ಕೂಡಿಗೆ, ಅ. ೫: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿ ಹರಿಯುತ್ತಿರುವ ಹಾರಂಗಿ ಮುಖ್ಯನಾಲೆಯಲ್ಲಿ ಈಜಲು ತೆರಳಿದ ಯುವಕ ಮುಳುಗಿ ಮೃತಪಟ್ಟ ಘಟನೆ ನಡೆದಿದೆ.

ಕೂಡಿಗೆ ಬಸವರಾಜು ಎಂಬವರ ಪುತ್ರ ಹಾಲು ಸರಬರಾಜು ಮಾಡುವ ವಾಹನ ಚಾಲಕ ಸಂತೋಷ (೨೮) ಮೃತ ದುರ್ದೈವಿ.

ಹುದುಗೂರಿನಲ್ಲಿ ಮೃತಪಟ್ಟ ಸಂಬAಧಿಕರ ಅಂತಿಮ ದರ್ಶನ ಪಡೆದು ಬಂದ ಬಳಿಕ ಸ್ನೇಹಿತರೊಂದಿಗೆ ಸ್ನಾನಕ್ಕೆ ಹಾರಂಗಿ ಮುಖ್ಯ ನಾಲೆಗೆ ತೆರಳಿದಾಗ ದುರ್ಘಟನೆ ಸಂಭವಿಸಿದೆ. ಮೃತದೇಹಕ್ಕಾಗಿ ಅಗ್ನಿಶಾಮಕ ದಳದವರು ಶೋಧ ಕಾರ್ಯ ನಡೆಸಿ ನಾಲೆಯಲ್ಲಿ ನೀರು ಸರಬರಾಜನ್ನು ಕೆಲ ಗಂಟೆಗಳ ಕಾಲ ಸ್ಥಗಿತಗೊಳಿಸಿದ ಸಂದರ್ಭದಲ್ಲಿ ಮೃತ ದೇಹ ಪತ್ತೆಯಾಗಿದೆ.

ಸ್ಥಳಕ್ಕೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಸಹಾಯಕ ಠಾಣಾಧಿಕಾರಿ ವಿಜಯ ಕುಮಾರ್, ಸಿಬ್ಬಂದಿ ವರ್ಗದವರು ತೆರಳಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.