ಮಡಿಕೇರಿ, ಅ. ೮: ಗಾಳಿಬೀಡು ಜವಾಹರ ನವೋದಯ ವಿದ್ಯಾಲಯ, ಮಡಿಕೇರಿ ಇಲ್ಲಿಗೆ ೨೦೨೬-೨೭ನೇ ಸಾಲಿನಲ್ಲಿ ಖಾಲಿ ಇರುವ ೯ ಮತ್ತು ೧೧ನೇ ತರಗತಿಯ ಪ್ರವೇಶ ಪರೀಕ್ಷೆಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ತಾ. ೨೧ ರವರೆಗೆ ಅವಧಿ ವಿಸ್ತರಿಸಲಾಗಿದೆ. ಪ್ರಸ್ತುತ ೮ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿ ವಿದ್ಯಾರ್ಥಿನಿಯರು ೯ನೇ ತರಗತಿಗೂ ಮತ್ತು ೧೦ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿ ವಿದ್ಯಾರ್ಥಿನಿಯರು ೧೧ನೇ ತರಗತಿಗೂ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಅರ್ಹ ಅಭ್ಯರ್ಥಿಗಳು ಇದರ ಲಾಭವನ್ನು ಪಡೆದುಕೊಳ್ಳಬೇಕೆಂದು ಜವಾಹರ್ ನವೋದಯ ವಿದ್ಯಾಲಯದ ಪ್ರಾಂಶುಪಾಲರಾದ ಸಿ.ವಿ.ಪ್ರಮೀಳಾ ಅವರು ಕೋರಿದ್ದಾರೆ.

ಆನ್‌ಲೈನ್ ಅರ್ಜಿ ಸಲ್ಲಿಸಲು ೯ನೇ ತರಗತಿಗೆ hಣಣಠಿs://ಛಿbsei ಣms.ಟಿiಛಿ.iಟಿ/೨೦೨೫/ಟಿvsix_೯ ಮತ್ತು ೧೧ನೇ ತರಗತಿಗೆ hಣಣಠಿs://ಛಿbseiಣms.ಟಿiಛಿ.iಟಿ/೨೦೨೫/ಟಿvsxi_೧೧ ನ್ನು ಹಾಗೂ ಹೆಚ್ಚಿನ ಮಾಹಿತಿಗೆ ನವೋದಯ ಶಾಲೆಯ ದೂ.ಸಂ. ೯೪೮೧೪೨೬೧೮೪, ೯೩೮೦೮೦೨೧೭೯ ನ್ನು ಸಂಪರ್ಕಿಸಬಹುದು ಎಂದು ಜವಾಹರ್ ನವೋದಯ ವಿದ್ಯಾಲಯದ ಪ್ರಾಂಶುಪಾಲೆ ಸಿ.ವಿ. ಪ್ರಮೀಳಾ ತಿಳಿಸಿದ್ದಾರೆ.