ವೀರಾಜಪೇಟೆ, ಅ. ೪: ರಾಜ್ಯ ಸರಕಾರವು ರಾಜ್ಯಾದ್ಯಂತ ಸಾಮಾಜಿಕ ಹಾಗೂ ಶೈಕ್ಷಣಿಕ ಗಣತಿಯನ್ನು ಮಾಡುತ್ತಿದ್ದು, ವೀರಾಜಪೇಟೆಯ ಸೆಂಟ್ ಆನ್ಸ್ ಪದವಿ ಕಾಲೇಜಿನ ಎನ್‌ಎಸ್‌ಎಸ್ ಘಟಕದ ಸ್ವಯಂ ಸೇವಕರು ಗಣತಿಯ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ವೀರಾಜಪೇಟೆಯ ಪುರಸಭಾ ವ್ಯಾಪ್ತಿಯ ಚರ್ಚ್ ಸ್ಟಿçÃಟ್, ಜನರಲ್ ತಿಮ್ಮಯ್ಯ ಬಡಾವಣೆ ಹಾಗೂ ಅಪ್ಪಯ್ಯಸ್ವಾಮಿ ರಸ್ತೆಯ ಮನೆಗಳಿಗೆ ತೆರಳಿದ ವಿದ್ಯಾರ್ಥಿಗಳು ಸಾರ್ವಜನಿಕರಲ್ಲಿ ಗಣತಿ ಕುರಿತು ಜಾಗೃತಿ ಮೂಡಿಸಿದರು. ಎನ್‌ಎಸ್‌ಎಸ್ ಸ್ವಯಂಸೇವಕರು ವಿವಿಧ ಗುಂಪುಗಳಾಗಿ ವಿಂಗಡಿಸಿ ಪ್ರತ್ಯೇಕವಾಗಿ ಮನೆಮನೆಗಳಿಗೆ ತೆರಳಿ ಜಾಗೃತಿಯನ್ನು ಮೂಡಿಸುವ ಪ್ರಯತ್ನವನ್ನು ಮಾಡಿದರು ಹಾಗೂ ಅಧಿಕಾರಿಗಳು ಗಣತಿಗೆ ಬರುವಂತಹ ಸಂದರ್ಭ ಇರಬೇಕಾದಂತಹ ದಾಖಲೆಗಳು, ಕೇಳುವಂತಹ ಮಾಹಿತಿ ಇವುಗಳ ಕುರಿತು ವಿವರಿಸಿದರು. ಈ ಸಂದರ್ಭ ಕಾಲೇಜಿನ ಎನ್‌ಎಸ್ ಎಸ್ ಘಟಕದ ನಾಯಕರು ಹಾಗೂ ಸ್ವಯಂ ಸೇವಕರು ಉಪಸ್ಥಿತರಿದ್ದರು.