ವೀರಾಜಪೇಟೆ, ಅ. ೪ : ವೀರಾಜಪೇಟೆಯ ಬಸ್ ನಿಲ್ಧಾಣದಲ್ಲಿ ಕೊಡಗು ಖಾಸಗಿ ಬಸ್ ಕಾರ್ಮಿಕರ ಸಂಘ ವೀರಾಜಪೇಟೆ ವತಿಯಿಂದ ೧೮ನೇ ವರ್ಷದ ಆಯುಧ ಪೂಜೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಎ.ಎಸ್. ಪೊನ್ನಣ್ಣ ರಾಜ್ಯದ ಎಲ್ಲಾ ಭಾಗಗಳಲ್ಲಿ ನಾಡಹಬ್ಬ ದಸರಾಗೆ ಒಂದು ದಿನ ಮುಂಚಿತವಾಗಿ ಆಚರಣೆ ಮಾಡುವ ಹಬ್ಬವೇ ಈ ಆಯುಧ ಪೂಜೆಯಾಗಿದ್ದು, ಎಲ್ಲರ ಸುರಕ್ಷತೆಗಾಗಿ ಜಗನ್ಮಾತೆ ಆಶೀರ್ವದಿಸಲಿ ಎಂದು ಆಶಿಸಿದರು.
ಅರಮೇರಿ ಕಳಂಚೇರಿ ಮಠದ ಮಠಾಧೀಶರಾದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಜಿ ಮಾತನಾಡಿ, ನಮ್ಮ ದೇಶದ ಸಂಸ್ಕöÈತಿ ಪರಂಪರೆಯನ್ನು ಬೆಳೆಸಬೇಕಾದರೆ ಇಂತಹ ಕಾರ್ಯಕ್ರಮಗಳು ಅವಶ್ಯಕ. ಆಯುಧ ಪೂಜೆ ಗತಕಾಲದಿಂದ ಆಚರಿಸಿಕೊಂಡು ಬರುತ್ತಿರುವ ಹಬ್ಬವಾಗಿದೆ. ಇದನ್ನು ಮುಂದಿನ ಪೀಳಿಗೆಗೆ ತಿಳಿಸುವಂತಾಗಬೇಕು ಎಂದರು.
ವೀರಾಜಪೇಟೆ ಸಂತ ಅನ್ನಮ್ಮ ಚರ್ಚ್ನ ಧರ್ಮಗುರು ರೆ.ಫಾ. ಮದಲೈಮುತ್ತು ಮಾತನಾಡಿ, ಮಕ್ಕಳಿಗೆ ಬಾಲ್ಯಾವಸ್ಥೆಯಲ್ಲಿಯೇ ನಮ್ಮ ಧಾರ್ಮಿಕ ಆಚರಣೆ ಮತ್ತು ಹಬ್ಬ ಹರಿದಿನಗಳ ಬಗ್ಗೆ ತಿಳಿಸಿಕೊಡಬೇಕು ಎಂದರು.
ಪುರಸಭೆ ಅಧ್ಯಕ್ಷೆ ಮನೆಯಪಂಡ ದೇಚಮ್ಮ ಕಾಳಪ್ಪ ಮಾತನಾಡಿ, ಎಲ್ಲರೂ ಸಮಾಜದಲ್ಲಿ ಶಾಂತಿ ಸೌಹಾರ್ದತೆ ಸಹಬಾಳ್ವೆಯಿಂದ ಬಾಳಬೇಕೆಂದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ರೋಮನ್ ಕ್ಯಾಥೋಲಿಕ್ ಸಂಘದ ಜಿಲ್ಲಾ ಅಧ್ಯಕ್ಷ ಜಾನ್ಸನ್ ಪಿಂಟೋ, ಬಸ್ ಕಾರ್ಮಿಕರ ಸಂಘಟನೆಯ ಅಲ್ಲಂಡ ಕಸ್ತೂರಿ ಚಂಗಪ್ಪ, ಕೆಪಿಟಿ ಮಾಲೀಕರಾದ ಇಬ್ರಾಹಿಂ, ಹ್ಯಾರಿಸ್ ಬಾಖವಿ ಕಾರ್ಯಕ್ರಮಕ್ಕೆ ಶುಭ ಕೋರಿದರು.
ವೀರಾಜಪೇಟೆಯ ಕೊಡಗು ಖಾಸಗಿ ¨ಸ್ಸ್ ಕಾರ್ಮಿಕರ ಸಂಘದ ಅಧ್ಯಕ್ಷ ಕುಂಬೆಯAಡ ಸುರೇಶ್ ದೇವಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಸಂಘದಲ್ಲಿ ೧೨೦ ಸದಸ್ಯರಿದ್ದು, ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಪ್ರತಿ ವರ್ಷ ಸಾಮೂಹಿಕ ಆಯುಧ ಪೂಜೆಯನ್ನು ನಡೆಸುತ್ತಿದ್ದು, ಕಳೆದ ೮ ವರ್ಷದಿಂದ ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರದೊಂದಿಗೆ ಉತ್ತಮ ಕಾರ್ಯಕ್ರಮ ಆಯೋಜಿಸಲಾಗುತ್ತದೆ ಎಂದರು.
ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬಿಜೆಪಿ ಪ್ರಧಾನ ಸಂಚಾಲಕ ತೇಲಪಂಡ ಶಿವಕುಮಾರ್ ಮಾತನಾಡಿ, ಇತ್ತೀಚೆಗೆ ನಡೆದ ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ ಹಾಕಿದ ಎಲ್ಲಾ ಕೇಸುಗಳನ್ನು ವಾಪಾಸು ಪಡೆಯಬೇಕು. ಹಿಂದೂಗಳ ಆಚರಣೆಗೆ ಸರಕಾರವು ಒಳ್ಳೆಯ ರೀತಿಯಲ್ಲಿ ಸ್ಪಂದಿಸಬೇಕು ಎಂದರು.
ಸಮಾರೋಪ ಸಮಾರಂಭದಲ್ಲಿ ಹಿರಿಯ ಬಸ್ ಕಾರ್ಮಿಕರು, ಸಮಾಜ ಸೇವಕರು ಹಾಗೂ ಪ್ರತಿಭಾವಂತ ಬಸ್ ಕಾರ್ಮಿಕರ ಮಕ್ಕಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಆಯುಧ ಪೂಜೆ ಪ್ರಯುಕ್ತ ಸಂಘದ ಕಚೇರಿಯಲ್ಲಿ ಸಾಮೂಹಿಕ ಆಯುಧ ಪೂಜೆ ನಡೆಯಿತು.
ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ಸಾರ್ವಜನಿಕರಿಗೆ ಅನ್ನಸಂತರ್ಪಣೆ, ಪ್ರಖ್ಯಾತ ಬೈಕ್ ಸವಾರರಿಂದ ಸಾಹಸ ಪ್ರದರ್ಶನ, ವೀರಾಜಪೇಟೆ ನಾಟ್ಯಾಂಜಲಿ ನೃತ್ಯ ಮಂಡಳಿಯವರಿAದ ಭಜನಾ ನೃತ್ಯ ಜನಮನ ಸೆಳೆಯಿತು. ಸಂಜೆ ಸಂಗೀತ ರಸಮಂಜರಿ ಕಾರ್ಯಕ್ರಮದೊಂದಿಗೆ ಆಯುಧ ಪೂಜೆ ಕಾರ್ಯಕ್ರಮಕ್ಕೆ ತೆರೆ ಎಳೆಯಲಾಯಿತು.
ವೇದಿಕೆಯಲ್ಲಿ ಕೋಡಿರ ವಿವೇಕ್, ಕಾಳಮಂಡ ಜಗತ್, ವಾಟೇರಿರ ಬೋಪಣ್ಣ, ಮನು ನಂಜಪ್ಪ, ಲೋಕೇಶ್ ಅಯ್ಯಪ್ಪ, ವಾಟೇರಿರ ಜೀವನ್, ಕುಂಡ್ರAಡ ಅನಿಲ್, ಆಲ್ವಿನ್ ಡಿಸೋಜ ಇದ್ದರು.
ಈ ಸಂದರ್ಭ ಕಾರ್ಯದರ್ಶಿ ವಿನೋದ್ ಜೆ.ಸಿ.ಬಿ, ಖಜಾಂಚಿ ದಿನೇಶ್ ನಾಯರ್, ನಿರ್ದೇಶಕರಾದ ಲೋಕೇಶ್ ರೈ ಸೇರಿದಂತೆ ಬಸ್ ಕಾರ್ಮಿಕರ ಸಂಘದ ಪದಾಧಿಕಾರಿಗಳು, ಚಾಲಕರು, ನಿರ್ವಾಹಕರು, ಸಾರ್ವಜನಿಕರು ಉಪಸ್ಥಿತರಿದ್ದರು.