ಐಗೂರು, ಅ. ೮: ರಾಷ್ಟಿçÃಯ ಮಿಕ್ಸ್ ಬಾಕ್ಸಿಂಗ್ ಫೆಡರೇಶನ್ ನಡೆಸಿದ ರಾಷ್ಟಿçÃಯ ತೀರ್ಪುಗಾರರ ಅರ್ಹತಾ ಪರೀಕ್ಷೆಯಲ್ಲಿ ಭಾಗವಹಿಸಿದ್ದ ಕರ್ನಾಟಕ ಮಿಕ್ಸ್ ಬಾಕ್ಸಿಂಗ್ ಸಂಸ್ಥೆಯ ಒಟ್ಟು ೨೦ ಅಭ್ಯರ್ಥಿಗಳು ತೇರ್ಗಡೆ ಹೊಂದಿದ್ದಾರೆ.

ಕೊಡಗು ಜಿಲ್ಲೆಯಿಂದ ಭಾಗವಹಿಸಿದ್ದ ಶರಣ್ಯ ಎ. ಶೆಟ್ಟಿ, ಮನ್ವಿತ್ ಮೋಹನ್, ಬಿ.ಕೆ. ಸುರೇಶ್ ಪೂಜಾರಿ, ಹೆಚ್.ಆರ್. ವೃಂದ, ಅಜಯ್ ಎನ್.ಎಸ್., ಯಶಸ್ ಪಿ. ಮತ್ತು ಕೃತಿಕ್ ಯು.ಸಿ. ರಾಷ್ಟçಮಟ್ಟದ ಪಂದ್ಯಾವಳಿಗಳ ತೀರ್ಪುಗಾರಿಕೆ ನಡೆಸಲು ಇದೀಗ ಅರ್ಹರಾಗಿದ್ದಾರೆ.

ವರ್ಲ್ಡ್ ಮಿಕ್ಸ್ ಬಾಕ್ಸಿಂಗ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ರಾಕೇಶ್, ಕರ್ನಾಟಕ ಮಿಕ್ಸ್ ಬಾಕ್ಸಿಂಗ್ ಅಸೋಸಿಯೇಷನ್‌ನ ಅಧ್ಯಕ್ಷ ಎನ್.ಸಿ. ಸುದರ್ಶನ್ ಮತ್ತು ಸಂಸ್ಥೆಯ ಹಿರಿಯ ತರಬೇತುದಾರ ಹೊನ್ನಗಂಗಪ್ಪ ಭಾಗವಹಿಸಿದ್ದರು.