ನಾಪೋಕ್ಲು, ಅ. ೩: ನಾಪೋಕ್ಲು ದವಸ ಭಂಡಾರದ ೨೦೨೪-೨೫ನೇ ಸಾಲಿನ ವಾರ್ಷಿಕ ಮಹಾಸಭೆ ಭಗವತಿ ಕಲ್ಯಾಣ ಮಂಟಪದಲ್ಲಿ ಅಧ್ಯಕ್ಷ ಕಂಗಾAಡ ಜಾಲಿ ಪೂವಪ್ಪ ಅವರ ಅಧಕ್ಷತೆಯಲ್ಲಿ ಜರುಗಿತು.
ಸಭೆಯಲ್ಲಿ ದವಸ ಭಂಡಾರ ಅಭಿವೃದ್ಧಿ ಬಗ್ಗೆ ಚರ್ಚಿಸಿ ನಿರ್ಧಾರಗಳನ್ನು ಕೈಗೊಳ್ಳಲಾಯಿತು. ಲೆಕ್ಕಪತ್ರಗಳನ್ನು ಸಭೆಗೆ ಮಂಡಿಸಿ ಅನುಮೋದನೆ ಪಡೆದುಕೊಳ್ಳಲಾಯಿತು
ಸಭೆಯಲ್ಲಿ ಉಪಸ್ಥಿತರಿದ್ದ ಉದಯಶಂಕರ್, ಅಶೋಕ, ಅಂಬಿ ಕಾರ್ಯಪ್ಪ, ರಘು ಕರುಂಬಯ್ಯ, ಹಿರಿಯರಾದ ಕಾವೇರಪ್ಪ ಸಂಸ್ಥೆಯ ಶ್ರೇಯೋಭಿವೃದ್ಧಿಯ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ದವಸ ಭಂಡಾರದ ಉಪಾಧ್ಯಕ್ಷ ಶಿವಚಾಳಿಯಂಡ ಕಿಶೋರ್ ಬೋಪಣ್ಣ, ನಿರ್ದೇಶಕರುಗಳಾದ ಶಿವಚಾಳಿಯಂಡ ಸುಭಾಷ್ ಸೋಮಯ್ಯ, ರಾಜೇಶ್ ತಮ್ಮಯ್ಯ, ಪಾಡಿಯಮ್ಮಂಡ ಮನು ಮಹೇಶ್, ಅರೆಯಡ ವಿನೋದ್, ಅಶೋಕ, ಬೊಪ್ಪಂಡ ಕಾಳಪ್ಪ, ಅಜ್ಜೇಟ್ಟೀರ ರಾಣಿ, ಕೊಂಬAಡ ಚಿತ್ರಾ, ಕಾರ್ಯದರ್ಶಿ ಕೊಂಬAಡ ಕೇಶವ ಉಪಸ್ಥಿತರಿದ್ದರು.