ಕೂಡಿಗೆ, ಸೆ. ೩೦: ಕೂಡುಮಂಗಳೂರು ಗ್ರಾಮ ಪಂಚಾಯಿತಿಯ ವತಿಯಿಂದ ಸ್ವಚ್ಛ ಸರ್ವೇಕ್ಷಣ ೨೦೨೫ ಅಡಿಯಲ್ಲಿ ಹಾರಂಗಿಯ ಅಣೆಕಟ್ಟೆಯ ಮುಂಭಾಗದಲ್ಲಿ ಪ್ರವಾಸಿ ದಿವಸ ಆಚರಣೆಯನ್ನು ನಡೆಸಲಾಯಿತು.

ಪಂಚಾಯಿತಿ ಅಧ್ಯಕ್ಷ ಭಾಸ್ಕರ್ ನಾಯಕ್ ನೇತೃತ್ವದಲ್ಲಿ ಹಾರಂಗಿ ಜಲಾಶಯಕ್ಕೆ ಭೇಟಿ ನೀಡಿದ ಪ್ರವಾಸಿಗರೊಂದಿಗೆ ಪ್ರವಾಸಿ ಸ್ಥಳವಾದ ಹಾರಂಗಿ ಅಣೆಕಟ್ಟೆಯ ಹತ್ತಿರ ಸ್ವಚ್ಛತೆ ಕಾಪಾಡುವ ದೃಷ್ಟಿಯಲ್ಲಿ ರಸ್ತೆ ಬದಿಯಲ್ಲಿರುವ ಹಾಗೂ ಕಸದ ಬುಟ್ಟಿಯಲ್ಲಿರುವ ಕಸವನ್ನು ಸಂಗ್ರಹಿಸಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಲಾಯಿತು.

ಈ ಸಂದರ್ಭದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂತೋಷ್ ಹಾಗೂ ಸದಸ್ಯ ಮಣಿಕಂಠ ಮತ್ತು ಸಿಬ್ಬಂದಿಗಳು ಹಾಗೂ ಪ್ರವಾಸಿಗರು ಹಾಜರಿದ್ದರು.