ವೀರಾಜಪೇಟೆ, ಅ. ೯: ೨೦೨೫-೨೬ನೇ ಸಾಲಿನ ಪಿ.ಯು. ಕಾಲೇಜು ವಿಭಾಗದ ಬಾಲಕರ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾವಳಿಗೆ ಪಾಲಿಬೆಟ್ಟ ಸರಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಆಯ್ಕೆಆಗಿದ್ದಾರೆ. ತಾಲೂಕುಮಟ್ಟದ ಪಂದ್ಯಾವಳಿಯಲ್ಲಿ ಲಯನ್ಸ್ ಪಿ.ಯು. ಕಾಲೇಜು ಕಳತ್ಮಾಡ್, ಸೆಂಟೆನ್ಸ್ ಪಿ.ಯು. ಕಾಲೇಜು ವೀರಾಜಪೇಟೆ, ಸಿ.ಐ.ಟಿ., ಪಿ.ಯು. ಕಾಲೇಜು ಹಳ್ಳಿಗಟ್ಟು ಹಾಗೂ ಕಾವೇರಿ ಕಾಲೇಜು ಗೋಣಿಕೊಪ್ಪಲನ್ನು ಮಣಿಸಿ ಜಿಲ್ಲಾ ಮಟ್ಟದ ಪಂದ್ಯಾವಳಿಯಲ್ಲಿ ಸೋಮವಾರಪೇಟೆ ತಾಲೂಕಿನ ಹೆಬ್ಬಾಲೆ ಪಿ.ಯು. ಕಾಲೇಜನ್ನು ಪರಾಭವಗೊಳಿಸಿ ಈ ತಿಂಗಳ ಕೊನೆಯಲ್ಲಿ ರಾಮನಗರ ಜಿಲ್ಲೆಯಲ್ಲಿ ನಡೆಯುವ ರಾಜ್ಯಮಟ್ಟದ ಪಂದ್ಯಾವಳಿಗೆ ಪಾಲಿಬೆಟ್ಟ ಸರಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಶೈನ ಕೆ.ಕೆ. ತಿಳಿಸಿದ್ದಾರೆ.

ಪಂದ್ಯಾಟದಲ್ಲಿ ವಿದ್ಯಾರ್ಥಿಗಳಾದ ರೋಶನ್, ಜಾಕ್ ಕುಮಾರ್ ಬೆಕ್, ಚಿರಂಜೀವಿ, ಮನೀಶ್, ಯಶ್ವಂತ್, ಸಜನ್, ಕದಿರ್ವೆಲ್, ರವಿಕುಮಾರ್, ಸಜೀವ, ಪವನ್ ಹಾಗೂ ವಿಷ್ಣು ಟಿ.ವಿ. ಇದ್ದರು.