ಕರಿಕೆ, ಅ. ೮: ತಲಕಾವೇರಿ ಅಭಯಾರಣ್ಯದೊಳಗಿನ ಭಾಗಮಂಡಲ ಕರಿಕೆ ರಸ್ತೆಯ ಕೊಟ್ಟೆಮಲೆ ಎಂಬಲ್ಲಿ ರಸ್ತೆಯಲ್ಲಿ ಬೃಹತ್ ಗಾತ್ರದ ಕಾಡುಕೋಣ ಪ್ರತ್ಯಕ್ಷವಾಗಿ ರಸ್ತೆ ಉದ್ದಕ್ಕೂ ಅಡ್ಡಾದಿಡ್ಡಿ ಸಂಚರಿಸಿದ ಪರಿಣಾಮ ಅರ್ಧ ಗಂಟೆಗಳ ಕಾಲ ಸಾರಿಗೆ ಸಂಸ್ಥೆಯ ಬಸ್ ಹಾಗೂ ಇತರ ವಾಹನ ಸವಾರರು ಪರದಾಡಿದ ಘಟನೆ ನಡೆಯಿತು. ಇದರಿಂದ ಕೆಲಕಾಲ ಪ್ರಯಾಣಿಕರು ಭಯಭೀತರಾದರು.