ಪೊನ್ನಂಪೇಟೆ, ಸೆ. ೩೦: ತಾ. ೨೭ ರಂದು ಮೈಸೂರು ವಿಶ್ವವಿದ್ಯಾನಿಲಯದ ಬಿ.ಎಂ.ಶ್ರೀ. ಸಭಾಂಗಣದಲ್ಲಿ ಜರುಗಿದ ವಿಶ್ವವಿಖ್ಯಾತ ಮೈಸೂರು ದಸರಾ ಪ್ರಬುದ್ಧ ಕವಿಗೋಷ್ಠಿಯಲ್ಲಿ ಗೋಣಿಕೊಪ್ಪಲು ಕಾವೇರಿ ಕಾಲೇಜು ಕನ್ನಡ ವಿಭಾಗದ ಪ್ರಾಧ್ಯಾಪಕಿ ಡಾ. ರೇವತಿ ಸಿ.ಎಂ. ಕೊಡವ ಭಾಷಾ ಕವಯಿತ್ರಿಯಾಗಿ ಭಾಗವಹಿಸಿದ್ದರು.

ಕೊಡವ, ಕೊಂಕಣಿ ಮತ್ತು ತುಳು ಭಾಷೆಗಳನ್ನು ಒಳಗೊಂಡAತೆ ೩೪ ಪ್ರಬುದ್ಧ ಕವಿಗಳ ಆಹ್ವಾನಿತ ಕವಿಗೋಷ್ಠಿ ಇದಾಗಿತ್ತು.