ಗೋಣಿಕೊಪ್ಪಲು, ಅ. ೩: ಗೋಣಿಕೊಪ್ಪ ದಸರಾ ಜನೋತ್ಸವ ಅಂಗವಾಗಿ ಅಂತಿಮ ಕಾರ್ಯಕ್ರಮವು ಕಾವೇರಿ ಕಲಾ ವೇದಿಕೆಯಲ್ಲಿ ಜರುಗಿತು. ಕಿರುಗೂರಿನ ಸಪ್ತಸ್ವರ ಮೆಲೊಡೀಸ್ ಹಾಗೂ ಪೊನ್ನಂಪೇಟೆಯ ನಾಗರಾಜ್ ತಂಡದಿAದ ಭರತನಾಟ್ಯ ನೃತ್ಯ ವಿದೂಷಿ ಹರ್ಷಿತಾ ಕಿರಣ್ ಕೈಕೇರಿ ಇವರಿಂದ ಮೂಡಿಬಂದವು. ರಾತ್ರಿ ಮೈಸೂರಿನ ಪಿವಿಆರ್ ಇವೆಂಟ್ಸ್ ಮತ್ತು ಎಂಟರ್‌ಟೇನರ್ಸ್ ಇವರಿಂದ ರಸಮಂಜರಿ ಹಾಗೂ ನೃತ್ಯ ಕಾರ್ಯಕ್ರಮ ನಡೆದವು.