ಗೋಣಿಕೊಪ್ಪಲು, ಅ. ೫: ದಸರಾ ಸಂದರ್ಭ ಗೋಣಿಕೊಪ್ಪದಲ್ಲಿ ನಡೆದ ದಶಮಂಟಪ ಶೋಭಾ ಯಾತ್ರೆ ವೇಳೆ ನ್ಯಾಯಾಲಯದ ಆದೇಶ ಉಲ್ಲಂಘನೆ ಆರೋಪದಡಿ ಪ್ರಕರಣ ದಾಖಲಾಗಿದೆ.
ಉಚ್ಚ ನ್ಯಾಯಾಲಯದ ಆದೇಶವನ್ನು ಉಲ್ಲಂಘನೆ ಮಾಡಿ ಧ್ವನಿವರ್ಧಕ ಬಳಸಿದ ಹಿನ್ನೆಲೆಯಲ್ಲಿ ಶಾರದಾಂಭ ದಸರಾ ಸಮಿತಿ ಅರುವತೊಕ್ಕಲು, ಕಾಡ್ಲಯ್ಯಪ್ಪ ದಸರಾ ಸಮಿತಿ ಕಾಫಿ ಬೋರ್ಡ್, ಸ್ನೇಹಿತರ ಬಳಗ ಕೊಪ್ಪ ಹಾಗೂ ಮೂರನೇ ವಿಭಾಗದ ಯುವ ದಸರಾ ಸಮಿತಿ ಅಧ್ಯಕ್ಷರುಗಳ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಮತ್ತೊಂದು ಪ್ರಕರಣ
ಶೋಭಾಯಾತ್ರೆಯ ವೇಳೆ ಪೋಲಿಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಬಿರುನಾಣಿ ಹಾಗೂ ವೀರಾಜಪೇಟೆ ಮೂಲದ ಇಬ್ಬರ ಮೇಲೆ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆೆ.
ಶೋಭಾಯಾತ್ರೆ ವೇಳೆ ಮಂಟಪ ಸಾಗಲು ತೊಂದರೆ ಮಾಡಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಮಾಡಿದ ಹಿನ್ನೆಲೆ ಪ್ರಕರಣ ದಾಖಲಾಗಿದೆ.