದೆ. ಸೆ. ೨೫ ರಂದು ಬೆಂಗಳೂರಿನ ಕಾಸ್ಕರ್ಡ್ ಬ್ಯಾಂಕಿನ ಇದೀಗ ವಾರ್ಷಿಕ ಮಹಾಸಭೆಯಲ್ಲಿ ರಾಜ್ಯದ ೧೮೩ ಬ್ಯಾಂಕ್ಗಳ ಪೈಕಿ ಮಡಿಕೇರಿ ಪಿಕರ್ಡ್ ಬ್ಯಾಂಕ್ ಈ ಸಾಲಿನಲ್ಲಿ ಕಾಸ್ಕರ್ಡ್ ಬ್ಯಾಂಕ್ ನೀಡುವ ಎರಡು ಅತ್ಯುತ್ತಮ ಪ್ರಶಸ್ತಿಗಳಾದ ಶೇಕಡವಾರು ಅತೀ ಹೆಚ್ಚು ವಸೂಲಾತಿ (ಶೇ. ೯೮.೬೦) ಹಾಗೂ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಎರಡು ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದೆ ಹಾಗೂ ಜಿಲ್ಲಾ ಮಟ್ಟದಲ್ಲಿ ನೀಡುವ ಪ್ರಶಸ್ತಿಯನ್ನು ೧೯ನೇ ಬಾರಿ ಪಡೆದಿದೆ. ಈ ಹಿನ್ನೆಲೆಯಲ್ಲಿ ತಾ. ೨೫ ರಂದು ನಡೆದ ಬೆಂಗಳೂರು ಕಾಸ್ಕರ್ಡ್ ಬ್ಯಾಂಕ್ನಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಸನ್ಮಾನ ಮಾಡಲಾಯಿತು. ಈ ಸಂದರ್ಭದಲ್ಲಿ ಕಾಸ್ಕರ್ಡ್ ಬ್ಯಾಂಕ್ ಅಧ್ಯಕ್ಷರು, ಶಾಸಕರು ಆಗಿರುವ ಕೆ ಷಡಕ್ಷರಿ ಹಾಗೂ ಕಾಸ್ಕರ್ಡ್ ಬ್ಯಾಂಕಿನ ಎಲ್ಲಾ ನಿರ್ದೇಶಕರು, ಶಾಸಕರಾಗಿರುವ ಎಂ. ಮಂಜು ಹಾಗೂ ಕಾಸ್ಕರ್ಡ್ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕರಾದ (ಎಂಡಿ) ಪ್ರಸನ್ನಕುಮಾರ್ ವಿ.ಕೆ. ಹಾಗೂ ಆಡಳಿತ ಮಂಡಳಿಯವರು ಹಾರಿದ್ದರು. ೨೦೨೪-೨೫ನೇ ಸಾಲಿನಲ್ಲಿ ಬ್ಯಾಂಕ್ಗೆ ರಾಜ್ಯಮಟ್ಟದಲ್ಲಿ ಅತ್ಯುತ್ತಮ ಮತ್ತು ಕಳೆದ ೧೯ ವರ್ಷಗಳಿಂದ ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನ ಬಂದಿರುತ್ತದೆ.
ಬ್ಯಾAಕ್ ಸತತವಾಗಿ ೧೯ ವರ್ಷಗಳಿಂದ ಲಾಭದಲ್ಲಿದ್ದು, ಸದಸ್ಯರಿಗೆ ಶೇ. ೮ ರಷ್ಟು ಡಿವಿಡೆಂಟ್ ನೀಡಲಾಗಿದೆ. ಅದರು ಅಲ್ಲದೇ ಆಕರ್ಷಕ ಬಡ್ಡಿ ದರದಲ್ಲಿ ನಿಶ್ಚಿತ ಠೇವಣಿಯನ್ನು ಪಡೆಯಲಾಗುತ್ತಿದೆ ಎಂದು ಮನು ಮುತ್ತಪ್ಪ ತಿಳಿಸಿದರು. ಬ್ಯಾಂಕ್ ೧೩.೦೨.೧೯೫೭ರಲ್ಲಿ ಪ್ರಾರಂಭಗೊAಡು, ಕೊಡಗು ವ್ಯಾಪ್ತಿಯನ್ನು ಒಳಗೊಂಡು ೨೫ ಸದಸ್ಯರನ್ನು ಹಾಗೂ ರೂ. ೩೦೦೦ ಷೇರು ಬಂಡವಾಳದೊAದಿಗೆ ಪ್ರಾರಂಭವಾಗಿರುತ್ತದೆ. ಇದು ೨೭೭೨ ಸದಸ್ಯರನ್ನು ಹೊಂದಿದ್ದು, ಪಾಲು ಬಂಡವಾಳ ರೂ. ೧೬೦.೬೦ ಲಕ್ಷ ಇರುತ್ತದೆ. ತಾಲೂಕಿಗೆ ಖಾಲಿ ಜಮ್ಮಾ ಬಾಣೆ ಜಮೀನಿಗೆ ಸಾಲ ಸೌಲಭ್ಯವನ್ನು ನೀಡಿದ ಪ್ರಥಮ ಬ್ಯಾಂಕಾಗಿರುತ್ತದೆ. ಇದರಿಂದ ತಾಲೂಕಿನ ಸಾವಿರಾರು ಎಕರೆಯಲ್ಲಿ ಕಾಫಿ ತೋಟ ಹಾಗೂ ಕಾಳುಮೆಣಸು, ಅಡಿಕೆ, ತೆಂಗು, ರಬ್ಬರ್ ಸಂಸ್ಕರಣ ಘಟಕ, ಟ್ರಾö್ಯಕ್ಟರ್, ಸ್ಪಿçÃಂಕ್ಲರ್ ಸೆಟ್, ವಾಹನ ಸಾಲ, ರಬ್ಬರ್ ತೋಟದ ಅಭಿವೃದ್ಧಿಗೆ ಇನ್ನಿತರ ಸಾಲ ನೀಡಲಾಗುತ್ತಿದೆ. ಇದರ ಜೊತೆಗೆ ಸಕಾಲದಲ್ಲಿ ಯಾವುದೇ ಪ್ರತಿಫಲಾಪೇಕ್ಷ ಇಲ್ಲದೆ ಸಾಲ ಮರುಪಾವತಿ ಮಾಡುತ್ತಿದೆ. ಸದಸ್ಯರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯದಲ್ಲಿಯೇ ಪ್ರಪ್ರಥಮ ಬ್ಯಾಂಕಾಗಿ ಚಾಲ್ತಿ ಕಂತನ್ನು ಮರುಪಾವತಿ ಮಾಡುವ ಸಾಲ ಪಡೆದ ಸದಸ್ಯರಿಗೆ ಲಾಭದಲ್ಲಿ ಕಾದಿರಿಸಿದ ಮೊಬಲಗಿನಿಂದ ರೂ. ೫೦೦೦ ರವರೆಗೆ ಬಡ್ಡಿ ರಿಯಾಯಿತಿ ನೀಡುತ್ತಿರುವುದು ಬ್ಯಾಂಕಿಗೆ ಹೆಗ್ಗಳಿಕೆಯಾಗಿರುತ್ತದೆ. ಪ್ರತಿವರ್ಷ ಸಾಲ ಪಡೆದ ರೈತ ಸದಸ್ಯರ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಸನ್ಮಾನಿಸಲಾಗುತ್ತದೆ.
ಬ್ಯಾಂಕಿನ ೨೦೨೪-೨೫ನೇ ಸಾಲಿನಲ್ಲಿ ೮೯,೧೫,೫೬,೬೩೧ ವ್ಯವಹಾರ ಮಾಡಿರುತ್ತದೆ. ಬ್ಯಾಂಕಿನಲ್ಲಿ ಠೇವಣಿ ರೂ. ೧೦,೫೧,೦೩,೫೬೦ ಠೇವಣಿ ಸಂಗ್ರಹವಾಗಿರುತ್ತದೆ. ಹಾಗೆಯೇ ಸಾಲದ ಹೊರಬಾಕಿ ರೂ. ೨೫,೨೨,೬೪,೨೫೩ ಇರುತ್ತದೆ. ಬ್ಯಾಂಕ್ ೨೦೨೪-೨೫ನೇ ಸಾಲಿನಲ್ಲಿ ರೂ. ೨,೦೦,೮೩,೯೨೮ ರಷ್ಟು ಲಾಭ ಗಳಿಸಿರುತ್ತದೆ ಎಂದು ವಿವರವಿತ್ತರು.
ಗೋಷ್ಠಿಯಲ್ಲಿ ಬ್ಯಾಂಕ್ನ ಉಪಾಧ್ಯಕ್ಷ ನಾಪಂಡ ರ್ಯಾಲಿ ಮಾದಯ್ಯ, ನಿರ್ದೇಶಕರಾದ ಹೆಚ್.ಎಸ್. ವಾಸಪ್ಪ, ಅಲ್ಲಾರಂಡ ಬೀನಾ ಬೊಳ್ಳಮ್ಮ, ಸಿಇಓ ಸುಪರ್ಣ ಹಾಗೂ ಚಂದ್ರಶೇಖರ್ ಉಪಸ್ಥಿತರಿದ್ದರು.