ಮಡಿಕೇರಿ, ಅ. ೮: ಭಾಗಮಂಡಲದ ಶ್ರೀ ಭಗಂಡೇಶ್ವರ - ತಲಕಾವೇರಿ ದೇವಾಲಯಗಳಲ್ಲಿ ವಾರ್ಷಿಕ ಸಂಪ್ರದಾಯದAತೆ, “ಶ್ರೀ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ’ ನಡೆಯಲಿದ್ದು, ತಾ. ೧೭.೧೦.೨೦೨೫ ರಂದು ಶುಕ್ರವಾರ ಮಧ್ಯಾಹ್ನ ೧:೪೪ ನಿಮಿಷಕ್ಕೆ ಸಲ್ಲುವ ಮಕರ ಲಗ್ನದಲ್ಲಿ ಕಾವೇರಿ ತೀರ್ಥರೂಪಿಣಿಯಾಗಿ ಆಗಮಿಸುತ್ತಾಳೆ. ಈ ವರ್ಷ ಮಧ್ಯಾಹ್ನ ಸಮಯದಲ್ಲಿ ತೀರ್ಥೋದ್ಭವವು ಜರುಗಲಿರುವುದರಿಂದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾವೇರಿ ಮಾತೆಯ ದರ್ಶನವನ್ನು ಪಡೆಯಲು ಆಗಮಿಸುವ ನಿರೀಕ್ಷೆಯಿರುವುದರಿಂದ ಜಿಲ್ಲಾಡಳಿತದಿಂದ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ವೆಂಕಟ್‌ರಾಜಾ ತಿಳಿಸಿದ್ದಾರೆ.
ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ವಿವಿಧ ಕಾರ್ಯಕ್ರಮಗಳನ್ನು ನಡೆಸಲು ಹಾಗೂ ಇತರ ನಿರ್ವಹಣೆಗಾಗಿ ಕಾವೇರಿ ನೀರಾವರಿ ನಿಗಮ ನಿಯಮಿತದ ವತಿಯಿಂದ ರೂ. ೨ ಕೋಟಿ ಅನುದಾನವನ್ನು ಹಾಗೂ ಜಾತ್ರೆಗೆ ಬರುವ ಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಸರ್ಕಾರದ ವತಿಯಿಂದ ಮುಜರಾಯಿ ಇಲಾಖೆಯ ಮೂಲಕ ರೂ. ೭೫ ಲಕ್ಷಗಳ ಅನುದಾನವನ್ನು ಮಂಜೂರು ಮಾಡಿ ಆದೇಶಿಸಿರುತ್ತಾರೆ. ಶ್ರೀ ಭಗಂಡೇಶ್ವರ ಮತ್ತು ತಲಕಾವೇರಿ ದೇವಾಲಯಗಳಿಗೆ ವಿದ್ಯುತ್ ದೀಪಾಲಂಕಾರ, ಬ್ಯಾರಿಕೇಡ್ ಅಳವಡಿಕೆ, ವೇದಿಕೆ ನಿರ್ಮಾಣ, ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಮಳೆಯಿಂದ ರಕ್ಷಣೆಗಾಗಿ ಮೆಟಲ್ ಶೀಟ್, ಪೆಂಡಾಲ್‌ಗಳು, ಹೂವಿನ ಅಲಂಕಾರ, ತೀರ್ಥೋದ್ಭವದ ವೀಕ್ಷಣೆಯ ವೇಳೆ ನೂಕುನುಗ್ಗಲು ಉಂಟಾಗದAತೆ ಎಲ್.ಇ.ಡಿ. ಪರದೆಗಳು, ಫೋಟೋಗ್ರಾಫಿ ಮತ್ತು ಭಕ್ತಾದಿಗಳ ಭದ್ರತೆಯ ದೃಷ್ಟಿಯಿಂದ ಅವಶ್ಯವಿರುವ ಕಡೆಗಳಲ್ಲಿ ಸಿ.ಸಿ ಕ್ಯಾಮರಾ ಅಳವಡಿಕೆಗಳಿಗೆ ಸಂಬAಧಿಸಿದAತೆ ಈಗಾಗಲೇ ಕೆಟಿಪಿಪಿರಂತೆ ಇ-ಟೆಂಡರ್ ಅನ್ನು ಆಹ್ವಾನಿಸಿ ಸೂಕ್ತ ಗುತ್ತಿಗೆದಾರರನ್ನು ಗುರುತಿಸಿಕೊಂಡು ಕಾರ್ಯಾದೇಶವನ್ನು ನೀಡಲಾಗಿದೆ.
ಭಾಗಮಂಡಲ ಮತ್ತು ತಲಕಾವೇರಿಯಲ್ಲಿ ಅತೀ ಹೆಚ್ಚು ಮಳೆಯಿಂದಾಗಿ ದೇವಾಲಯಗಳ ಗೋಪುರ, ನೆಲಹಾಸು ಅಲಂಕಾರಿಕ ಕಲ್ಲುಗಳ ಶುಚಿತ್ವ, ಸುಣ್ಣ-ಬಣ್ಣಗಳು ಮತ್ತು ಕಾವೇರಿ ನೀರಾವರಿ ನಿಗಮದ ವತಿಯಿಂದ ತ್ರಿವೇಣಿ ಸಂಗಮ ಸ್ನಾನಘಟ್ಟದಲ್ಲಿ ಹೂಳೆತ್ತುವುದು ಹಾಗೂ ದೇವಾಲಯದ ಆವರಣಗಳು ಮತ್ತು ಭಾಗಮಂಡಲಕ್ಕೆ ಸಂಪರ್ಕಿಸುವ ರಸ್ತೆಗಳ ಇಕ್ಕೆಲಗಳಲ್ಲಿ ಕಾಡು ಕಡಿದು ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡುವ ಕೆಲಸ ಪ್ರಗತಿಯಲ್ಲಿದೆ ಎಂದು ಜಿಲ್ಲಾಧಿಕಾರಿ ಮಾಹಿತಿಯಿತ್ತಿದ್ದಾರೆ.
ಪಾರ್ಕಿಂಗ್ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ, ಪಿಂಡಪ್ರದಾನ, ಕೇಶಮುಂಡನಕ್ಕೆ ಸೂಕ್ತ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಭಾಗಮಂಡಲ ಪಟ್ಟಣವೂ ಜಾತ್ರೋತ್ಸವಕ್ಕೆ ಶೃಂಗಾರಗೊಳ್ಳುತ್ತಿದೆ ಎಂದು ತಲಕಾವೇರಿ - ಭಾಗಮಂಡಲ ವ್ಯವಸ್ಥಾಪನಾ ಸಮಿತಿ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಅವರು ತಿಳಿಸಿದ್ದಾರೆ.
೨೫ ಬಸ್ ವ್ಯವಸ್ಥೆ
ಭಾಗಮಂಡಲ - ತಲಕಾವೇರಿ ನಡುವೆ ಕೆ.ಎಸ್.ಆರ್.ಟಿ.ಸಿ.ಯಿಂದ ಭಕ್ತರ ಅನುಕೂಲಕ್ಕಾಗಿ ೨೫ ಕೆ.ಎಸ್.ಆರ್.ಟಿ.ಸಿ. ಬಸ್‌ಗಳನ್ನು ವ್ಯವಸ್ಥೆ ಮಾಡಲಾಗುತ್ತಿದೆ. ಈ ಬಸ್‌ಗಳು ಭಕ್ತರ ಪ್ರಯಾಣಕ್ಕೆ ಉಚಿತವಾಗಿರಲಿದ್ದು, ಇದರ ವೆಚ್ಚವನ್ನು ಸರಕಾರದ ಅನುದಾನದಲ್ಲಿ ಭರಿಸಲಾಗುವುದು. ಇದಲ್ಲದೆ, ಮಡಿಕೇರಿ, ವೀರಾಜಪೇಟೆ, ಗೋಣಿಕೊಪ್ಪ ಮತ್ತಿತರ ಕಡೆಗಳಿಂದ ಹೆಚ್ಚುವರಿ ಬಸ್‌ಗಳನ್ನು ವ್ಯವಸ್ಥೆ ನೋಡಿಕೊಂಡು ಕಲ್ಪಿಸಲಾಗುವುದು. ಆದರೆ ಈ ಬಸ್‌ಗಳ ಪ್ರಯಾಣ ಉಚಿತವಲ್ಲ ಎಂದು ಕೆ.ಎಸ್.ಆರ್.ಟಿ.ಸಿ. ವ್ಯವಸ್ಥಾಪಕರಾದ ಈರಸಪ್ಪ ಎ. ಅವರು ಮಾಹಿತಿ ನೀಡಿದ್ದಾರೆ.
ರೂ. ೨ ಕೋಟಿ : ಕೆಲವು ಕಾಮಗಾರಿಗೆ ಅನುಮೋದನೆ
ಕಾವೇರಿ ನೀರಾವರಿ ನಿಗಮ (ನಿ), ಹಾರಂಗಿ ಪುನರ್ವಸತಿ ವಿಭಾಗ, ಕುಶಾಲನಗರ ಇವರು ಒದಗಿಸಿದ ರೂ. ೨ ಕೋಟಿ ವಿಶೇಷ ಅನುದಾನದಲ್ಲಿ ಮಡಿಕೇರಿ ತಾಲೂಕಿನ ಭಾಗಮಂಡಲ ಶ್ರೀ ಭಗಂಡೇಶ್ವರ, ತಲಕಾವೇರಿ ದೇವಾಲಯಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ಅನುಮೋದನೆಗೊಂಡಿದ್ದು ಕೆಲವು ಕಾಮಗಾರಿಗಳು ಪ್ರಗತಿಯಲ್ಲಿವೆ. ಇದರ ಕಾಮಗಾರಿ ನಿರ್ಮಿತಿ ಕೇಂದ್ರದ ಮೂಲಕ ನಡೆಯಲಿದೆ.
ಭಾಗಮಂಡಲ ದೇವಸ್ಥಾನದ ಮುಂಭಾಗ ವಾಣಿಜ್ಯ ಮಳಿಗೆಗಳು, ಕೇಶಮುಂಡನ ಮತ್ತು ಪಿಂಡಪ್ರದಾನ ಕಟ್ಟಡದ ದುರಸ್ತಿ, ತ್ರಿವೇಣಿ ಸಂಗಮದ ಹತ್ತಿರ ಹೈಮಾಸ್ಟ್ ಲೈಟ್, ತ್ರಿವೇಣಿ ಸಂಗಮದ ಹತ್ತಿರ ಗ್ರಿಲ್‌ಗೆ ತಳಪಾಯ ಕಾಮಗಾರಿ, ಪಿಂಡಪ್ರದಾನ ಕಟ್ಟಡದ ಮುಂಭಾಗ ಕಾಂಕ್ರೀಟ್ ಕಾಮಗಾರಿ ಇದರಲ್ಲಿ ಸೇರಿದೆ. ಅಲ್ಲದೆ, ತಲಕಾವೇರಿಯಲ್ಲಿ ಅನ್ನದಾಸೋಹ ಜಾಗದ ಹತ್ತಿರವಿರುವ ಭಕ್ತಾದಿಗಳು ಕೈ ತೊಳೆಯುವ ಜಾಗದಲ್ಲಿ ಶೀಟ್ ಅಳವಡಿಸುವ ಕಾಮಗಾರಿ, ತಲಕಾವೇರಿಯಲ್ಲಿ ನೆಲಹಾಸು ದುರಸ್ತಿ ಮತ್ತು ಆರ್ಚ್ನಿಂದ ಮೆಟ್ಟಿಲುಗಳವರೆಗೆ ಪಾದಚಾರಿ ರಸ್ತೆಗೆ ಶೀಟ್ ಅಳವಡಿಸುವುದು, ಪಾದಚಾರಿ ನೆಲಹಾಸು ಮತ್ತು ಶೀಟ್ ಅಳವಡಿಸುವ ಕಾಮಗಾರಿಗಳು ಕಾವೇರಿ ನೀರಾವರಿ ನಿಗಮದ ಅನುದಾನದಡಿ ಕೈಗೊಳ್ಳಲಾಗುವುದು ಎಂದು ನಿರ್ಮಿತಿ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.