ನಾಪೋಕ್ಲು, ಅ. ೯: ಇತಿಹಾಸ ಪ್ರಸಿದ್ಧ ಎಮ್ಮೆಮಾಡುವಿನ ೨೦೨೬ರ ಸಾಲಿನ ಉರೂಸ್ ಕಾರ್ಯಕ್ರಮ ಏಪ್ರಿಲ್ ೧೭ ರಿಂದ ೨೪ ರವರೆಗೆ ನಡೆಯಲಿದೆ. ಈ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆಯನ್ನು ಮರ್ಕಜ್ ಸಂಸ್ಥೆಯಲ್ಲಿ ಇಂಡಿಯನ್ ಗ್ರಾಂಡ್ ಮುಫ್ತಿ ಹಾಗೂ ಕೊಡಗು ಜಿಲ್ಲಾ ಖಾಜಿಗಳಾದ ಕಾಂತಪುರA ಎ.ಪಿ. ಅಬೂಬಕರ್ ಮುಸ್ಲಿಯರ್ ನೆರವೇರಿಸಿದರು.
ಈ ಸಂದರ್ಭ ಜಮಾಅತ್ ಅಧ್ಯಕ್ಷ ಹುಸೇನ್ ಸಖಾಫಿ, ಮಾಜಿ ಅಧ್ಯಕ್ಷ ಅಬೂಬಕರ್, ಮಜೀದ್ ಕೆ.ಎಸ್., ಹನಿಫಾ, ಅಶ್ರಫ್ ಸಿ.ಎಂ., ಹ್ಯಾರಿಸ್, ಯೂಸುಫ್ ಉಪಸ್ಥಿತರಿದ್ದರು.