ಕಡಂಗ, ಅ. ೪: ಕೊಂಡAಗೇರಿ ಸುನ್ನಿ ಮುಸ್ಲಿಂ ಜಮಾಅತ್ ಆಧೀನದಲ್ಲಿರುವ ಯುಎಇ ಸಮಿತಿಯ ವಾರ್ಷಿಕ ಮಹಾ ಸಭೆ ದುಬೈ ಕ್ರೀಕ್ ಅಬ್ರಾ ಧೋ ಕ್ರೋಸ್‌ನಲ್ಲಿ ಸಮಿತಿಯ ಮಾಜಿ ಅಧ್ಯಕ್ಷ ಶಾಫಿ ಸಖಾಫಿ ಅವರ ನೇತೃತ್ವದಲ್ಲಿ ನಡೆಯಿತು. ಚುನಾವಣಾ ನಿರೀಕ್ಷಕರಾಗಿ ಹಾಫಿಲ್ ರಫೀಕ್ ಉಸ್ತಾದ್ ಅವರು ಕಾರ್ಯ ನಿರ್ವಹಿಸಿದರು. ಪ್ರಸ್ತುತ ಸಾಲಿನ ನೂತನ ಅಧ್ಯಕ್ಷರುಗಳಾಗಿ ಇರ್ಷಾದ್ ಎ.ಹೆಚ್., ಕಾರ್ಯದರ್ಶಿಯಾಗಿ ಮುಜೀಬ್ ಪಿ.ಎ. ಮತ್ತು ಕೋಶಾಧಿಕಾರಿಯಾಗಿ ನೌಶಾದ್ ಎಸ್.ಎಂ. ಅವರನ್ನು ಆಯ್ಕೆ ಮಾಡಲಾಯಿತು. ಸಲಹಾ ಸಮಿತಿ ಸದಸ್ಯರುಗಳಾಗಿ ಶಾಫಿ ಸಖಾಫಿ ಜೆ.ಯು., ಅಬ್ದುಲ್ಲ ಹೆಚ್.ಹೆಚ್., ಹಫೀಳ್ ರಫೀಕ್ ಉಸ್ತಾದ್, ಸಲಾಂ ಎನ್.ಇ., ಹನೀಫ ಪಿ.ಎಚ್., ಉಮರ್ ಧಾರಿಮಿ, ಅಜೀಜ್ ಹೆಚ್.ವೈ., ಹಮೀದ್ ಕೆ.ಎ. ಮತ್ತು ಹಸನ್ ಪಿ.ಎ. ಅವರುಗಳನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರುಗಳಾಗಿ ಅಬ್ದುಲ್ಲ ಎ.ಎ. ಹಾಗೂ ಜಂಟಿ ಕಾರ್ಯದರ್ಶಿಗಳಾಗಿ ರಜಾಕ್ ಎ.ಇ. ಮತ್ತು ಮುನವರ್ ಎನ್.ಎ. ಅವರನ್ನು ಆಯ್ಕೆ ಮಾಡಲಾಯಿತು. ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ರಿಯಾಜ್ ಕೆ.ವೈ., ಯೂನುಸ್ ಪಿ.ಎ., ಮಶೂದ್ ಎ.ಎ., ರಫೀಕ್ ಎ.ಹೆಚ್., ಝುಬೈರ್ ಹಾಜಿ ಪಿ.ಎಸ್., ಲತೀಫ್ ಕೆ.ಎ., ಶೌಕತ್ ಪಿ.ಎ., ಫಿರೋಜ್ ಕೆ.ಎ., ನಜೀಬ್ ಕೆ.ಹೆZ.ï, ಅಬುತಾಹಿರ್ ಪಿ.ಎಚ್., ಸಲಾಂ ಕೆ.ಎಸ್., ಬಷೀರ್ ಪಿ.ಎ., ಆದಿಲ್ ಜೆ.ಯು., ಸೈಫು ಜೆ.ಎಸ್. ಹಾಗೂ ಆಸಿಫ್ ಬಿ.ಎಂ. ಅವರುಗಳನ್ನು ಆಯ್ಕೆ ಮಾಡಲಾಯಿತು.