ನಾಪೋಕ್ಲು, ಅ. ೩: ಸಮೀಪದ ಬೆಟ್ಟಗೇರಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆ. ಉದಯ ಅವರನ್ನು ಪಂಚಾಯಿತಿ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು. ಪಂಚಾಯಿತಿ ಅಧ್ಯಕ್ಷ ಚಳಿಯಂಡ ಕಮಲ ಉತ್ತಯ್ಯ ಅವರ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಕಳೆದ ಮೂರೂವರೆ ವರ್ಷಗಳಿಂದ ಕಾರ್ಯನಿರ್ವಹಿಸಿ ಇದೀಗ ವರ್ಗಾವಣೆಗೊಂಡಿರುವ ಕೆ. ಉದಯ ಅವರನ್ನು ಪಂಚಾಯಿತಿ ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.

ಕಾರ್ಯಕ್ರಮದಲ್ಲಿ ಪಂಚಾಯಿತಿ ಉಪಾಧ್ಯಕ್ಷ ಬೈತಡ್ಕ ಎಸ್. ದೇವಯ್ಯ, ಮಾಜಿ ಅಧ್ಯಕ್ಷ ನಾಪಂಡ ರ‍್ಯಾಲಿ ಮಾದಯ್ಯ, ಸದಸ್ಯರಾದ ಬಿಲ್ಲವರ ಕೃಷ್ಣಪ್ಪ, ತರೂರ್ ದಿನೇಶ್ ಕುಮಾರ್, ಅಯ್ಯ ಗಡೀರ ಮುತ್ತಪ್ಪ, ಬಿ.ಕೆ . ಗೋಪಾಲ, ಬಿ.ಎ. ಗೋಪಾಲ, ಎಂ.ಆರ್. ಮಣಿಕಂಠ ಬಾಡನ ಲಿಖಿತ, ಪೊದವಾಡ ಮೀನಾಕ್ಷಿ, ಬಿಲ್ಲವರ ಸುಶೀಲ, ಎಂ.ಕೆ. ಜಯಂತಿ, ಕೆ.ಆರ್. ಜಲಜಾಕ್ಷಿ, ಗಂಗಮ್ಮ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.