ಹೆಚ್.ಕೆ. ಜಗದೀಶ್

ಗೋಣಿಕೊಪ್ಪಲು, ಅ. ೮: ಮೊದಲ ಬಾರಿಗೆ ಪ್ರತಿಷ್ಠಿತ ಇಸ್ರೋ ಸಂಸ್ಥೆಯ ೧೮ ವಿಜ್ಞಾನಿಗಳು ಗೋಣಿಕೊಪ್ಪಲುವಿನ ಕಾಪ್ಸ್ ವಿದ್ಯಾಸಂಸ್ಥೆಗೆ ಆಗಮಿಸುವ ಮೂಲಕ ವಿದ್ಯಾರ್ಥಿಗಳೊಂದಿಗೆ ಮುಕ್ತವಾಗಿ ಬೆರೆಯುವ ಮೂಲಕ ಭವಿಷ್ಯದಲ್ಲಿ ವಿದ್ಯಾರ್ಥಿಗಳು ರೂಪಿಸಬಹುದಾದ ಯೋಜನೆಗಳ ಬಗ್ಗೆ ಬೆಳಕು ಚೆಲ್ಲಿದರು. ಜಿಲ್ಲೆಯ ೨೦ಕ್ಕೂ ಅಧಿಕ ಪ್ರೌಢ ಹಾಗೂ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪಾಲ್ಗೊಳ್ಳುವ ಮೂಲಕ ವಿಶ್ವ ಬಾಹ್ಯಾಕಾಶ ಸಪ್ತಾಹದಲ್ಲಿ ಭಾಗಿಗಳಾದರು.

ಇಸ್ರೋ ವಿಜ್ಞಾನಿಗಳ ಆಗಮನಕ್ಕಾಗಿ ಎದುರುನೋಡುತ್ತಿದ್ದ ಕಾಪ್ಸ್ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ವಿಜ್ಞಾನಿಗಳು ಆಗಮಿಸುತ್ತಿದ್ದಂತೆಯೆ ಬರಮಾಡಿಕೊಂಡರು. ಎನ್‌ಸಿಸಿ ವಿದ್ಯಾರ್ಥಿಗಳು ಗೌರವ ನೀಡುವ ಮೂಲಕ ವೇದಿಕೆಗೆ ಕರೆ ತಂದರು.

ಜಿಲ್ಲೆಯ ವಿದ್ಯಾರ್ಥಿಗಳಿಗೆ ಇಸ್ರೋ ವಿಜ್ಞಾನಿಗಳನ್ನು ಅತ್ಯಂತ ಸಮೀಪದಿಂದ ನೋಡುವ ಹಾಗೂ ಅವರೊಂದಿಗೆ ಮುಕ್ತವಾಗಿ ವಿಚಾರ ವಿನಿಮಯ ನಡೆಸುವ ಅವಕಾಶವನ್ನು ಕಾಪ್ಸ್ ಸಂಸ್ಥೆ ಕಲ್ಪಿಸಿತ್ತು. ಸಂಸ್ಥೆಯ ಆವರಣದಲ್ಲಿ ಇಸ್ರೋದ ವತಿಯಿಂದ ಉಪಗ್ರಹ ಹಾಗೂ ರಾಕೆಟ್ ಮಾದರಿಗಳ ಪ್ರದರ್ಶನ ನಡೆಯಿತು. ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಇವುಗಳ ವೀಕ್ಷಣೆ ಮಾಡಿದರು.

ಗೋಣಿಕೊಪ್ಪ ಕೂರ್ಗ್ ಪಬ್ಲಿಕ್ ಶಾಲೆ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಯು.ಆರ್.ರಾವ್ ಉಪಗ್ರಹ ಕೇಂದ್ರ-ಬೆAಗಳೂರು ಸಹಯೋಗದಲ್ಲಿ ಅಂತರರಾಷ್ಟಿçÃಯ ಅಂತರಿಕ್ಷ ವಾರಾಚರÀಣೆÀ-೨೦೨೫ಅನ್ನು ಕಾಪ್ಸ್ ವಿದ್ಯಾಸಂಸ್ಥೆಯು ಅತ್ಯಂತ ಯಶಸ್ವಿಯಾಗಿ ಆಚರಿಸಿತು.

ಕಾಪ್ಸ್ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಕೆ. ಧನ್ಯ ಸುಬ್ಬಯ್ಯ ಅಧ್ಯಕ್ಷತೆಯಲ್ಲಿ ಆರಂಭವಾದ ಸಭಾ ಕಾರ್ಯಕ್ರಮವನ್ನು ಶಾಲೆಯ ಹಿರಿಯ ವಿದ್ಯಾರ್ಥಿ ವಿಜ್ಞಾನಿ ಡಾ.ಕೊಳ್ಳಿಮಾಡ ಸೋಮಣ್ಣ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಇಸ್ರೋದ ಹಿರಿಯ ವಿಜ್ಞಾನಿ ಸಂಜೀವ್ ಕುಮಾರ್ ಮಾತನಾಡಿ, ವಿಜ್ಞಾನ ಪ್ರಪಂಚದ ೯೦ಕ್ಕೂ ಹೆಚ್ಚು ದೇಶಗಳಲ್ಲಿ ಆಚರಿಸಲಾಗುವ ವಿಶ್ವ ಬಾಹ್ಯಕಾಶ ಸಪ್ತಾಹವು ಅಕ್ಟೋಬರ್ ತಿಂಗಳಿನಲ್ಲಿ ನಡೆಯುತ್ತಿದೆ.

ಇದು ಜಗತ್ತಿನ ಅತಿದೊಡ್ಡ ಆಂತರಿಕ ಉತ್ಸವವಾಗಿದೆ. ‘ಅಂತರಿಕ್ಷ ಮತ್ತು ಹವಾಮಾನ ಬದಲಾವಣೆ’ ಬಾಹ್ಯಾಕಾಶ ವಿಜ್ಞಾನವು ವಾತಾವರಣ ಸವಾಲುಗಳಿಗೆ ಹೇಗೆ ಪರಿಹಾರ ಒದಗಿಸಬಹುದು ಎಂಬುದರ ಮೇಲೆ ಚರ್ಚೆ ನಡೆಸುವುದು ಹಾಗೂ ವಿದ್ಯಾರ್ಥಿಗಳಲ್ಲಿ ವಿಜ್ಞಾನÀದ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಿಸುವುದು ಸಪ್ತಾಹದ ಮೂಲ ಉದ್ದೇಶವಾಗಿದೆ ಎಂದರು.