ಸಿದ್ದಾಪುರ, ಸೆ. ೩೦: ಉರುಳಿಗೆ ಸಿಲುಕಿ ಜಿಂಕೆಯೊAದು ಸಾವನ್ನಪ್ಪಿರುವ ಘಟನೆ ಮಾಲ್ದಾರೆ ಗ್ರಾಮದ ಮೀಸಲು ಅರಣ್ಯ ಪ್ರದೇಶದಲ್ಲಿ ನಡೆದಿದೆ. ಕುಶಾಲನಗರ ವಲಯ ಅರಣ್ಯ ವ್ಯಾಪ್ತಿಗೆ ಒಳಪಡುವ ದುಬಾರೆ ಅರಣ್ಯ ಶಾಖೆಯ ಅವರೆಗುಂದ ಮೀಸಲು ಅರಣ್ಯ ವ್ಯಾಪ್ತಿಯ ಒಳಗೆ ಅಂದಾಜು ೩ರಿಂದ ೪ ವರ್ಷ ಪ್ರಾಯದ ಗಂಡು ಜಿಂಕೆ ಉರುಳಿಗೆ ಸಿಲುಕಿ ಸಾವÀನ್ನಪ್ಪಿದೆ.

ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತಪಟ್ಟ ಜಿಂಕೆಯ ಮೃತದೇಹವನ್ನು ವನ್ಯಜೀವಿ ವೈದ್ಯಾಧಿಕಾರಿ ಡಾ ಮುಜೀಬ್ ಮರಣೋತ್ತರ ಪರೀಕ್ಷೆ ನಡೆಸಿದರು. ಈ ಸಂದರ್ಭ ಎ.ಸಿ.ಎಫ್.ಎ.ಎ. ಗೋಪಾಲ್ ವಲಯ ಅರಣ್ಯ ಅಧಿಕಾರಿ ರಕ್ಷಿತ್ ಮತ್ತು ಅರಣ್ಯ ಸಿಬ್ಬಂದಿ ಹಾಜರಿದ್ದರು.

ಜಿಂಕೆಯನ್ನು ಉರುಳು ಇಟ್ಟು ಸಾಯಿಸಿದ ಆರೋಪಿಯ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಆರೋಪಿಯ ಪತ್ನಿ ದೂರು ನೀಡಿದ್ದಾರೆ ಎಂದು ಎಂ.ಸಿ.ಎಫ್.ಎ.ಎ. ಗೋಪಾಲ್ ಮಾಹಿತಿ ನೀಡಿದ್ದಾರೆ. ಅವರೆಗುಂದ ಅರಣ್ಯ ಪ್ರದೇಶದೊಳಗೆ ವಾಸ ಮಾಡಿಕೊಂಡಿರುವ ರಘು (೪೭) ಎಂಬಾತ ಜಿಂಕೆಗೆ ಉರುಳು ಇಟ್ಟು ಸಾಯಿಸಿರುವುದಾಗಿ ಆತನ ಪತ್ನಿ ಪಾರ್ವತಿ ಮಾಹಿತಿ ನೀಡಿದ್ದು, ಈತ ಜಿಂಕೆಯನ್ನು ಕೊಂದ ಬಳಿಕ ತನ್ನ ಪತ್ನಿ ಪಾರ್ವತಿ ಮೇಲೆಯೂ ಕೂಡ ಹಲ್ಲೆ ನಡೆಸಿ ತಲೆಗೆ ಗಾಯಗೊಳಿಸಿದ್ದಾನೆ ಎಂದು ಪತ್ನಿ ಪಾರ್ವತಿ ದೂರು ನೀಡಿದ್ದು, ಜಿಂಕೆಯನ್ನು ಕೊಂದ ಆರೋಪಿ ರಘು ವಿರುದ್ಧ ಸಿದ್ದಾಪುರ ಪೊಲೀಸರು ಹಾಗೂ ಕುಶಾಲನಗರದ ವಲಯ ಅರಣ್ಯ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ಆತನ ಪತ್ತೆಗೆ ಬಲೆ ಬೀಸಿದ್ದಾರೆ.

ಈ ಘಟನೆಯು ಕಳೆದ ಮೂರು ದಿನಗಳ ಹಿಂದೆ ನಡೆದಿದೆ ಎಂದು ಅರಣ್ಯ ಸಂರಕ್ಷಣಾಧಿಕಾರಿ ಗೋಪಾಲ್.ಎ.ಎ. ತಿಳಿಸಿದ್ದಾರೆ. -ವಾಸು