ಮಡಿಕೇರಿ, ಅ. ೧೦ : ಕೊಡವರು ಕುಲಮಾತೆ ಕಾವೇರಿ ತೀರ್ಥೋದ್ಭವದ ಸಂದÀರ್ಭದಲ್ಲಿ ತಾಯಿಯನ್ನು ಭಕ್ತಿಪೂರ್ವಕವಾಗಿ, ಸ್ವಾಗತಿಸಲು ಕೊಡವ ಮತ್ತು ಭಾಷಿಕ ಸಮುದಾಯದ ಭಕ್ತಾದಿಗಳು ಭಾಗಮಂಡಲದಿAದ ತಲಕಾವೇರಿಗೆ ಪಾದಯಾತ್ರೆಯಲ್ಲಿ ತೆರಳುವುದು ವಾಡಿಕೆ. ಅದರಂತೆ ಈ ಬಾರಿ ಅಕ್ಟೋಬರ್ ೧೭ನೇ ಶುಕ್ರವಾರದಂದು ತಾಯಿ ಪವಿತ್ರ ಕುಂಡಿಕೆಯಲ್ಲಿ ಆವಿರ್ಭವಿಸಲಿದ್ದು ದರ್ಶನ ಪಡೆಯಲು ಪಾದಯಾತ್ರೆ (ನಡ್ಪು)ಯಲ್ಲಿ ಭಾಗವಹಿಸಲಿಚ್ಛಿಸುವ ಭಕ್ತಾದಿಗಳು ತಾ. ೧೭ರ ಬೆಳಿಗ್ಗೆ ೯ ಗಂಟೆಗೆ ಭಾಗಮಂಡಲದ ತ್ರಿವೇಣಿ ಸಂಗಮದ ಬಳಿ ಸೇರುವಂತೆಯೂ ಮತ್ತು ಅಲ್ಲಿಂದ ೯.೩೦ ಗಂಟೆಗೆ ಅಖಿಲ ಕೊಡವ ಸಮಾಜದ ಸೂಚನೆಯ ಮೇರೆಗೆ ಎಲ್ಲರೂ ಒಟ್ಟಾಗಿ ಪಾದಯಾತ್ರೆ ಪ್ರಾರಂಭ ಮಾಡುವಂತೆ ತೀರ್ಮಾನಿಸಲಾಗಿದೆ ಎಂದು ಅಖಿಲ ಕೊಡವ ಸಮಾಜದ ಪ್ರಕಟಣೆ ತಿಳಿಸಿದೆ.
ತಾ.೯ರಂದು ಅಖಿಲ ಕೊಡವ ಸಮಾಜ ಆಯೋಜಿಸಿದ್ದ ಸಭೆಯಲ್ಲಿ ವಿವಿಧ ಕೊಡವ ಸಂಘಟನೆಗಳು ಭಾಗವಹಿಸಿ ಅಲ್ಲಿ ವ್ಯಕ್ತವಾದ ಅಭಿಪ್ರಾಯದಂತೆ, ತೀರ್ಥೋದ್ಭವದಂದು “ನಡ್ಪು”ಗೆ ಬರುವ ಎಲ್ಲಾ ಭಕ್ತಾದಿಗಳು ಒಗ್ಗಟ್ಟಾಗಿ ನಡೆಯಲು ಒಕ್ಕೊರಲ ನಿರ್ಣಯ ಕೈಗೊಳ್ಳಲಾಯಿತು. “ನಡ್ಪ್”ನಲ್ಲಿ ಎಲ್ಲಾ ತಂಡಗಳಿಗೆ ಸಾಂಪ್ರದಾಯಕ “ದುಡಿಕೊಟ್ಟ್ ಪಾಟ್’’ ಹಾಗೂ “ತಳಿಯತಕ್ಕಿ ಬೊಳ್ಚ”ಕ್ಕೆ ಅವಕಾಶವಿದ್ದು, ಕುಂಡಿಕೆಯ ಬಳಿಗೆ ಹೋಗಲು ಒಂದು ತಂಡಕ್ಕೆ ಅನುಮತಿ ನೀಡಲಾಗಿದೆ. ನಡ್ಪು ನಡೆಯುವ ದಾರಿಯುದ್ದಕ್ಕೂ ಶಿಸ್ತು ಪಾಲನೆ ಮಾಡಬೇಕಿದ್ದು, ಸ್ವಚ್ಛತೆಗೆ ಆದ್ಯತೆ ಕೊಡ ಬೇಕಾಗಿರುವುದಲ್ಲದೆ, ಯಾವುದೇ ವಾಹನ ಮತ್ತು ಇತರ ಭಕ್ತಾದಿಗಳಿಗೆ ಅಡಚಣೆಯಾಗದಂತೆ ನೋಡಿಕೊಳ್ಳಬೇಕಾದ ಅವಶ್ಯಕತೆ ಇದ್ದು, ಪವಿತ್ರ ತೀರ್ಥ ಕುಂಡಿಕೆಯಿAದ ತೀರ್ಥ ಸ್ವೀಕರಿಸುವವರು ಕಡ್ಡಾಯವಾಗಿ ಪ್ಲಾಸ್ಟಿಕ್ ಹಾಗೂ ಗಾಜಿನ ಬಾಟಲ್/ ಕ್ಯಾನ್/ಬಿಂದಿಗೆಗಳನ್ನು ತರಬಾರದೆಂದು ಅಖಿಲ ಕೊಡವ ಸಮಾಜದÀ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.