ಮಡಿಕೇರಿ, ಅ. ೧೧: ಕೊಡಗು ಜಿಲ್ಲೆಯಲ್ಲಿ ಶನಿವಾರದಂದು ಒಂದೊAದೆಡೆ ಒಂದೊAದು ರೀತಿಯ ವಾತಾವರಣ ಕಂಡುಬAದಿದ್ದು ಇದು ಅಚ್ಚರಿದಾಯಕ ಎಂಬAತೆಯೂ ಅನುಭವ ಮೂಡಿಸಿತ್ತು.

ಹಲವೆಡೆಗಳಲ್ಲಿ ಸುರಿದ ಭಾರೀ ಮಳೆ ಹಾಗೂ ಸಿಡಿಲಿನ ಆರ್ಭಟಕ್ಕೆ ಜನರು ತಲ್ಲಣಗೊಳ್ಳುವಂತಾಗಿದ್ದರೆ ಇನ್ನು ಕೆಲವೆಡೆಗಳಲ್ಲಿ ಸುಡುಬಿಸಿಲಿನ ಸನ್ನಿವೇಶ. ಬಹುಶಃ ಕೆಲವೆಡೆಗಳಲ್ಲಿ ಈ ಬಾರಿಯ ಮಳೆಗಾಲಕ್ಕೆ ಹೆದರದಂತಿದ್ದ ಜನರು ಇಂದು ನಿಜಕ್ಕೂ ಭಯಪಡುವುದರೊಂದಿಗೆ ಉತ್ತರ ಭಾರತದ ಹಲವೆಡೆ ಎದುರಾಗಿದ್ದ ದುರಂತ ಪರಿಸ್ಥಿತಿಯನ್ನು ನೆನೆಸಿಕೊಳ್ಳುವ ರೀತಿಯ ಚಿತ್ರಣ ಕೆಲತಾಸುಗಳಲ್ಲಿ ಎದುರಾಗಿತ್ತು. ಕಳೆದ ರಾತ್ರಿಯೂ ಜಿಲ್ಲೆಯ ಹಲವೆಡೆ ಭಾರೀ ಮಳೆ ಸುರಿದಿದೆ. ಆದರೆ ಇದೇ ಮಾದರಿಯಲ್ಲಿ ಕೆಲವಾರು ಕಡೆಗಳಲ್ಲಿ ಈ ರೀತಿಯಲ್ಲಿ ಮಳೆಯಾಗಿರಲಿಲ್ಲ. ಕೇವಲ ಸಣ್ಣ ಪ್ರಮಾಣದಲ್ಲಿ ಮಾತ್ರ ಮಳೆ ಕಂಡುಬAದಿತ್ತು.

ಆದರೆ ಇಂದು ಬೆಳಿಗ್ಗೆ ಇದೇ ಪರಿಸ್ಥಿತಿ ಹಲವೆಡೆಗಳಲ್ಲಿ ಮತ್ತೆ ಅನುಭವವಾಗಿದೆ. ಬೆಳಿಗ್ಗೆ ಮೂರ್ನಾಡು, ಕೊಟ್ಟಮುಡಿ, ಕೊಂಡAಗೇರಿ, ಬಿಟ್ಟಂಗಾಲ ಕಡೆಗಳಲ್ಲಿ ಒಂದಷ್ಟು ಹೆಚ್ಚಿನ ಮಳೆ ಸುರಿದರೆ ದಕ್ಷಿಣ ಕೊಡಗಿನ ಬಿರುನಾಣಿ, ಟಿ. ಶೆಟ್ಟಿಗೇರಿ, ಶ್ರೀಮಂಗಲ, ಕುಟ್ಟ ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳಲ್ಲಿ ಬೆಳಿಗ್ಗೆ ಒಂದಷ್ಟು ಹೊತ್ತು ಮೋಡ ಕವಿದ ವಾತಾವರಣವಿದ್ದು ನಂತರದಲ್ಲಿ ಬಿಸಿಲಿನ ಪ್ರಖರತೆ ಎದುರಾಗಿತ್ತು. ಸಂಜೆ ಸುಮಾರು ೪.೩೦ರ ವೇಳೆಗೆ ವೀರಾಜಪೇಟೆಯಲ್ಲಿ ಬಿಸಿಲಿನ ವಾತಾವರಣವಿತ್ತು. ಆದರೆ ವೀರಾಜಪೇಟೆಯಿಂದ ಮುಂದೆ ಸಾಗುತ್ತಿದ್ದಂತೆ ಕದನೂರು, ಕಾಕೋಟುಪರಂಬು, ಮೈತಾಡಿ, ಮೂರ್ನಾಡು, ಮುತ್ತಾರ್ಮುಡಿ, ಹಾಕತ್ತೂರು ವಿಭಾಗದ ಪರಿಸ್ಥಿತಿ ಒಂದು ರೀತಿಯಲ್ಲಿ ಭಯಾನಕ ಎಂಬAತಾಗಿತ್ತು. ಈ ಮಾರ್ಗದಲ್ಲಿ ಸುರಿಯುತ್ತಿದ್ದ ಮಳೆಯ ತೀವ್ರತೆ ಹಾಗೂ ಕೆಲಹೊತ್ತು ಎದುರಾದ ಭಾರೀ ಸಿಡಿಲು-ಮಿಂಚಿನಿAದ ಜನರು ತಲ್ಲಣಗೊಳ್ಳುವಂತಾಗಿತ್ತು. ರಸ್ತೆಯಲ್ಲಿ, ಚರಂಡಿಯಲ್ಲಿ ಎಲ್ಲೆಲ್ಲೂ ನೀರೇ... ನೀರು. ರಸ್ತೆ-ಚರಂಡಿಗಳು ಒಂದಾಗಿ ಹರಿಯುತ್ತಿತ್ತು. ರಸ್ತೆ ಸೇರಿದಂತೆ ತಗ್ಗುಪ್ರದೇಶಗಳಲ್ಲಿ ಮೊಣಕಾಲು ಮಟ್ಟಕ್ಕೆ ನೀರು ನಿಂತಿದ್ದು, ಇಳಿಜಾರು ಪ್ರದೇಶದಿಂದ ಕೆಳಭಾಗಕ್ಕೆ ನೀರು ದುಮ್ಮಿಕ್ಕುತ್ತಿದ್ದ ದೃಶ್ಯ ಕಂಡುಬAದಿತ್ತು. ವಾಹನ ಚಲಾಯಿಸಲು ಸವಾರರು ಪರದಾಡುವಂತಾಗಿತ್ತು. ರಸ್ತೆ ಬದಿಯ ತೋಟಗಳಲ್ಲಿ ಅಡಿಕೆ ಮರದ ಬುಡ ನೀರಿನಲ್ಲಿ ಮುಳುಗಿತ್ತು.

ಮುತ್ತಾರ್‌ಮುಡಿ, ಹಾಕತ್ತೂರು, ಮೂರ್ನಾಡು ವಿಭಾಗದಲ್ಲಿ ರಸ್ತೆಯ ಎರಡೂ ಬದಿಯಲ್ಲೂ ಸಣ್ಣ ಪ್ರವಾಹದ ರೀತಿಯಲ್ಲಿ ನೀರು ಹರಿಯುತ್ತಿತ್ತಲ್ಲದೆ, ತಗ್ಗು ಪ್ರದೇಶದ ಅಂಗಡಿ-ಮನೆಗಳಿಗೆ ನೀರು ನುಗ್ಗುವ ಹಂತ ತಲುಪಿತ್ತು. ಇದರ ಜತೆಗೆ ಭಾರೀ ಸಿಡಿಲು-ಮಿಂಚು ಸ್ಥಳೀಯ ಜನತೆಯನ್ನು ಮಾತ್ರವಲ್ಲ ವಾಹನದಲ್ಲಿ ಸಂಚರಿಸುತ್ತಿದ್ದವರನ್ನೂ ಆತಂಕಕ್ಕೆ ಈಡು ಮಾಡಿದಂತಿತ್ತು. ಮೂರ್ನಾಡಿನ ಪಾಂಡಾಣೆ ಮೈದಾನ ಜಲಾವೃತಗೊಂಡAತಿತ್ತು. ಸುಮಾರು ಒಂದು ತಾಸಿನ ಅವಧಿಯ ಕಾಲ, ಬೇತ್ರಿಯಲ್ಲಿ ಕಾವೇರಿ ನೀರಿನ ಮಟ್ಟದಲ್ಲೂ ಹೆಚ್ಚಳವಾಗಿತ್ತು.

ಇದು ಈ ವಿಭಾಗದ ಚಿತ್ರಣವಾದರೆ, ಸಿದ್ದಾಪುರದಲ್ಲೂ ೪.೧೫ರ ವೇಳೆಗೆ ಭಾರೀ ಮಳೆ ಸುರಿದಿದೆ. ಜಿಲ್ಲೆಯ ಇನ್ನೂ ಕೆಲವಾರು ಕಡೆಗಳಲ್ಲಿ ಇಂದು ಒಂದಷ್ಟು ಹೆಚ್ಚಿನ ಮಳೆ ಸುರಿದಿರುವ ಬಗ್ಗೆ ವರದಿಯಾಗಿದೆ. ಕೆಲವು ಮನೆಗಳಲ್ಲಿ ವಿದ್ಯುತ್ ಉಪಕರಣಗಳು ಸಿಡಿಲಿನಿಂದ ತೀವ್ರ ಹಾನಿಗೊಳಗಾಗಿದೆ. ಕೆಲವು ವಿಭಾಗದಲ್ಲಿ ಈ ರೀತಿಯಲ್ಲಿ ಭಾರೀ ಮಳೆ ಸುರಿದರೆ, ಮತ್ತಿತರ ಭಾಗದಲ್ಲಿ ಬಿಸಿಲಿನ ಸನ್ನಿವೇಶವೇ ಇದ್ದುದು ಈ ದಿನದ ಅಚ್ಚರಿ ಎಂಬAತಾಗಿದೆ ಎಂದು ಜನರು ತಮ್ಮ ಅನುಭವ ಹಂಚಿಕೊಳ್ಳುತ್ತಿದ್ದರು. ೪ಏಳನೇ ಪುಟಕ್ಕೆ ಸಿದ್ದಾಪುರ : ಕಳೆದ ಮೂರು ದಿನಗಳಿಂದ ಸಿದ್ದಾಪುರ ವ್ಯಾಪ್ತಿಯಲ್ಲಿ ಅಕಾಲಿಕ ಮಳೆ ಸುರಿಯುತ್ತಿದ್ದು, ಶನಿವಾರದಂದು ಹಗಲು ಬಿಸಿಲಿನ ವಾತಾವರಣ ಕಂಡುಬAದರೂ ಕೂಡ ಸಂಜೆ ಸಮಯದಲ್ಲಿ ಗುಡುಗು ಸಹಿತ ಜೋರಾದ ಮಳೆ ಸುರಿಯಿತು. ದಿಢೀರ್ ಸುರಿದ ಮಳೆಯಿಂದಾಗಿ ಸಿದ್ದಾಪುರ ಪಟ್ಟಣ ವ್ಯಾಪ್ತಿಯ ಕೆಲವು ಅಂಗಡಿ ಮಳಿಗೆಗಳ ಒಳಗೆ ನೀರು ನುಗ್ಗಿ ಸಮಸ್ಯೆ ಎದುರಾಯಿತು.

ಸಿದ್ದಾಪುರ ಪಟ್ಟಣದ ವೀರಾಜಪೇಟೆ ರಸ್ತೆಯ ಅಭಿವೃದ್ಧಿ ಕಾರ್ಯವು ಕಳೆದ ಒಂದು ವರ್ಷಗಳಿಂದ ಮಂದ ರೀತಿಯಲ್ಲಿ ನಡೆಯುತ್ತಿದ್ದು, ಕೊಣನೂರು-ಮಾಕುಟ್ಟ ರಾಜ್ಯ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ವಿಳಂಬವಾಗುವುದರೊAದಿಗೆ ರಸ್ತೆ ಅಭಿವೃದ್ಧಿ ಕಾರ್ಯಗಳಿಗೆ ಮಳೆಯೂ ಕಂಟಕವಾಗಿದೆ. ಗುರುವಾರದಂದು ಸುರಿದ ಧಾರಾಕಾರ ಮಳೆಯಿಂದಾಗಿ ಶುಕ್ರವಾರದಂದು ವೀರಾಜಪೇಟೆ ರಸ್ತೆಯಲ್ಲಿ ಕೆಸರು ಮಾಯವಾಗಿ ಹಲವಾರು ವಾಹನಗಳು ಕೆಸರಿನಲ್ಲಿ ಸಿಲುಕಿಕೊಂಡು ಬಳಿಕ ಕ್ರೇನ್ ಹಾಗೂ ಜೆಸಿಬಿ ಮೂಲಕ ಹಗ್ಗ ಕಟ್ಟಿ ಹೊರಕ್ಕೆ ತೆಗೆಯಲಾಗಿತ್ತು.

ಬಳಿಕ ಕಾರ್ಮಿಕರು ವೆಟ್‌ಮಿಕ್ಸ್ ಜೆಲ್ಲಿ ಕಲ್ಲುಗಳನ್ನು ಹಾಕಿ ಸಮತಟ್ಟು ಮಾಡಿದರು. ಶನಿವಾರದಂದು ಹಗಲಿನ ವೇಳೆ ಬಿಸಿಲಿನ ವಾತಾವರಣ ಕಂಡುಬAದಿತ್ತು. ಆದರೆ ಇನ್ನೇನು ರಸ್ತೆಯಲ್ಲಿ ಸುಗಮವಾಗಿ ಸಂಚಾರ ಮಾಡಬಹುದು ಎಂದು ಭಾವಿಸುವಷ್ಟರಲ್ಲೇ ಸಂಜೆ ಸುರಿದ ಮಳೆಯಿಂದಾಗಿ ರಸ್ತೆಯಲ್ಲಿ ಮತ್ತೆ ಕೆಸರುತುಂಬಿ ವಾಹನ ಸಂಚಾರಕ್ಕೆ ಸಮಸ್ಯೆ ಎದುರಾಯಿತು. ಕಾರ್ಮಿಕರು ಸಾಕಷ್ಟು ಪ್ರಯತ್ನಪಟ್ಟರೂ ಕೂಡ ನಿಗದಿತ ಸಮಯದೊಳಗೆ ಕಾಮಗಾರಿ ಮುಕ್ತಾಯಗೊಳ್ಳುತ್ತಿಲ್ಲ. ರಸ್ತೆ ಬದಿಯಲ್ಲಿ ಅಗಲೀಕರಣಕ್ಕೆ ತೆಗೆದಿಟ್ಟಿರುವ ಗುಂಡಿಗಳಿಗೆ ವಾಹನಗಳು ಸಿಲುಕಿ ಚಾಲಕರು ಪರದಾಡುವ ಪರಿಸ್ಥಿತಿ ಮುಂದುವರಿದಿದೆ.

ಸಿದ್ದಾಪುರ ಪಟ್ಟಣದಿಂದ ವೀರಾಜಪೇಟೆ ರಸ್ತೆಯ ರಾಜ್ಯ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ನಡೆಯುತ್ತಿರುವ ಸಂದರ್ಭ ರಸ್ತೆಯ ಮಧ್ಯಭಾಗದಿಂದ ಹಾಗೂ ರಸ್ತೆಯ ಬದಿಯಿಂದ ತೆಗೆಯುತ್ತಿರುವ ಮಣ್ಣುಗಳು ರಾತ್ರಿ ಸಮಯದಲ್ಲಿ ಮಾಯವಾಗುತ್ತಿದೆ. ಇಲ್ಲಿ ಶೇಖರಿಸುವ ಮಣ್ಣುಗಳನ್ನು ಕೆಲವು ವ್ಯಕ್ತಿಗಳು ರಾತ್ರಿ ಸಮಯದಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಆದರೆ ಈ ಬಗ್ಗೆ ಗ್ರಾಮ ಪಂಚಾಯಿತಿ ಗಮನ ಹರಿಸುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಕಾಮಗಾರಿಯನ್ನು ಗುತ್ತಿಗೆ ಪಡೆದುಕೊಂಡ ಹೊರಜಿಲ್ಲೆಯ ವ್ಯಕ್ತಿ ಗುತ್ತಿಗೆಯನ್ನು ಪಡೆದುಕೊಂಡ ಬಳಿಕ ಬಿಸಿಲಿರುವ ಸಂದರ್ಭದಲ್ಲಿ ಕಾಮಗಾರಿಯನ್ನು ಪ್ರಾರಂಭಿಸದೆ ಮಳೆ ಆರಂಭವಾಗುವ ಸ್ವಲ್ಪ ದಿನಗಳ ಮುಂಚಿತವಾಗಿ ಕಾಮಗಾರಿ ಪ್ರಾರಂಭಿಸಿದ್ದು, ಇಷ್ಟೆಲ್ಲ ಅವಾಂತರಗಳಿಗೆ ಕಾರಣವಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಶಾಸಕ ಪೊನ್ನಣ್ಣ ಅವರ ಪ್ರಯತ್ನ

ವೀರಾಜಪೇಟೆ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಅವರು ಹೆಚ್ಚಿನ ಆಸಕ್ತಿವಹಿಸಿ ಕೊಣನೂರು- ಮಾಕುಟ್ಟ ರಾಜ್ಯ ಹೆದ್ದಾರಿ ಅಭಿವೃದ್ಧಿಗೆ ರೂ೨ ಕೋಟಿ ಅನುದಾನವನ್ನು ಬಿಡುಗಡೆಗೊಳಿಸಿ ರಸ್ತೆ ಅಭಿವೃದ್ಧಿಗೆ ಶ್ರಮ ಪಟ್ಟಿದ್ದಾರೆ. ಆದರೆ ಹೊರ ಜಿಲ್ಲೆಯ ವ್ಯಕ್ತಿಗಳು ಟೆಂಡರ್ ಮುಖಾಂತರ ಕಾಮಗಾರಿಯನ್ನು ಗುತ್ತಿಗೆ ಪಡೆದುಕೊಂಡು ನಿಗದಿತ ಸಮಯದೊಳಗೆ ಮುಕ್ತಾಯಗೊಳಿಸಬೇಕಿತ್ತು. ಆದರೆ ಗುತ್ತಿಗೆ ಪಡೆದುಕೊಂಡವರು ಕಾಮಗಾರಿಯನ್ನು ವಿಳಂಬವಾಗಿ ಪ್ರಾರಂಭಿಸಿದ ಹಿನ್ನೆಲೆ ಶಾಸಕ ಪೊನ್ನಣ್ಣ ಅವರಿಂದ ತರಾಟೆಗೆ ಒಳಗಾಗಿದ್ದರು. ಗುಣಮಟ್ಟದ ಕಾಮಗಾರಿ ಮಾಡುವಂತೆ ಶಾಸಕರು ನಿರ್ದೇಶನ ನೀಡಿದ್ದರು. ಆದರೆ ಕಾಮಗಾರಿಗಳು ಮಳೆಯಿಂದಾಗಿ ಆಮೆಗತಿಯಲ್ಲಿ ನಡೆಯುತ್ತಿದ್ದು, ಕಾಮಗಾರಿ ಯಾವಾಗ ಮುಕ್ತಾಯವಾಗುತ್ತದೆ ಎಂಬ ಚಿಂತೆ ಗ್ರಾಮಸ್ಥರಲ್ಲಿ ಮೂಡಿದೆ.