ಗೋಣಿಕೊಪ್ಪಲು, ಅ. ೫: ಕ್ಗ್ಗಟ್ನಾಡ್ ಪ್ಲೇಯಿಂಗ್ ಎಲ್ಬೋಸ್ ವತಿಯಿಂದ ನಡೆದ ಗ್ರಾಮಗಳ ನಡುವಿನ ಹಾಕಿ ಪಂದ್ಯಾವಳಿಯಲ್ಲಿ ಬಲ್ಲಮಾವಟಿ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡರೆ, ಹಾತೂರು ತಂಡ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿಕೊಂಡಿದೆ.
ಪೊನ್ನಂಪೇಟೆಯ ಟರ್ಫ್ ಮೈದಾನದಲ್ಲಿ ನಡೆದ ರೋಚಕ ಪಂದ್ಯದಲ್ಲಿ ಹಾತೂರು ತಂಡವನ್ನು ಮಣಿಸಿ ಬಲ್ಲಮಾವಟಿ ಗೆಲುವು ದಾಖಲಿಸಿತು.
ಆರಂಭಿಕ ಹಂತದಲ್ಲಿಯೇ ರೋಚಕ ಸೆಣಸಾಟ ನಡೆಸಿದ ಉಭಯ ತಂಡಗಳು ನಿಗದಿತ ಸಮಯದಲ್ಲಿ ೧-೧ ಸಮಬಲ ಸಾಧಿಸಿ ಡ್ರಾನಲ್ಲಿ ಪಂದ್ಯಾಟ ಮುಕ್ತಾಯಗೊಂಡಿತು. ಅಂತಿಮವಾಗಿ ಶೂಟೌಟ್ ಮೊರೆ ಹೋಗಲಾಯಿತು. ಈ ಪೈಕಿ ಬಲ್ಲಮಾವಟಿ ತಂಡವು ೪-೨ ಗೋಲುಗಳ ಅಂತರದಿAದ ಹಾತೂರು ತಂಡವನ್ನು ಸೋಲಿಸುವ ಮೂಲಕ ಗೆದ್ದು ಬೀಗಿತು. ಸೆಮಿಫೈನಲ್ಸ್ ಪ್ರಶಸ್ತಿಯನ್ನು ಕಾಕೋಟುಪರಂಬು ಹಾಗೂ ಮಲ್ಮ ವೈಟ್ ತಂಡ ಪಡೆಯಿತು.
ಉದ್ಘಾಟನಾ ಕಾರ್ಯಕ್ರಮ
ಫೈನಲ್ ಪಂದ್ಯಾವಳಿಯನ್ನು ಸಂಸದ ಯದುವೀರ್ ಒಡೆಯರ್ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಯದುವೀರ್ ಒಡೆಯರ್, ಡಿಸೆಂಬರ್ ತಿಂಗಳ ಎರಡನೇ ವಾರದಲ್ಲಿ ಆಯೋಜನೆಗೊಳ್ಳುವ ಕೇಲ್ ಮಹೋತ್ಸವ ಅಂಗವಾಗಿ ಪ್ರತಿ ಸಂಸದರ ಕ್ಷೇತ್ರದಲ್ಲಿ ಈ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರ ಕ್ರೀಡೆಗೆ ಪ್ರೋತ್ಸಾಹ ನೀಡಲು ಈ ಕಾರ್ಯಕ್ರಮ ಅನುಷ್ಠಾನಕ್ಕೆ ತಂದಿದೆ. ಕೊಡಗಿನಲ್ಲಿ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹವಿದೆ. ದಾನಿಗಳ ಸಹಕಾರದಿಂದ ಕ್ರೀಡೆ ನಡೆಯುತ್ತಿರುವುದು ಶ್ಲಾಘನೀಯ ಎಂದರು.
ಶಾಸಕ ಎ.ಎಸ್. ಪೊನ್ನಣ್ಣ ಮಾತನಾಡಿ, ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ. ಹೋಬಳಿವಾರು ಮೈದಾನಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಮುಂದೆಯೂ ಕ್ರೀಡೆಗೆ ಸಹಕಾರ ನೀಡಲಾಗುತ್ತದೆ. ಕ್ಷೇತ್ರದ ಶಾಸಕನಾಗಿ ಕ್ರೀಡೆಗೆ ಒತ್ತು ನೀಡಿದ್ದೇನೆ. ಪೊನ್ನಂಪೇಟೆ ಟರ್ಫ್ ಮೈದಾನ ಅಭಿವೃದ್ಧಿಗೆ ೩.೫೦ ಕೋಟಿ ಅನುದಾನ, ಯುವತಿಯರ ವಸತಿ ನಿಲಯ ನಿರ್ಮಾಣಕ್ಕೆ ೫.೫೦ ಕೋಟಿ ಹಾಗೂ ವಿ.ಬಾಡಗದಲ್ಲಿ ೩೩ ಕೋಟಿ ವೆಚ್ಚದಲ್ಲಿ ಕ್ರೀಡಾ ಸೌಲಭ್ಯಗಳನ್ನು ಒದಗಿಸುವ ಮೂಲಕ ಜಿಲ್ಲೆಯ ಕ್ರೀಡಾಪಟುಗಳಿಗೆ ಉತ್ತೇಜನ ನೀಡುವ ಕೆಲಸ ಮಾಡಲಾಗುತ್ತದೆ. ಕೆಲವೇ ದಿನಗಳಲ್ಲಿ ಕಾಮಗಾರಿ ಆರಂಭಕ್ಕೆ ಭೂಮಿ ಪೂಜೆ ನಡೆಯಲಿದೆ. ಮುಂದಿನ ಎರಡು ೪ಐದನೇ ಪುಟಕ್ಕೆ ವರ್ಷದಲ್ಲಿ ಇದರ ಪ್ರಯೋಜನ ಕ್ರೀಡಾಪಟುಗಳಿಗೆ ಲಭಿಸಲಿದೆ ಎಂದು ಹೇಳಿದರು.
ವೈದ್ಯರಾದ ಡಾ. ಎಂ.ಎಸ್. ಬೆಳ್ಯಪ್ಪ ಮಾತನಾಡಿ, ಕೊಡಗಿನಲ್ಲಿ ಕ್ರೀಡಾ ಪ್ರತಿಭೆಗಳಿಗೆ ಮತ್ತಷ್ಟು ಪ್ರೋತ್ಸಾಹ ಸಿಗಬೇಕು, ಹಾಕಿ ಕ್ರೀಡೆಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವ ಅವಕಾಶ ಕೊಡಗಿನ ಕ್ರೀಡಾಪಟುಗಳಿಗೆ ಸಿಗುವಂತಾಗಬೇಕು ಎಂದರು. ಮಾಚಿಮಾಡ ಕಾರ್ಯಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.
ಹಾಕಿ ಕೂರ್ಗ್ ಅಧ್ಯಕ್ಷ ಪಳಂಗAಡ ಲವಕುಮಾರ್, ಉಪಾಧ್ಯಕ್ಷೆ ಮಾಪಂಗಡ ಯಮುನಾ ಚಂಗಪ್ಪ, ದಾನಿಗಳಾದ ಕೇಚೆಟ್ಟಿರ ವಿಜಯ್ ಉತ್ತಯ್ಯ, ಮಾಚಿಮಾಡ ಕಾರ್ಯಪ್ಪ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. ಚೆಪ್ಪುಡೀರ ಕಾರ್ಯಪ್ಪ ವೀಕ್ಷಕ ವಿವರಣೆ ನೀಡಿದರು.
ಪಂದ್ಯಾವಳಿಯಲ್ಲಿ ಕಿಗ್ಗಟ್ ನಾಡ್ ಪ್ಲೇಯಿಂಗ್ ಎಲ್ಬೋಸ್ ತಂಡದ ಪದಾಧಿಕಾರಿಗಳಾದ ಪೃಥ್ವಿ ಕಾರ್ಯಪ್ಪ, ಪ್ರಣಮ್ ಬಿದ್ದಪ್ಪ, ಸಂಪತ್ ಪೂಣಚ್ಚ, ಕೂಕಂಡ ಬಿದ್ದಪ್ಪ, ಅಪ್ಪಚ್ಚು, ಕಾರ್ಯಪ್ಪ, ಧರ್ಮಜ, ದರ್ಶನ್, ಪೆಮ್ಮಂಡ ಬಿದ್ದಪ್ಪ, ಮುತ್ತಣ್ಣ, ಸಂಜಿತ್ ಸೋಮಯ್ಯ, ಸಂದೇಶ್ ಬೆಳ್ಯಪ್ಪ, ಕವನ್ ಕಾರ್ಯಪ್ಪ, ಗೌತಮಿ, ಶೀತಲ್, ಮೊಣ್ಣಪ್ಪ, ಅಜಯ್, ಸಂದೇಶ್, ಇಸಾನ್, ಅರಮಣಮಾಡ ಅಜಯ್, ಮಾಚಿಮಾಡ ಕಾರ್ಯಪ್ಪ, ಮೇಚಮಾಡ ಅಪ್ಪಚ್ಚು, ಮಲ್ಲಮಾಡ ಸನತ್ ಪೂಣಚ್ಚ, ಚಿರಿಯಪಂಡ ಪವನ್ ಬಿದ್ದಪ್ಪ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
- ಹೆಚ್.ಕೆ. ಜಗದೀಶ್