ವೀರಾಜಪೇಟೆ, ಅ. ೪: ಕೊಡವ ತಕ್ಕ್ ಜನಾಂಗದ ಒಕ್ಕೂಟದ ವತಿಯಿಂದ ವೀರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಅವರನ್ನು ಸನ್ಮಾನಿಸಲಾಯಿತು.

ಒಕ್ಕೂಟದ ನೂತನ ಅಧ್ಯಕ್ಷ ಪಡಿಞರಂಡ ಜಿ. ಅಯ್ಯಪ್ಪ ಮಾತನಾಡಿ, ೨೦ ಸಮುದಾಯಗಳ ಹಲವು ವಿಷಯಗಳ ಬಗ್ಗೆ ಚರ್ಚೆ ಮಾಡಿ ಮುಂದಿನ ದಿನಗಳಲ್ಲಿ ಒಕ್ಕೂಟವು ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ಹೇಳಿದರು. ಇದೇ ಸಂದರ್ಭ ಉಪಾಧ್ಯಕ್ಷ ಕುಡಿಯರ ಮುತ್ತಪ್ಪ, ಪ್ರಧಾನ ಕಾರ್ಯದರ್ಶಿ ಮೊಳ್ಳೆಕುಟ್ಟಡ ದಿನು ಬೋಜಪ್ಪ, ನಿರ್ದೇಶಕರುಗಳಾದ ಪಂದಿಕAಡ ಕುಶ, ನಾಯಂದಿರ ಶಿವಾಜಿ, ಭೀಮಚಂಡ ಬೆಳ್ಳಿಯಪ್ಪ, ಐನತಂಡ ನಂದ ಉತ್ತಯ್ಯ, ಪಣಿಕಡ ಅನು ಚಿಣ್ಣಪ್ಪ, ಮಡಿವಾಳರ ಲೋಹಿತ್, ಚೆಲ್ಲಿಯಂಡ ಪ್ರಣೀತ್, ಕೊಡಿಯಂಡ ಶಶಿ, ಮಲಿಯಡ ಕಟ್ಟಿ ಭೀಮಯ್ಯ, ಸೋಮಯ್ಯ, ಕೆ.ಎ. ಮನು ಉಪಸ್ಥಿತರಿದ್ದರು.