ಮಡಿಕೇರಿ, ಅ. ೯ : ಮಡಿಕೇರಿ ನಗರ ದಸರಾ ಕ್ರೀಡಾ ಸಮಿತಿ ವತಿಯಿಂದ ದಸರಾ ಪ್ರಯುಕ್ತ ತಾ. ೧೨ರಂದು ನಗರದ ಗಾಂಧಿ ಮೈದಾನದಲ್ಲಿ ಹೊನಲು ಬೆಳಕಿನ ಮುಕ್ತ ಕಬಡ್ಡಿ ಪಂದ್ಯಾಟ ಆಯೋಜಿಸಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಪ್ರದೀಪ್ ಕರ್ಕೆರ ತಿಳಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ದಸರಾ ಸಂದರ್ಭ ಮಳೆಯಿಂದಾಗಿ ಮುಂದೂಡಲ್ಪಟ್ಟ ಪಂದ್ಯಾಟವನ್ನು ತಾ. ೧೨ರಂದು ಹಮ್ಮಿಕೊಳ್ಳಲಾಗಿದೆ. ಅಂದು ಮಧ್ಯಾಹ್ನ ೨ ಗಂಟೆಗೆ ಪಂದ್ಯಾಟವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್. ಭೋಸರಾಜು ಅವರು ಉದ್ಘಾಟಿಸಲಿದ್ದಾರೆ. ತಾನು ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಮಡಿಕೇರಿ ಶಾಸಕ ಡಾ. ಮಂತರ್ ಗೌಡ, ವೀರಾಜಪೇಟೆ ಶಾಸಕರು, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ, ಸಂಸದ ಯದುವೀರ್ ಒಡೆಯರ್, ನಗರಸಭೆ, ನಗರ ದಸರಾ ಸಮಿತಿ ಅಧ್ಯಕ್ಷೆ ಪಿ. ಕಲಾವತಿ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಶಕ್ತಿ ದಿನಪತ್ರಿಕೆ ಸಂಪಾದಕ ಜಿ. ಚಿದ್ವಿಲಾಸ್, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ, ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಅನಿಲ್ ಎಚ್.ಟಿ., ಕೊಡಗು ಪ್ರಸ್‌ಕ್ಲಬ್ ಅಧ್ಯಕ್ಷ ಬೊಳ್ಳಜ್ಜೀರ ಅಯ್ಯಪ್ಪ ನಗರಸಭೆ ಉಪಾಧ್ಯಕ್ಷ, ದಸರಾ ಸಮಿತಿ ಉಪಾಧ್ಯಕ್ಷ ಮಹೇಶ್ ಜೈನಿ, ದಸರಾ ಸಮಿತಿ ಕಾರ್ಯಾಧ್ಯಕ್ಷ ಬಿ.ಕೆ. ಅರುಣ್ ಕುಮಾರ್, ಪ್ರಧಾನ ಕಾರ್ಯದರ್ಶಿ ಅರುಣ್ ಶೆಟ್ಟಿ, ಖಜಾಂಚಿ ಸಬಿತಾ, ಪೌರಾಯುಕ್ತ ರಮೇಶ್, ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಕುಡೆಕಲ್ ಸಂತೋಷ್ ಸೇರಿದಂತೆ ದಸರಾ ಸಮಿತಿ ಪದಾಧಿಕಾರಿಗಳು, ನಗರಸಭಾ ಸದಸ್ಯರುಗಳು ಪಾಲ್ಗೊಳ್ಳಲಿದ್ದಾರೆ ಎಂದು ಪ್ರದೀಪ್ ಕರ್ಕೆರ ಮಾಹಿತಿಯಿತ್ತರು.

ಕಬಡ್ಡಿಯಲ್ಲಿ ಪಾಲ್ಗೊಳ್ಳುವ ತಂಡಗಳು ತಾ. ೧೨ರಂದು ಮಧ್ಯಾಹ್ನ ೨ ಗಂಟೆಯೊಳಗೆ ಮೈದಾನದಲ್ಲಿಯೆ ಹೆಸರು ನೋಂದಾಯಿಸಿಕೊಳ್ಳಬಹು ದಾಗಿದೆ. ೧೦ ರಿಂದ ೨೦ ತಂಡಗಳು ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ನಾಕೌಟ್ ಮಾದರಿಯಲ್ಲಿ ಪಂದ್ಯಾಟ ನಡೆಯಲಿದೆ. ಪುರಷರ ವಿಭಾಗದಲ್ಲಿ ವಿಜೇತ ತಂಡಗಳಿಗೆ ಮೊದಲ ಬಹುಮಾನವಾಗಿ ಒಂದು ಲಕ್ಷದ ಒಂದು ರೂಪಾಯಿ, ದ್ವಿತೀಯ ಬಹುಮಾನವಾಗಿ ಐವತ್ತು ಸಾವಿರದ ಒಂದು ರೂಪಾಯಿ, ತೃತೀಯ ಬಹುಮಾನವಾಗಿ ಇಪ್ಪತ್ತೆöÊದು ಸಾವಿರದ ಒಂದು ರೂಪಾಯಿ ಹಾಗೂ ಟ್ರೋಫಿ ನೀಡಲಾಗುತ್ತದೆ. ಮಹಿಳೆಯರ ವಿಭಾಗದಲ್ಲಿ ವಿಜೇತ ತಂಡಕ್ಕೆ ಹದಿನೈದು ಸಾವಿರದ ಒಂದು ರೂಪಾಯಿ, (ಮೊದಲ ಪುಟದಿಂದ) ನದ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ ಹತ್ತು ಸಾವಿರದ ಒಂದು ರೂಪಾಯಿ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ ಮೊ. ೭೩೩೮೫೪೭೮೯೭ ದೂರವಾಣಿಯನ್ನು ಸಂಪರ್ಕಿಸಬಹುದು ಎಂದು ಪ್ರದೀಪ್ ಕರ್ಕೆರ ತಿಳಿಸಿದರು. ಇದೇ ವೇಳೆ ಕಬಡ್ಡಿ ಪಂದ್ಯಾಟದ ಆಮಂತ್ರಣ ಪತ್ರ ಹಾಗೂ ಟ್ರೋಫಿಯನ್ನು ಅನಾವರಣಗೊಳಿಸಲಾಯಿತು.

ಗೋಷ್ಠಿಯಲ್ಲಿ ದಸರಾ ಕ್ರೀಡಾ ಸಮಿತಿಯ ಉಪಾಧ್ಯಕ್ಷ ಕೆ.ಆರ್. ದಿನೇಶ್, ಗೌರವಾಧ್ಯಕ್ಷ ಕೆ.ಆರ್. ರವಿ, ಕ್ರೀಡಾ ಸಂಚಾಲಕ ಕಾವೇರಿಮನೆ ಭರತ್, ಸದಸ್ಯ ಉಮೇಶ್ ಕುಮಾರ್, ಸಹಕಾ ಕಾರ್ಯದರ್ಶಿ ನಿರಂಜನ್ ಉಪಸ್ಥಿತರಿದ್ದರು.