ಮಡಿಕೇರಿ, ಅ. ೯: ಮಾಜಿ ಸಂಸದ ಹೆಚ್. ವಿಶ್ವನಾಥ್ ವಿಯೆಟ್ನಾಂಗೆ ಅಧ್ಯಯನ ಯಾತ್ರೆ ಕೈಗೊಂಡಿದ್ದಾರೆ.
ವಿಯೆಟ್ನಾAನಲ್ಲಿ ಕಮ್ಯುನಿಸ್ಟ್ ಆಡಳಿತವಿದ್ದರೂ ಪ್ರಜಾಪ್ರಭುತ್ವ ಚಿಂತನೆಯಡಿ ದೇಶದ ಆಡಳಿತ ವ್ಯವಸ್ಥೆ ನಡೆಯುತ್ತಿದ್ದು, ಈ ಬಗ್ಗೆ ವಿಶ್ವನಾಥ್ ಅವರು ಅಧ್ಯಯನ ನಡೆಸಲಿದ್ದಾರೆ.
ವಿಶ್ವದ ವಿವಿಧ ದೇಶಗಳ ಆಡಳಿತ ವ್ಯವಸ್ಥೆ, ಶಾಸಕಾಂಗ, ಕಾರ್ಯಾಂಗಗಳ ಬಗ್ಗೆ ಆಯಾ ದೇಶಗಳಿಗೆ ತೆರಳಿ ಅಧ್ಯಯನ ನಡೆಸಿರುವ ‘‘ಹಳ್ಳಿ ಹಕ್ಕಿ'' ಖ್ಯಾತಿಯ ವಿಶ್ವನಾಥ್ ಅವರು ಪ್ರಸ್ತುತ ವಿಧಾನ ಪರಿಷತ್ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.