ಐಗೂರು, ಅ. ೫: ರಾಷ್ಟಿçÃಯ ಸ್ವಯಂಸೇವಕ ಸಂಘ ನೂರು ವರ್ಷ ಪೂರೈಸಿದ್ದು, ಭಾರತ ಇಡೀ ಜಗತ್ತಿನ ನೇತೃತ್ವವನ್ನು ವಹಿಸುತ್ತಿದ್ದು, ಇಡೀ ಜಗತ್ತಿಗೆ ಹೇಗೆ ಬದುಕಬೇಕೆಂಬುದನ್ನು ಜಗದ್ಗುರು ಭಾರತ ತೋರಿಸಿಕೊಟ್ಟಿದೆ ಎಂದು ಆರ್.ಎಸ್.ಎಸ್. ಮಂಗಳೂರು ವಿಭಾಗದ ಸಹಕಾರ್ಯವಾಹಕ ಸುಭಾಷ್ ಚಂದ್ರ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಐಗೂರಿನ ಗುಳಿಗಪ್ಪ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಆರ್.ಎಸ್.ಎಸ್. ಶತಾಬ್ದಿ ಆಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದರು. ೧೯೨೫ರಲ್ಲಿ ಡಾ. ಕೇಶವ ಬಲಿರಾಮ್ ಹೆಡ್ಗೇವಾರ್ ಅವರ ನೇತೃತ್ವದಲ್ಲಿ ವಿಜಯದಶಮಿಯಂದು ವಿಜಯದ ಸಂಕೇತವಾಗಿ ಸಂಘ ಜನ್ಮತಾಳಿದೆ. ವಿದೇಶಿಗರು ಭಾರತವನ್ನು ಇಂಡಿಯಾ ಎಂದು ಪರಿಚಯಿಸುತ್ತಿದ್ದಾರೆ, ಆದರೆ ಭಾರತೀಯರು ಹಿಂದೂ ಗಳಾಗಬೇಕು. ತಾಯಿಯ ಸಿಂಧೂರ ಅಳಿಸಿದ ಕಾರಣ ಸಿಂಧೂರದ ಯುದ್ಧವಾಯಿತು. ಉಗ್ರ ಗಾಮಿಗಳ ದಾಳಿಯನ್ನು ಹೇಗೆ ನಿಯಂತ್ರಿಸುವು ದೆಂದು ವಿದೇಶಿಗರು ಭಾರತವನ್ನು ಕೇಳುತ್ತಿದ್ದಾರೆ. ೨೦೧೯ರ ಜಾಗತಿಕ ಕೊರೊನಾವನ್ನು ಭಾರತ ಸಮರ್ಥ ನಾಯಕತ್ವದಲ್ಲಿ ಎದುರಿಸಿತು ಎಂದರು. ಜಾತಿ ವ್ಯವಸ್ಥೆ ಮನೆಯೊಳಗೆ ಮಾತ್ರ, ಹೊರಗೆ ಬಂದರೆ ನಾವೆಲ್ಲಾ ಹಿಂದೂಗಳು. ಪಕ್ಕದ ಮನೆಯ ಸಂಪರ್ಕವಿಲ್ಲದೆ ಚಂದ್ರನಲ್ಲಿಗೆ ಸಂಪರ್ಕ ಬೆಳೆಸಿ ಪ್ರಯೋಜನವಿಲ್ಲ. ರಾಮಮಂದಿರವನ್ನು ನೋಡುವ ಭಾಗ್ಯ ನಮಗೆ ದೊರೆತಿದ್ದು, ಮುಂದೆ ರಾಮರಾಜ್ಯವಾಗಲಿದೆ ಎಂದರು. ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ವಕೀಲರಾದ ಪಿ.ಕೆ. ಗಣಪತಿಯವರು ಮಾತನಾಡಿ, ಆರ್.ಎಸ್.ಎಸ್. ನೂರು ವರ್ಷ ಪೂರೈಸಿದ್ದು ದೇಶ ವಿದೇಶಗಳಲ್ಲಿ ಛಾಪು ಮೂಡಿಸಿದೆ. ಸಂಘದ ಸೇವಾ ಮನೋಭಾವದ ಜೊತೆ ರಾಷ್ಟಿçÃಯತೆಯ ಕಡೆ ಗಮನ ಹರಿಸಬೇಕಾಗಿದೆ ಎಂದರು. ಐಗೂರು, ಕಾಜೂರು, ಎಡವಾರೆ, ಹೊಸ ತೋಟದ ಮಂಡಲಗಳ ಶಿಸ್ತು ಬದ್ಧ ಗಣವೇಶಿ ಮುಖ್ಯ ಶಿಕ್ಷಕರು ಮತ್ತು ಸ್ವಯಂಸೇವಕರು ಭಾಗವಹಿಸಿದ್ದ ಶತಾಬ್ದಿಯ ಆಚರಣೆಯಲ್ಲಿ ಪ್ರಾರಂಭದಲ್ಲಿ ಧ್ವಜಾರೋಹಣದ ನಂತರ ಸಿ.ಎಸ್. ಮಹೇಶ್ ಕಾರ್ಯಕ್ರಮ ನಿರೂಪಿಸಿದರೆ, ರಾಧಾಕೃಷ್ಣ ಪ್ರಾರ್ಥಿಸಿದರೆ, ಮಂಜು ಅಮೃತವಚನ ವಾಚಿಸಿದರು. ವಿಶ್ವನಾಥ್ ಅವರಿಂದ ವಂದನಾರ್ಪಣೆ, ಪ್ರಭಾಕರ್ ಅವರಿಂದ ನಮಸ್ತೆ ಸದಾ ವತ್ಸಲೇ ಮಾತೃಭೂಮಿ.. ಎಂಬ ಸಂಘದ ಪ್ರಾರ್ಥನೆ ನೆರವೇರಿತು. - ಸುಕುಮಾರ್.