ಸಿದ್ದಾಪುರ: ಅಮ್ಮತ್ತಿ - ಕಾರ್ಮಾಡು ಗ್ರಾಮದ ಶ್ರೀ ಚಾಮುಂಡೇಶ್ವರಿ - ಪಾಷಾಣ ಮೂರ್ತಿ ಕ್ಷೇತ್ರದಲ್ಲಿ ನವರಾತ್ರಿ ಉತ್ಸವವು ವಿವಿಧ ಪೂಜಾ ಕೈಂಕರ್ಯಗಳೊAದಿಗೆ ೯ ದಿನಗಳ ಕಾಲ ವಿಜೃಂಭಣೆಯಿAದ ನೆರವೇರಿತು.

ದೇವಾಲಯದಲ್ಲಿ ನಂದಾದೀಪ ಪ್ರತಿಷ್ಠಾಪನೆ. ವಿಜಯೋತ್ಸವ ಮತ್ತು ಕ್ಷೇತ್ರದಲ್ಲಿರುವ ದೈವ ದೇವರಿಗೆ ವಾದ್ಯಗೊಷ್ಠಿಯೊಂದಿಗೆ ಅಭಿಷೇಕ ಹಾಗೂ ಅಲಂಕಾರ ಪೂಜೆ ನಡೆಯಿತು. ವಿಜಯದಶಮಿಯ ಕೊನೆಯ ದಿನದಂದು ಚಂಡಿಕಾ ಹೋಮ ನಡೆಯಿತು.

ಶ್ರೀ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಹಾಗೂ ಹೂವಿಂದ ಅಲಂಕಾರ ಗೊಳಿಸಲಾಗಿತ್ತು. ನವರಾತ್ರಿ ಅಂಗವಾಗಿ ಶ್ರೀ ಚಾಮುಂಡೇಶ್ವರಿ ಮತ್ತು ಶ್ರೀ ಪಾಷಾಣ ಮೂರ್ತಿ ದೇವಾಲಯವನ್ನು ವಿದ್ಯುತ್ ಅಲಂಕೃತಗೊಳಿಸಲಾಗಿತ್ತು.

ದೇವಾಲಯ ವತಿಯಿಂದ ಭಕ್ತಾದಿಗಳಿಗೆ ಮಧ್ಯಾಹ್ನ ಹಾಗೂ ರಾತ್ರಿ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಪೂಜಾ ಕಾರ್ಯಕ್ರಮದಲ್ಲಿ ದೇವಾಲಯದ ಪ್ರಮುಖರಾದ ಕುಟ್ಟಂಡ ಸರಸ್ವತಿ ಮತ್ತು ಲೋಕೇಶ್ ಮುತ್ತಪ್ಪ ಇನ್ನಿತರರು ಹಾಜರಿದ್ದರು.ಮಡಿಕೇರಿ: ಶ್ರೀ ಮುತ್ತಪ್ಪ ಮಹಿಳಾ ವೇದಿಕೆ ಸದಸ್ಯರು ನವರಾತ್ರಿ ದಸರಾ ಹಬ್ಬದ ಆಚರಣೆ ಪ್ರಯುಕ್ತ ಶ್ರೀ ದೇವಿ ಭಗವತಿಯ ನವ ದುರ್ಗೆಯರ ವಿಶೇಷ ಅಲಂಕಾರ ಮಾಡಿ, ಆಯಾ ಬಣ್ಣದ ಸೀರೆಯುಟ್ಟು. ದೇವಿಗೆ ಭಜನೆ, ಲಲಿತಾ ಸಹಸ್ರನಾಮ ಪಾರಾಯಣ ಸೇರಿದಂತೆ ವಿವಿಧ ಕೂಡಿಗೆ: ಕೂಡ್ಲೂರು-ಕೂಡು ಮಂಗಳೂರು ದೊಡ್ಡಮ್ಮ ತಾಯಿ ದೇವಾಲಯ ಆವರಣದಲ್ಲಿ ದೇವಾಲಯ ಸಮಿತಿ ವತಿಯಿಂದ ನವರಾತ್ರಿ ಪೂಜ್ಯೋತ್ಸವವು ಹೋಮ ಹವನ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನಡೆದವು.

ಸಂಜೆ ವಿಶೇಷ ಪೂಜೆ ಸೇರಿದಂತೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಮಹಾಮಂಗಳಾರತಿ, ಪ್ರಸಾದ ವಿನಿಯೋಗ, ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು. ನವರಾತ್ರಿ ಪೂಜ್ಯೋತ್ಸವ ಕಾರ್ಯಕ್ರಮದಲ್ಲಿ ಕೂಡ್ಲೂರು, ಕೂಡುಮಂಗಳೂರು ವಿಜಯನಗರ, ಚಿಕ್ಕತ್ತೂರು ದೊಡ್ಡತ್ತೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಭಾಗವಹಿಸಿದ್ದರು.

ದೇವಾಲಯ ಸೇರಿದಂತೆ ಮುಖ್ಯ ರಸ್ತೆಯು ಭವ್ಯ ವಿದ್ಯುತ್ ದೀಪಗಳಿಂದ ಅಲಂಕೃತಗೊAಡಿತು. ಈ ಸಂದರ್ಭದಲ್ಲಿ ದೇವಾಲಯ ಸಮಿತಿ ಅಧ್ಯಕ್ಷ ಕೆ.ಎನ್. ಪವನ್ ಕುಮಾರ್ ಉಪಾಧ್ಯಕ್ಷ ವಿ.ಎಂ. ಮಂಜುನಾಥ, ಕಾರ್ಯದರ್ಶಿ ಕೆ.ಡಿ. ಹರೀಶ್, ಖಚಾಂಚಿ ಕೆ.ಆರ್. ಶಿವಣ್ಣ, ಕೆ.ಕೆ. ಭೋಗಪ್ಪ, ಸೇರಿದಂತೆ ಸಮಿತಿ ಸದಸ್ಯರು, ಅವಳಿ ಗ್ರಾಮಗಳ ಗ್ರಾಮಸ್ಥರು ಹಾಜರಿದ್ದರು.ವೀರಾಜಪೇಟೆ: ನವರಾತ್ರಿ ಪ್ರಯುಕ್ತ ವೀರಾಜಪೇಟೆಯ ಶ್ರೀ ದುರ್ಗಿ ವಿಷ್ಣುಮೂರ್ತಿ ನಾಗ ದೇವಸ್ಥಾನದಲ್ಲಿ ನವದುರ್ಗೆಯ ೯ ರೂಪಗಳಿಗೆ ವಿಶೇಷ ಪೂಜೆ, ಅಲಂಕಾರ, ಪಾರಾಯಣ ನಡೆಯಿತು. ನವರಾತ್ರಿ ಮೊದಲ ದಿನದಿಂದ ಕೊನೆಯ ದಿನದವರೆಗೂ ದುರ್ಗೆಯ ೯ ಅವತಾರಗಳನ್ನು ಸದ್ಭಕ್ತಿಯಿಂದ ಪ್ರತಿದಿನ ಪೂಜಿಸಿ, ಪ್ರತಿ ನಿತ್ಯ ಒಂದೊAದು ರೂಪದಲ್ಲಿ ದೇವಿಯನ್ನು ಸಿಂಗರಿಸಿ ವಿಶೇಷ ಅಭಿಷೇಕ, ಪೂಜೆ, ಮಂತ್ರ ಪಠಣೆಗಳನ್ನು ಮಾಡಲಾಯಿತು.

ಮೊದಲ ದಿನ ಶೈಲಪುತ್ರಿಯನ್ನು, ನಂತರ ಬ್ರಹ್ಮಚಾರಿಣಿ, ಚಂದ್ರಘAಟಾ, ಕೂಷ್ಮಾಂಡಾ, ಸ್ಕಂದಮಾತಾ, ಕಾತ್ಯಾಯಿನಿ, ಕಾಳರಾತ್ರಿ, ಮಹಾಗೌರಿ ಮತ್ತು ಸಿದ್ದಿದಾತ್ರಿ ನವದುರ್ಗೆಯರ ೯ ರೂಪಗಳನ್ನು ಪೂಜಿಸಿ, ದುರ್ಗಾ ಮಾತೆ ಮತ್ತು ಇತರ ದೇವತೆಗಳ ಕಥೆಗಳನ್ನು ಹೇಳುವ ಧರ್ಮಗ್ರಂಥಗಳನ್ನು ಮಹಿಳೆಯರು ಪ್ರತಿ ನಿತ್ಯ ಪಠಣ ಮಾಡಿದರು.

ವಿಶೇಷ ಅಲಂಕಾರ

ಮAಗಳವಾರದAದು ದುರ್ಗಾಷ್ಟಮಿ ಪ್ರಯುಕ್ತ ತಾಯಿ ಜಗನ್ಮಾತೆ ದೇವಿಗೆ ನಿಂಬೆ ಹಣ್ಣು, ಗುಲಾಬಿ, ಚೆಂಡು ಹೂ ಸೇರಿದಂತೆ ವಿವಿಧ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು. ಬೆಳಗ್ಗೆಯಿಂದಲೂ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ದೇವರಿಗೆ ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ ಸಲ್ಲಿಸಿದ ಮಹಿಳಾ ಭಕ್ತ ವೃಂದ ಲಲಿತ ಸಹಸ್ರನಾಮ ಪಾರಾಯಣ ಮತ್ತು ಮಹಿಶಾಸುರ ಮರ್ದಿನಿ ಸ್ತೋತ್ರವನ್ನು ಭಕ್ತಿಯಿಂದ ಪಠಣೆ ಮಾಡುವ ಮೂಲಕ ತಮ್ಮ ಭಕ್ತಿಯನ್ನು ಸಮರ್ಪಿಸಿದರು. ಇದೇ ಸಂದರ್ಭ ದೇವರ ನೃತ್ಯ ಪ್ರದಕ್ಷಿಣೆ ನಡೆಯಿತು. ಪೂಜೆಯ ಅಂಗವಾಗಿ ಅಧಿಕ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡಿದ್ದರು. ದೇವಾಲಯದ ವತಿಯಿಂದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.