ಮಡಿಕೇರಿ, ಅ. ೮: ಮಡಿಕೇರಿಯ ಪೊಲೀಸ್ ಕ್ಯಾಂಟೀನ್ನ ಸಭಾಂಗಣದಲ್ಲಿ ನಗರದ ಪೊಲೀಸ್ ಸಿಬ್ಬಂದಿಗೆ ಫೊರ್ಟಿಸ್, ಬೆಂಗಳೂರು ಆಸ್ಪತ್ರೆ ವತಿಯಿಂದ ಉಚಿತ ಮೂಳೆ ತಪಾಸಣಾ ಹಾಗೂ ಚಿಕಿತ್ಸೆ ಏರ್ಪಾಡು ಶಿಬಿರವನ್ನು ಏರ್ಪಡಿಸಲಾಗಿತ್ತು.
ಶಿಬಿರದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಫೊರ್ಟಿಸ್ ಆಸ್ಪತ್ರೆಡ ವೈದ್ಯ ಡಾ. ಕೆ. ಮೋಹನ್ ಪುಟ್ಟಸ್ವಾಮಿಯವರು ಮನುಷ್ಯನ ಆರೋಗ್ಯ ಕಾಪಾಡುವಲ್ಲಿ ಮೂಳೆಗಳ ಪಾತ್ರವನ್ನು ವಿವರಿಸುತ್ತಾ ದುರಾಭ್ಯಾಸಗಳಿಂದ ದೂರವಿರಲು ಹೇಳಿ, ವ್ಯಾಯಾಮಗಳ ಅಗತ್ಯವನ್ನು ವಿವರಿಸಿದರು. ಸಭೆಯಲ್ಲಿ ಸಹಾಯಕ ವೈದ್ಯರು ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಬಾರಿಕೆ ದಿನೇಶ್ ಕುಮಾರ್, ಇನ್ಸ್ಪೆಕ್ಟರ್ ಮೇದಪ್ಪ ಹಾಗೂ ಇತರೆ ಗಣ್ಯರು ಇದ್ದರು. ಕೊನೆಯಲ್ಲಿ ಸಿಬ್ಬಂದಿಯವರ ಪ್ರಶ್ನೆಗಳಿಗೆ ಉತ್ತರಿಸಿದರು.
ಅಗತ್ಯ ಚಿಕಿತ್ಸೆಯನ್ನು ವೈದ್ಯ ಸಿಬ್ಬಂದಿಯವರು ನೀಡಿದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಬಾರಿಕೆ ದಿನೇಶ್ಕುಮಾರ್ರವರು ವಂದಿಸಿದರು.