ಅಮ್ಮತ್ತಿ, ಅ. ೩: ಅಮ್ಮತ್ತಿ ಕೊಡವ ಸಮಾಜದ ವಾರ್ಷಿಕ ಸಭೆ ನಡೆಯಿತು. ಸಮಾಜದ ಅಧ್ಯಕ್ಷರಾದ ಐನಂಡ ಗಣಪತಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಕರ್ನಾಟಕ ರಾಜ್ಯ ಸರಕಾರದಿಂದ ನಡೆಸುತ್ತಿರುವ ಜಾತಿ ಗಣತಿ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಸಮೀಕ್ಷೆಯಲ್ಲಿ ಎಲ್ಲರೂ ಸಕ್ರಿಯವಾಗಿ ಭಾಗವಹಿಸುವಂತೆ ನಿರ್ಧಾರ ಕೈಗೊಳ್ಳಲಾಯಿತು.