ಕಣಿವೆ, ಅ. ೮: ಅರೆನೀರಾವರಿ ಪ್ರದೇಶಗಳಲ್ಲಿ ರೈತರು ಹೆಚ್ಚಾಗಿ ಬೆಳೆಯುವ ಮುಸುಕಿನ ಜೋಳದ ಬೆಳೆಗೆ ಬಿಳಿಕಡ್ಡಿ ರೋಗಬಾಧೆ ಹೆಚ್ಚಾಗಿ ಬಾಧಿಸುತ್ತಿದೆ. ಇದರಿಂದಾಗಿ ಜೋಳದ ಬೆಳೆ ಹಾನಿಯಾಗುತ್ತಿದ್ದು ರೈತ ಸಂಕುಲ ಆತಂಕಕ್ಕೆ ಸಿಲುಕಿದೆ.

ಬಿತ್ತನೆಗೈದ ೩೦ ರಿಂದ ೫೦ ನೇ ದಿನಗಳಲ್ಲಿ ಬಾಧಿಸುವ ಬಿಳಿಕಡ್ಡಿ ರೋಗ ಬಾಧೆಯಿಂದಾಗಿ ಹಸಿರು ತುಂಬಿಕೊAಡು ಸಮೃದ್ಧಿಯಾಗಿ ಬೆಳೆಯಬೇಕಾದ ಜೋಳದ ಗಿಡಗಳೆಲ್ಲಾ ಬಿಳಿಯ ಬಣ್ಣದಿಂದ ಕಂದು ಬಣ್ಣಕ್ಕೆ ತಿರುಗಿ ಒಣಗಲಾರಂಭಿಸುತ್ತಿದೆ.

ಬಿತ್ತನೆಗೈದ ಜೋಳ ಭೂಮಿಯ ಮೇಲೆ ಕಾಣಿಸಿಕೊಳ್ಳುತ್ತಿದ್ದಂತೆಯೇ ರೈತರು ಭೂಮಿಯ ಮಣ್ಣು ಹಾಗೂ ಮನುಷ್ಯನ ಆರೋಗ್ಯಕ್ಕೆ ಮಾರಕವಾದ ರಾಸಾಯನಿಕ ಔಷಧಿಯನ್ನು ಸಿಂಪಡಿಸಿಯೇ ಬೆಳೆ ಬೆಳೆಯುವತ್ತ ಉತ್ಸುಕರಾಗುತ್ತಿದ್ದಾರೆ.

ಇತÀರ ಫಸಲುಗಳಿಗೆ ಹೋಲಿಸಿದಾಗ ಕಡಿಮೆ ಖರ್ಚಿನೊಂದಿಗೆ ಒಂದಷ್ಟು ಸೀಮಿತ ಆದಾಯ ತಂದುಕೊಡುತ್ತಿದ್ದ ಈ ಮುಸುಕಿನ ಜೋಳದ ಬೆಳೆ ಇದೀಗ ರೈತರಿಗೆ ಜೇಬು ಖಾಲಿ ಮಾಡುವ ಬೆಳೆಯಾಗಿ ಮಾರ್ಪಟ್ಟಿದೆ ಎಂಬುದು ಕುಶಾಲನಗರ ತಾಲೂಕಿನ ಬಹಳಷ್ಟು ರೈತರ ಅಳಲು. ಕೃಷಿ ಇಲಾಖೆ ಕೂಡಲೇ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ರೈತರಿಗೆ ಬೇಕಾದ ರೋಗ ರಹಿತ ಬಿತ್ತನೆ ಬೀಜಗಳ ಸರಬರಾಜು ಹಾಗೂ ನಿರ್ವಹಣೆಗೆ ಮುಂದಾಗಬೇಕೆAದು ಇಲಾಖಾ ಅಧಿಕಾರಿಗಳಿಗೆ ರೈತ ಸಂಕುಲ ಅಹವಾಲು ಇಟ್ಟಿದೆ. ಒಂದು ಎಕರೆ ಭೂಮಿಯಲ್ಲಿ ಮುಸುಕಿನ ಜೋಳ ಬೆಳೆಯಲು ೧೫ ರಿಂದ ೨೦ ಸಾವಿರ ಖರ್ಚು ಬರುತ್ತದೆ.

ಇದೇ ಒಂದು ಎಕರೆ ಭೂಮಿಯಲ್ಲಿ ಬಿತ್ತನೆ ಗೈದ ಜೋಳದ ಫಸಲು ಚೆನ್ನಾಗಿ ಬೆಳೆದು ಫಸಲು ಬಂದರೆ ೨೦ ರಿಂದ ೨೫ ಕ್ವಿಂಟಾಲ್ ಜೋಳದ ಫಸಲು ರೈತನ ಕೈ ಸೇರಿದರೆ ಮಾರುಕಟ್ಟೆಯಲ್ಲಿ ಈಗ ಇರುವ ಕ್ವಿಂಟಾಲ್‌ಗೆ ಕನಿಷ್ಟ ೨೦೦೦ ದಿಂದ ಗರಿಷ್ಠ ೨೨೦೦ ರೂಪಾಯಿಗಳಿಗೆ ಮಾರಾಟ ಮಾಡಿದಲ್ಲಿ ೪೫ ರಿಂದ ೫೦ ಸಾವಿರ ಒಟ್ಟು ಹಣವಾಗುತ್ತದೆ. ಇದರಲ್ಲಿ ಖರ್ಚು ಕಳೆದರೆ ೧೨೦ ದಿನಗಳಲ್ಲಿ ಬೆಳೆದು ಕಟಾವಿಗೆ ಬರುವ ಜೋಳದ ಫಸಲಿನಿಂದ ಖರ್ಚು ಕಳೆದು ೧೫ ರಿಂದ ೨೦ ಸಾವಿರ ಆದಾಯ ಬರುತ್ತದೆ. ಆದರೆ ಈಗ ಬಾಧಿಸುತ್ತಿರುವ ಬಿಳಿಕಡ್ಡಿ ರೋಗ ಬಾಧೆಯಿಂದ ರೈತರಿಗೆ ಆರ್ಥಿಕವಾಗಿ ಅಪಾರ ಸಂಕಷ್ಟವಾಗುತ್ತಿದೆ ಎಂದು ತೊರೆನೂರು ಪ್ರಗತಿ ಪರ ಕೃಷಿಕ ಮಹಿಳೆ ಟಿ.ಎಲ್. ರೂಪ ಮಹೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ವರ್ಷ ಅಪಾರ ಪ್ರಮಾಣದ ಮಳೆ ಸುರಿದು ಶುಂಠಿ ಬೆಳೆ ಕೈ ಕೊಟ್ಟಿತು. ಈ ಬಾರಿ ಜೋಳಕ್ಕೂ ಮಾರಕ ರೋಗ ಬಾಧೆ ಉಂಟಾದರೆ ಭೂಮಿಯನ್ನೇ ನಂಬಿ ಉಳುಮೆ ಮಾಡಿ ಬದುಕುವ ರೈತಾಪಿಗಳ ಸಂಕಷ್ಟ ಕೇಳುವವರಾರು ಎಂದು ಕೃಷಿಕರು "ಶಕ್ತಿ"ಯೊಂದಿಗೆ ಅಳಲು ತೋಡಿಕೊಂಡಿದ್ದಾರೆ.