ಶ್ರೀಮಂಗಲ, ಅ. ೯: ಪೊನ್ನಂಪೇಟೆ ತಾಲೂಕು ಪೊರಾಡು ಗ್ರಾಮದ ರಿವರ್ ಸೈಡ್ ಅಸೋ ಸಿಯೇಷನ್ ಸಂಸ್ಥೆಯ ವತಿಯಿಂದ ಕೆಕೆಆರ್‌ನಲ್ಲಿರುವ ಸಂಸ್ಥೆಯ ಸಭಾಂಗಣದಲ್ಲಿ ಕೈಲ್‌ಪೊಳ್ದ್ ಹಬ್ಬದ ಸಂತೋಷ ಕೂಟ ಹಾಗೂ ಕ್ರೀಡಾಕೂಟ ನಡೆಯಿತು.
ಮಹಿಳೆಯರಿಗೆ ಮಕ್ಕಳಿಗೆ ಹಾಗೂ ಪುರುಷರಿಗೆ ಪ್ರತ್ಯೇಕವಾದ ವಿವಿಧ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. ತೆಂಗಿನಕಾಯಿ ಒಡೆಯುವ ಸ್ಪರ್ಧೆಯನ್ನು ಉದ್ಘಾಟಿಸುವ ಮೂಲಕ ಕ್ರೀಡಾಕೂಟಕ್ಕೆ ಹಿರಿಯರಾದ ಬಲ್ಯಮೀದೇರಿರ ನಾಚಪ್ಪ ಚಾಲನೆ ನೀಡಿದರು.
ಕ್ರೀಡಾಕೂಟದ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಂಸ್ಥೆಯ ಅಧ್ಯಕ್ಷರಾದ ಅಣ್ಣೀರ ಕೆ. ಪೊನ್ನಪ್ಪ ಮಾತನಾಡಿ, ಸಂಸ್ಥೆಯಿAದ ಮುಂದಿನ ದಿನಗಳಲ್ಲಿ ಸಾಮಾಜಿಕ ಕೆಲಸಗಳನ್ನು ಹಾಗೂ ಪ್ರವಾಸಗಳನ್ನು ಏರ್ಪಡಿಸಲಾಗುವುದು. ಸ್ಥಳೀಯ ಹಬ್ಬಗಳನ್ನು ಎಲ್ಲರೂ ಸೇರಿ ಸಾಮೂಹಿಕವಾಗಿ ಆಚರಿಸುವ ಮೂಲಕ ಎಲ್ಲರೂ ಒಂದೆಡೆ ಸೇರಲು ಅವಕಾಶವಾಗುತ್ತದೆ ಎಂದು ಹೇಳಿದರು. ಮೀದೇರಿರ ಸಾಕ್ಷಿ ಮುತ್ತಮ್ಮ ಪ್ರಾರ್ಥಿಸಿ, ಕಾರ್ಯದರ್ಶಿ ಮೀದೇರಿರ ಎ. ಸೋಮಣ್ಣ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.