ಗೋಣಿಕೊಪ್ಪ ವರದಿ, ಅ. ೧೦ : ಶ್ರೀ ಮಾನಿಲ್ ಅಯ್ಯಪ್ಪ ಸೇವಾ ಸಮಿತಿ ವತಿಯಿಂದ ಮಾಯಮುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಅಕ್ಟೋಬರ್ ೧೨ ರಂದು ಬೊಡಿ ನಮ್ಮೆ ಕಾರ್ಯಕ್ರಮ ಆಯೋಜಿಸಲಾಗಿದೆ.
.೨೨, ೧೨ ನೇ ಬೋರ್ ಹಾಗೂ ಏರ್ ಗನ್ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ೧೨ ವರ್ಷದ ಒಳಗಿನ ಮಕ್ಕಳಿಗೆ .೨೨ ಗುಂಡು ಹೊಡೆಯುವ ಸ್ಪರ್ಧೆಗೆ ವಿಶೇಷ ಅವಕಾಶ ನೀಡಿದ್ದು, ಪಾಲ್ಗೊಳ್ಳುವ ಮಕ್ಕಳಿಗೆ ಪ್ರೋತ್ಸಾಹಕರ ಬಹುಮಾನ ನೀಡಲಾಗುತ್ತದೆ.
ಬೆಳಿಗ್ಗೆ ೯ ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಕಾವೇರಿ ಅಸೋಸಿಯೇಷನ್ ಅಧ್ಯಕ್ಷ ಕಾಳಪಂಡ ಸುದೀರ್ ಉದ್ಘಾಟಿಸಲಿದ್ದು, ಹಿರಿಯರಾದ ಚೆಪ್ಪುಡೀರ ಕಿಟ್ಟು ಅಯ್ಯಪ್ಪ, ಕಂಜಿತAಡ ಡಬ್ಲೂö್ಯ ಪೊನ್ನಪ್ಪ ಭಾಗವಹಿಸಲಿದ್ದಾರೆ.
ಸಂಜೆ ೪.೩೦ ಗಂಟೆಗೆ ಸಮಾರೋಪ ನಡೆಯಲಿದ್ದು, ಸಂಸದ ಯದುವೀರ್ ಒಡೆಯರ್, ಕಾಫಿ ಬೆಳೆಗಾರ ಸಣ್ಣುವಂಡ ಎಂ. ಸುರೇಶ್, ಹಿರಿಯ ರ್ಯಾಲಿ ಪಟು ಮಾಳೇಟಿರ ಜಗತ್ ನಂಜಪ್ಪ, ಮಾಯಮುಡಿ ಪ್ಯಾಕ್ಸ್ ಅಧ್ಯಕ್ಷ ಆಪಟ್ಟೀರ ಎ. ಬೋಪಣ್ಣ, ನಿರ್ದೇಶಕಿ ಮಲ್ಲೇಂಗಡ ಎಂ. ಮಮತ, ಮಾಯಮುಡಿ ಗ್ರಾಮ ಪಂಚಾಯಿತಿ ಸದಸ್ಯ ಆಪಟ್ಟೀರ ವಿಠಲ ನಾಚಯ್ಯ, ಕಾಫಿ ಬೆಳೆಗಾರ ತೀತಿರ ಪವಿನ್ ಗಣಪತಿ, ಚಿಂಡಮಾಡ ನಾಚಪ್ಪ, ಮುಕ್ಕಾಟಿರ ಬೋಪಣ್ಣ ಭಾಗವಹಿಸಲಿದ್ದಾರೆ.