ವೀರಾಜಪೇಟೆ, ಅ. ೧೧: ಇಂದಿನ ಸಮಾಜದಲ್ಲಿ ಮಹಿಳೆಯರು ಮುಖ್ಯವಾಹಿನಿಗೆ ಬರುವುದರ ಮೂಲಕ ತಮ್ಮ ಶಕ್ತಿಯನ್ನು ಗುರುತಿಸಿಕೊಂಡು ಸಮಾಜದಲ್ಲಿ ಉನ್ನತ ಸ್ಥಾನ ಮಾನಗಳನ್ನು ಹೊಂದಬೇಕು ಎಂದು ಎ.ಕೆ ಸುಬ್ಬಯ್ಯ-ಪೊನ್ನಮ್ಮ ಶೈಕ್ಷಣಿಕ ಮತ್ತು ದತ್ತಿನಿಧಿ ಟ್ರಸ್ಟ್ನ ಮ್ಯಾನೆಜಿಂಗ್ ಟ್ರಸ್ಟಿ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ಅಭಿಪ್ರಾಯಪಟ್ಟರು.
ವೀರಾಜಪೇಟೆಯಲ್ಲಿರುವ ಶಾಸಕರ ನಿವಾಸದಲ್ಲಿ, ಎ.ಕೆ.ಸುಬ್ಬಯ್ಯ-ಪೊನ್ನಮ್ಮ ಶೈಕ್ಷಣಿಕ ಮತ್ತು ದತ್ತಿನಿಧಿ ಟ್ರಸ್ಟ್ ವತಿಯಿಂದ ಶಕ್ತಿ ದಿನಪತ್ರಿಕೆ ಹಾಗೂ eviಜhಥಿಚಿ.ಛಿom ಸಹಯೋಗದೊಂದಿಗೆ ಪದವಿ ವಿದ್ಯಾರ್ಥಿನಿಯರಿಗೆ ನಡೆದ ವಿದ್ಯಾರ್ಥಿವೇತನ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಇಲ್ಲಿ ವಿದ್ಯಾರ್ಥಿಗಳೇ ಕೇಂದ್ರಬಿAದು, ಈ ಕಾರ್ಯಕ್ರಮವನ್ನು ಹೆಣ್ಣು ಮಕ್ಕಳ ಭವಿಷ್ಯ ರೂಪಿಸುವ ಸಲುವಾಗಿ, ತಮ್ಮ ತಂದೆ-ತಾಯಿಯರ ಜ್ಞಾಪಕಾರ್ಥವಾಗಿ ಸಹೋದರರು ಸೇರಿ ಪ್ರಾರಂಭಿಸಲಾಗಿದೆ ಎಂದು ಯೋಜನೆ ಕುರಿತು ಶಾಸಕರು ವಿವರಿಸಿದರು.
ಹೆಣ್ಣು ಮಕ್ಕಳು ಸಮಾಜದ ಮುಖ್ಯವಾಹಿನಿಗೆ ಬರುವಂತಾಗಬೇಕು, ಮಹಿಳೆಯರಿಗೆ ಸಮಾಜದಲ್ಲಿ ಮುಂದೆಬರಲು ಸಾಕಷ್ಟು ಅಡೆತಡೆಗಳಿವೆ, ಎಲ್ಲವನ್ನೂ ಮೆಟ್ಟಿನಿಂತು ದಿಟ್ಟಮಹಿಳೆಯಾಗಿ ಹೊರಹೊಮ್ಮಬೇಕು. ಮಹಿಳೆಯರ ವಿದ್ಯಾಭ್ಯಾಸ ಕೇವಲ ಪುಸ್ತಕಕ್ಕೆ ಸೀಮಿತವಾಗದೆ ಸಮಾಜದಲ್ಲಿ ಎತ್ತರಕ್ಕೆ ಬೆಳೆಯಲು ಸಹಕಾರಿಯಾಗಬೇಕು. ಮಹಿಳೆಯರು ಸಮಾಜ ಹಾಗೂ ಕುಟುಂಬದ ಎಲ್ಲ ಸ್ತರಗಳಲ್ಲಿ ತಮ್ಮ ಕಾರ್ಯಕ್ಷಮತೆ ಹಾಗೂ ಬದ್ಧತೆ ಪ್ರದರ್ಶಿಸಿದ್ದಾರೆ. ಮಹಿಳೆ ತನ್ನ ಕಾರ್ಯಗಳನ್ನು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ನೆರವೇರಿಸುತ್ತಾಳೆ. ಮಹಿಳೆಯರು ಕೀಳರಿಮೆ ಬಿಟ್ಟು ಹೊರಬರಬೇಕು ಎಂದು ಕರೆ ನೀಡಿದರು.
ನಮ್ಮ ದೇಶದಲ್ಲಿ ಹಲವಾರು ಮಹಿಳೆಯರು ತಮ್ಮದೇ ಆದ ಛಾಪನ್ನು ಮೂಡಿಸಿ ದೇಶದಲ್ಲಿ ಉನ್ನತ ಮಟ್ಟಕ್ಕೇರಿದ್ದಾರೆ. ಹಾಗೆಯೇ ವಿದ್ಯಾರ್ಥಿಗಳಿಗೆ ಸಾಧಿಸುವ ಹಂಬಲ, ಛಲ, ಗುರಿ ಇರಬೇಕು ಎಂದರು. ಸಮಾಜದಲ್ಲಿ ಚಿಂತನೆಗಳು ಬದಲಾಗಬೇಕು, ಪರಿವರ್ತನೆ ಆಗಬೇಕು ಎಂದು ಅವರು ಬಯಸಿದರು. ಆರ್ಥಿಕವಾಗಿ ಹಿಂದುಳಿದ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಪಾರದರ್ಶಕವಾಗಿ ಗುರುತಿ ಸಬೇಕು ಎನ್ನುವ ಚಿಂತನೆಯಿAದ ಶಕ್ತಿ ದಿನಪತ್ರಿಕೆ ಮುಖಾಂತರ ವಿದ್ಯಾರ್ಥಿಗಳ ಅರ್ಜಿಯನ್ನು ಗುರುತಿಸಿ ವಿಲೇವಾರಿ ಮಾಡಲಾಗುತ್ತಿದೆ. ನಮ್ಮ ಜಿಲ್ಲೆಯಲ್ಲಿ ಸಾಕಷ್ಟು ಪ್ರತಿಭಾವಂತ ವಿದ್ಯಾಥಿ ðಗಳಿದ್ದಾರೆ. ಅವರನ್ನು ಮುಂದಕ್ಕೆ ತರಲು ಈ ರೀತಿಯ ದತ್ತಿ ಕಾರ್ಯಕ್ರಮಗಳು ಸಹಕಾ ರಿಯಾಗಲಿವೆ ಎಂದರು. ೪ಏಳನೇ (ಮೊದಲ ಪುಟದಿಂದ) ಹೆಣ್ಣು ಮಕ್ಕಳ ಅಸಮಾನತೆಯನ್ನು ತುಳಿಯಲು ಶಕ್ತಿ ತುಂಬಿಕೊಳ್ಳುವ ಶಿಕ್ಷಣ ಅತ್ಯಗತ್ಯ ಎಂದರು. ದತ್ತನಿಧಿಯನ್ನು ಹೆಣ್ಣು ಮಕ್ಕಳಿಗೆ ಮಾತ್ರ ಏಕೆ ನೀಡುತ್ತಿದ್ದೀರ ಎಂಬ ಪ್ರಶ್ನೆ ಹಲವರಿಂದ ಕೇಳಿ ಬಂದಿದೆ. ಹೆಣ್ಣು ಮಕ್ಕಳನ್ನು ಇಂದು ಸಮಾಜದಲ್ಲಿ ಗಂಡು ಮಕ್ಕಳಿಗೆ ಸಮಾನಾಂತರವಾಗಿ ಕಾಣುತ್ತಿಲ್ಲ ಎನ್ನುವ ಕಾರಣಕ್ಕೆ ಈ ದತ್ತಿನಿಧಿ ಹೆಣ್ಣು ಮಕ್ಕಳಿಗೆ ಮಾತ್ರ ನೀಡಲಾಗುತ್ತಿದೆ. ದತ್ತಿನಿಧಿ ಹಣದ ಮೂಲಕ ಸ್ವ-ಶಕ್ತಿಯನ್ನು ಶಿಕ್ಷಣದಿಂದ ಪಡೆದು ಸಮಾಜದಲ್ಲಿ ಸಮಾನತೆಯ ಮೂಲಕ ಹೆಣ್ಣು ಪರಿವರ್ತನೆ ತರಲು ಸಾಧ್ಯವಾಗಲಿ ಎಂಬ ಉದ್ದೇಶ ನಮ್ಮದು ಎಂದರು.
ಖಂಡನೆ
ತಾಲಿಬಾನ್ ಆಳ್ವಿಕೆಯ ಅಫ್ಘಾನ್ ವಿತ್ತ ಸಚಿವ ನಿನ್ನೆ ಭಾರತಕ್ಕೆ ಭೇಟಿ ನೀಡಿದಾಗ ಮಹಿಳಾ ಪತ್ರಿಕೋದ್ಯಮಿಗಳನ್ನು ಪತ್ರಿಕಾಗೋಷ್ಠಿಗೆ ಬಾರದಂತೆ ನಿಷೇಧಿಸಿದ ಘಟನೆ ಖಂಡನೀಯ ಎಂದು ಈ ಸಂದರ್ಭ ಅವರು ಅಸಮಾಧಾನ ವ್ಯಕ್ತಪಡಿಸಿದರು.
ಅರಮೇರಿ ಕಳಂಚೇರಿ ಮಠದ ಪೀಠಾಧಿಪತಿ ಶಾಂತಮಲ್ಲಿಕಾರ್ಜುನ ಸ್ವಾಮಿಗಳು ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ, ನಾವು ರಾಜಕಾರಣಿಗಳನ್ನು ನೋಡುವ ದೃಷ್ಠಿ ಬೇರೆ. ಇಲ್ಲಿ ಪೊನ್ನಣ್ಣರಲ್ಲಿ ಅಂತಃಕರಣದಲ್ಲಿರುವ ಮಾನವೀಯತೆಯನ್ನು ನೋಡುವುದೇ ಬೇರೆಯಾಗಿರುತ್ತದೆ. ಹೆಣ್ಣುಮಕ್ಕಳÀ ಶಿಕ್ಷಣಕ್ಕೆ ನೆರವಾಗುವುದು ಪ್ರಶಂಸನೀಯ ಕೆಲಸವಾಗಿದೆ. ಏನೇ ಸಿರಿವಂತಿಕೆ ಇದ್ದರೂ ಜ್ಞಾನವೇ ಸಂಪತ್ತಾಗಿರುತ್ತದೆ. ಶಿಕ್ಷಣವನ್ನು ಸಮಾಜಮುಖಿಯಾಗಿಸಿಕೊಳ್ಳಬೇಕು. ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಿದರೆ ತಾಯಂದಿರು ಸಮಾಜಕ್ಕೆ ಉತ್ತಮ ಕೊಡುಗೆ ನೀಡಬಹುದು ಎಂದರು.
ಶಕ್ತಿ ದಿನಪತ್ರಿಕೆಯ ಸಂಪಾದಕ ಜಿ.ಚಿದ್ವಿಲಾಸ್ ಅವರು ಮಾತನಾಡಿ, ಪಾರದರ್ಶಕತೆಯನ್ನು ಕಾಯ್ದುಕೊಂಡು ಬರುವ ನಿಟ್ಟಿನಲ್ಲಿ ಪೊನ್ನಣ್ಣ ಅವರು ನೀಡಿದ ಜವಾಬ್ದಾರಿಯಂತೆ ನಾವು ಈ ದತ್ತಿನಿಧಿಯ ಪ್ರಕ್ರಿಯೆಯನ್ನು ನಡೆಸುತ್ತಾ ಬರುತ್ತಿದ್ದೇವೆ. ಈ ದತ್ತಿನಿಧಿ ವಿತರಣೆ ನಿಂತ ನೀರಾಗದೆ ಹರಿಯುತ್ತ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ನೆರವಾಗುತ್ತಿದೆ. ಇಲ್ಲಿಯವರೆಗೆ ಸುಮಾರು ರೂ.೪೦ ಲಕ್ಷಕ್ಕೂ ಅಧಿಕ ಹಣ ದತ್ತಿನಿಧಿ ಮೂಲಕ ವಿತರಿಸಲಾಗಿದೆ. ಪೊನ್ನಣ್ಣ ಮತ್ತು ಅವರ ಕುಟುಂಬದವರು, ಹೆಣ್ಣು ಮಕ್ಕಳು ಉತ್ತಮ ಶಿಕ್ಷಣ ಪಡೆದು ಮುಂದೆ ಸಮಾಜಮುಖಿಗಳಾಗಿ ಭವಿಷ್ಯದಲ್ಲಿ ಉತ್ತಮ ಪ್ರಜೆಯಾಗಲಿ ಎಂಬ ಕಳಕಳಿ ಹೊಂದಿದ್ದಾರೆ ಎಂಬುದು ಶ್ಲಾಘನೀಯ ಎಂದರು. ಈ ನೆರವನ್ನು ಪಡೆದ ಮಕ್ಕಳಿಗೂ ಜವಾಬ್ದಾರಿ ಇದ್ದು ಇದನ್ನು ನೀಡಿದವರಿಗೆ ಕೃತಜ್ಞತೆ ಸಲ್ಲಿಸಬೇಕಿದೆ ಎಂದರು.
ಸಭೆಯನ್ನು ಉದ್ದೇಶಿಸಿ ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಚೆಪ್ಪುಡಿರ ಅರುಣ್ ಮಾಚಯ್ಯ ಮಾತನಾಡಿ, ಈ ರೀತಿಯ ಕಾರ್ಯಕ್ರಮದ ಮೂಲಕ ಪೊನ್ನಣ್ಣ ಅವರು ನೀಡುತ್ತಿರುವ ಸೇವೆ ಅನನ್ಯ. ವಿದ್ಯಾರ್ಥಿ ವೇತನ ನೀಡುವುದು ಇತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿದೆ. ಹಾಗೆಯೇ ಮಹಿಳೆಯರು ಸಮಾಜದ ನಿರ್ಮಾತೃಗಳಾಗಿದ್ದು ಇವರ ಕೊಡುಗೆ ಬಹಳಷ್ಟಿದೆ ಎಂದರು. ಶಿಕ್ಷಣ ಎಂಬುದು ಸಮಾಜದ ಅತ್ಯಂತ ಪ್ರಮುಖ ಕ್ಷೇತ್ರವಾಗಿದ್ದು ಸರಕಾರಗಳು ಈ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ಅನುಷ್ಠಾನಕ್ಕೆ ತಂದ ಬಗ್ಗೆ ಅರುಣ್ ವಿವರಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ ಮಾತನಾಡಿ ಪ್ರತಿಯೊಬ್ಬ ವಿದ್ಯಾರ್ಥಿಗಳು ಸಾಧಿಸುವ ಛಲದೊಂದಿಗೆ ಇನ್ನಷ್ಟು ಜನರಿಗೆ ತಾವು ಮಾದರಿಯಾಗಿ ಅವರಿಗೂ ಸಹಾಯಹಸ್ತ ನೀಡುವ ಮನೋಭಾವನೆ ಹೊಂದಬೇಕು ಎಂದು ಕಿವಿಮಾತು ಹೇಳಿದರು.
ಸುಂಟಿಕೊಪ್ಪದ ಸ್ವಸ್ಥ ವಿದ್ಯಾಸಂಸ್ಥೆಯ ನಿರ್ದೇಶಕಿ ಆರತಿ ಸೋಮಯ್ಯ ಮಾತನಾಡಿ, ಹೆಣ್ಣೊಂದು ಕಲಿತರೆ ತನ್ನ ಕುಟುಂಬವರ್ಗಕ್ಕೂ ಕಲಿಸುತ್ತಾಳೆ. ಪ್ರತಿಯೊಬ್ಬರಿಗೂ ಒಂದೊAದು ಹವ್ಯಾಸ ಇರಬೇಕು. ಸಾಮಾನ್ಯ ಜ್ಞಾನ ಇರಬೇಕು. ಹೆಣ್ಣಿನ ನಿಜವಾದ ಜೀವನ ಪ್ರಾರಂಭವಾಗುವದೇ ಕಾಲೇಜು ಹಂತ ಮುಗಿದ ಮೇಲೆ. ನಯ, ವಿನಯ, ಆಚಾರ ವಿಚಾರ ಪಾಲನೆ ಮಾಡುವುದರೊಂದಿಗೆ ಸಮಾಜದ ಮುಂಚೂಣಿ ಸ್ಥಾನವನ್ನು ಮಹಿಳೆಯರು ಅಲಂಕರಿಸಬೇಕು ಎಂದರು.
ಶಕ್ತಿ ದಿನಪತ್ರಿಕೆಯ ಸಹಾಯಕ ಸಂಪಾದಕ ಜಿ.ಆರ್ ಪ್ರಜ್ವಲ್ ಮಾತನಾಡಿ, ಅರ್ಜಿಗಳನ್ನು ಬರೆಯುವಾಗ ಯಾವುದೇ ಕಾರಣಕ್ಕೂ ಇತರರ ಅರ್ಜಿಗಳನ್ನು ನಕಲು ಮಾಡಬಾರದು. ಕೆಲವರು ಎ.ಐ ಬಳಸಿ ಅರ್ಜಿಗಳನ್ನು ಬರೆದಿದ್ದಾರೆ. ಎ.ಐ ಸಹಕಾರ ಪಡೆಯಬೇಕೇ ಹೊರತು ಸಂಪೂರ್ಣ ಅವಲಂಬಿತರಾಗಬಾರದೆAದರು. ವೃತ್ತಿ ಜೀವನಕ್ಕೆ ಕಾಲಿಡುವಾಗ ಅಂಕಗಳೊAದಿಗೆ ಆ್ಯಪ್ಟಿಟ್ಯೂಡ್ ಜ್ಞಾನ ಹಾಗೂ ಅರ್ಜಿಗಳನ್ನು ಬರೆಯುವ ಶೈಲಿಯನ್ನು ನಿರ್ಲಕ್ಷಿಸಬಾರದೆಂದು ಹೇಳಿದರು.
ವೇದಿಕೆಯಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಧರ್ಮಜ ಉತ್ತಪ್ಪ, ಹಿರಿಯರಾದ ಮಾಚಿಮಂಡ ಗಂಗಮ್ಮ ಸುಬ್ರಮಣಿ, ಕಾಂಚನ್ ಪೊನ್ನಣ್ಣ, ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಇಂದು ೩೫ ಆರಂಭಿಕ ಪದವಿ ವಿದ್ಯಾರ್ಥಿನಿಯರಿಗೆ ಹಾಗೂ ೨ನೇ, ೩ನೇ ಸಾಲಿನ ವಿದ್ಯಾರ್ಥಿಗಳಿಗೆ ಸೇರಿ ೯೧ ವಿದ್ಯಾರ್ಥಿನಿಯರಿಗೆ ದತ್ತಿನಿಧಿ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ವಿದ್ಯಾಥಿಗಳು, ಪೋಷಕರು ಹಾಜರಿದ್ದರು. ಅರಣ್ಯ ಅಭಿವೃದ್ದಿ ನಿಗಮದ ನಿಕಟಪೂರ್ವ ನಿರ್ದೇಶಕ ಅಜ್ಜಿಕುಟ್ಟಿರ ನರೇನ್ ಕಾರ್ಯಪ್ಪ ಸ್ವಾಗತಿಸಿದರೆ, ಶಿಕ್ಷಕ ಎ.ವಿ ಮಂಜುನಾಥ್ ನಿರೂಪಿಸಿ, ವಂದಿಸಿದರು.