.
ಮಡಿಕೇರಿ, ಅ. ೭: ಮಕ್ಕಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಡುವ ಮಕ್ಕಂದೂರು, ಹೆಮ್ಮೆತ್ತಾಳು, ಮುಕ್ಕೋಡ್ಲು, ಆವಂಡಿ, ಹೊದಕಾನ, ಮೇಘತ್ತಾಳು ಗ್ರಾಮಗಳ ೨೦೨೫-೨೬ನೇ ಸಾಲಿನ ವಾರ್ಡ್ ಸಭೆಗಳು ತಾ.೮ರಂದು(ಇAದು) ನಡೆಯಲಿದೆ.
ಮುಕ್ಕೋಡ್ಲು, ಆವಂಡಿ, ಹೊದಕಾನ, ಮೇಘತ್ತಾಳು ಗ್ರಾಮಗಳ ಸಭೆಯು ಬೆಳಿಗ್ಗೆ ೧೧ ಗಂಟೆಗೆ ಮುಕ್ಕೋಡ್ಲು ಗ್ರಾಮದ ಸೇತುವೆ ಬಳಿಯ ಅಂಗನವಾಡಿ ಕೇಂದ್ರದಲ್ಲಿ ವಾರ್ಡ್ ಸದಸ್ಯ ಕನ್ನಿಕಂಡ ಶ್ಯಾಂ ಸುಬ್ಬಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಮಕ್ಕಂದೂರು ಹಾಗೂ ಹೆಮ್ಮೆತ್ತಾಳು ಗ್ರಾಮಗಳ ಸಭೆ ಮಧ್ಯಾಹ್ನ ೨.೩೦ ಗಂಟೆಗೆ ಮಕ್ಕಂದೂರು ಗ್ರಾಮ ಪಂಚಾಯ್ತಿ ಸಭಾಂಗಣದಲ್ಲಿ ಸದಸ್ಯ ಎಸ್.ಬಿ.ಗಣೇಶ್ ಅಧ್ಯಕ್ಷತೆಯಲ್ಲಿ ನಡೆಯಲಿದೆ.