ಕಾಯಪಂಡ ಶಶಿ ಸೋಮಯ್ಯ

ಮಡಿಕೇರಿ, ಅ. ೧೨: ದೇಶಪ್ರೇಮ.. ದೇಶ ರಕ್ಷಣೆಯ ವಿಚಾರ ಬರುವಾಗ ಕೊಡಗು ಜಿಲ್ಲೆಗೆ ರಾಷ್ಟçದಲ್ಲಿ ವಿಶೇಷ ಸ್ಥಾನಮಾನವಿದೆ. ಸೈನಿಕ ಪರಂಪರೆಗೂ ಕೊಡಗಿಗೂ ವಿಶೇಷ ಬಾಂಧವ್ಯವಿರುವುದು ಪ್ರೌಢಿಮೆಯ ವಿಚಾರವೂ ಆಗಿದೆ. ಈ ಕಾರಣದಿಂದಲೇ ಕೊಡಗಿಗೆ ಸೈನಿಕರ ಜಿಲ್ಲೆ ಎಂಬ ಹೆಸರಿದೆ. ದೇಶದ ರಕ್ಷಣಾಪಡೆಗೆ ಇಬ್ಬರು ಜನರಲ್‌ಗಳನ್ನು ನೀಡಿರುವುದರೊಂದಿಗೆ ಸಾವಿರಾರು ಸೇನಾನಿಗಳು ಇರುವ ಜಿಲ್ಲೆ ಕೊಡಗು. ಕೊಡಗಿನ ಜಿಲ್ಲಾ ಕೇಂದ್ರದಲ್ಲಿ ಫೀ.ಮಾ. ಕಾರ್ಯಪ್ಪ, ಜನರಲ್ ತಿಮ್ಮಯ್ಯ ಅವರ ಪ್ರತಿಮೆ, ಮೇಜರ್ ಮಂಗೇರಿರ ಮುತ್ತಣ್ಣ, ಸ್ಕಾ÷್ವಡ್ರನ್ ಲೀಡರ್ ಎ.ಬಿ. ದೇವಯ್ಯ ಪ್ರತಿಮೆ ಹಾಗೂ ಯುದ್ಧ ಸ್ಮಾರಕ ಇರುವುದು ವಿಶೇಷ. ಇದರೊಂದಿಗೆ ಕೆಲವರ್ಷಗಳ ಹಿಂದೆ ತಲೆಎತ್ತಿರುವ ಜನರಲ್ ತಿಮ್ಮಯ್ಯ, ಮ್ಯೂಸಿಯಂ ಕೂಡ ಸೇನಾ ಪರಂಪರೆಯನ್ನು ಪ್ರತಿಬಿಂಬಿಸುತ್ತಿದೆ. ಗೋಣಿಕೊಪ್ಪದಲ್ಲಿಯೂ ಫೀ.ಮಾ. ಕಾರ್ಯಪ್ಪ, ಜನರಲ್ ತಿಮ್ಮಯ್ಯ ಅವರ ಜೋಡಿಪ್ರತಿಮೆ ಒಂದೇ ಸ್ಥಳದಲ್ಲಿದೆ. ಇದರೊಂದಿಗೆ ಮಡಿಕೇರಿ-ವೀರಾಜಪೇಟೆಯಲ್ಲೊಂದು ಯುದ್ಧ ಸ್ಮಾರಕ, ಬಾಳುಗೋಡುವಿನಲ್ಲಿ ಒಂದು ಯುದ್ಧ ಸ್ಮಾರಕ ಭಾಗಮಂಡಲ ವ್ಯಾಪ್ತಿಯಲ್ಲೊಂದು ಅಮರ್ ಜವಾನ್ ಸ್ಮಾರಕ, ಟಿ. ಶೆಟ್ಟಿಗೇರಿಯಲ್ಲಿಯೂ ಮತ್ತೊಂದು ಸ್ಮಾರಕವಿದೆ. ಇದೀಗ ಈ ಸಾಲಿಗೆ ಹೊಸದಾಗಿ ಮತ್ತೊಂದು ಸ್ಮಾರಕ ಸೇರ್ಪಡೆಗೊಳ್ಳುತ್ತಿದೆ. ಮಡಿಕೇರಿಯ ಸನ್ನಿಸೈಡ್‌ನಲ್ಲಿರುವ ಜನರಲ್ ತಿಮ್ಮಯ್ಯ ಮ್ಯೂಸಿಯಂ ಆವರಣದಲ್ಲಿರುವ ಅಮರ್‌ಜವಾನ್ ಸ್ಮಾರಕದ ರೀತಿಯಲ್ಲೇ ದಕ್ಷಿಣ ಕೊಡಗಿನ ಹುದಿಕೇರಿ ಪಟ್ಟಣದಲ್ಲಿ ೪ಐದÀನೇ ಪುಟಕ್ಕೆ ಇದೀಗ ಮತ್ತೊಂದು ಅಮರ್ ಜವಾನ್ ಸ್ಮಾರಕ ಸದ್ದಿಲ್ಲದೆ ರೂಪುಗೊಳ್ಳುತ್ತಿದೆ. ಜಿಲ್ಲೆಯಲ್ಲಿ ಅಮರ್‌ಜವಾನ್ ಸ್ಮಾರಕವಿರುವುದು, ಮಡಿಕೇರಿ ಸನ್ನಿಸೈಡ್ ಹಾಗೂ ಭಾಗಮಂಡಲದ ಚೇರಂಗಾಲ ಗ್ರಾಮದಲ್ಲಿ ಮಾತ್ರ. ಇದೀಗ ಹುದಿಕೇರಿಯಲ್ಲಿ ಮತ್ತೊಂದು ಸ್ಮಾರಕ ಜಿಲ್ಲೆಯ ಪಟ್ಟಿಗೆ ಸೇರ್ಪಡೆಗೊಳ್ಳುತ್ತಿದೆ.

ಹುದಿಕೇರಿ ಮಾಜಿ ಸೈನಿಕರ ಸಂಘದ ಕಾಳಜಿ

ಹುದಿಕೇರಿಯಲ್ಲಿ ಕೇವಲ ಕಳೆದ ನಾಲ್ಕು ತಿಂಗಳ ಹಿಂದೆ ಹುದಿಕೇರಿ ಗ್ರಾ.ಪಂ. ವ್ಯಾಪ್ತಿಯ ಅಂಜಿಕೇರಿನಾಡ್‌ಗೆ ಸೇರಿದ ಗ್ರಾಮಗಳಾದ ಹುದಿಕೇರಿ, ಹೈಸೊಡ್ಲೂರು, ಬೆಳ್ಳೂರು, ಕೊಣಗೇರಿ, ಬೇಗೂರು ಗ್ರಾಮಗಳನ್ನು ಒಳಗೊಂಡAತೆ ಹುದಿಕೇರಿ ಮಾಜಿ ಸೈನಿಕರ ಸಂಘವನ್ನು ಪ್ರಾರಂಭಿಸಲಾಗಿದೆ. ಈ ಸಂಘದಲ್ಲಿ ಸದ್ಯಕ್ಕೆ ಆರ್ಮಿ, ನೇವಿ, ಏರ್‌ಫೋರ್ಸ್ಗೆ ಸೇರಿದ ಸುಮಾರು ೧೦೦ರಷ್ಟು ಮಾಜಿ ಸೈನಿಕರು ಸದಸ್ಯರಾಗಿದ್ದಾರೆ. ಈ ಸಂಘದ ಸ್ಥಾಪನೆಯೊಂದಿಗೆ ಇದೀಗ ಪ್ರಥಮ ಕಾರ್ಯಕ್ರಮವಾಗಿ ಹುದಿಕೇರಿ ಪಟ್ಟಣದ ಮುಖ್ಯರಸ್ತೆಯಲ್ಲಿ ಆಕರ್ಷಕ ರೀತಿಯಲ್ಲಿ ಹೊಸದಾದ ಅಮರ್‌ಜವಾನ್ ಸ್ಮಾರಕ ನಿರ್ಮಾಣಗೊಳ್ಳುತ್ತಿದೆ. ಮಾಜಿ ಯೋಧರ ಈ ಕನಸಿಗೆ ಹುದಿಕೇರಿ ಗ್ರಾಮ ಪಂಚಾಯಿತಿ ಸಂಪೂರ್ಣ ಸಹಕಾರ ನೀಡಿದ್ದು ಮುಖ್ಯರಸ್ತೆಬದಿಯಲ್ಲಿ ೩ ಸೆಂಟ್‌ನಷ್ಟು ಜಾಗ ಒದಗಿಸಿದೆ.

ರೂ. ೧೦ ರಿಂದ ೧೨ ಲಕ್ಷ ವೆಚ್ಚ

ಈ ಸ್ಥಳದಲ್ಲಿ ಸುಮಾರು ರೂ. ೧೦ ರಿಂದ ೧೨ ಲಕ್ಷ ವೆಚ್ಚದಲ್ಲಿ ಅಮರ್‌ಜವಾನ್ ಸ್ಮಾರಕ ನಿರ್ಮಿಸಲಾಗುತ್ತಿದ್ದು, ಬಹುತೇಕ ಕೆಲಸ ಪೂರ್ಣಗೊಂಡಿದೆ. ಸ್ತಂಭದೊAದಿಗೆ ಕೆಳಕ್ಕೆ ಭಾಗಿರುವ ರೈಫಲ್, ಹೆಲ್ಮೆಟ್ ಇರುವ ಈ ಸ್ಮಾರಕ ನೋಡಲು ಆಕರ್ಷಕವೂ ಆಗಿದೆ. ಇದಕ್ಕಾಗಿ ದೆಹಲಿಯಿಂದ ಆರ್ಮಿ, ನೇವಿ, ಏರ್‌ಫೋರ್ಸ್ಗೆ ಸಂಬAಧಿಸಿದAತೆ ಇರುವ ಕಂಚಿನ ಲೋಗೋ ಗನ್ ಅನ್ನು ವ್ಯವಸ್ಥೆ ಮಾಡಲಾಗಿದೆ. ದೆಹಲಿ ಮತ್ತಿತರ ಕಡೆಗಳಲ್ಲಿ ಇರುವ ಅಮರ್‌ಜವಾನ್ ಸ್ಮಾರಕದ ರೀತಿಯಲ್ಲೇ ಇದನ್ನು ರೂಪಿಸಲಾಗಿದೆ.

ಇದರ ಎಲ್ಲಾ ಖರ್ಚು ವೆಚ್ಚಗಳನ್ನೂ ಸಂಘದ ಸದಸ್ಯರುಗಳು ಮಾತ್ರ ಭರಿಸಿರುವುದೂ ವಿಶೇಷವಾಗಿದೆ. ಸಾರ್ವಜನಿಕರು ವಂತಿಗೆ, ಸಹಕಾರ ನೀಡಲು ಮುಂದೆ ಬಂದರೂ ಸಂಘದ ಸದಸ್ಯರು ತಾವು ದೇಶಕ್ಕಾಗಿ ದುಡಿದಿರುವ ಸೇವೆಯನ್ನು ಪರಿಗಣಿಸಿ ತಾವು ಪಡೆಯುತ್ತಿರುವ ಸೌಲಭ್ಯದ ಚಿಂತನೆಯೊAದಿಗೆ ವೆಚ್ಚವನ್ನು ತಾವುಗಳೇ ಭರಿಸಿದ್ದಾರೆ.

ತಾ.೨೭ರಂದು ಲೋಕಾರ್ಪಣೆ

ಅಕ್ಟೋಬರ್ ೨೭ ರಂದು ಇಂಡಿಯನ್ ಆರ್ಮಿಯ ಇನ್‌ಫ್ಯಾಂಟ್ರಿ ಡೇ ಕಾರ್ಯಕ್ರಮವಿದ್ದು, ಕೊಡಗಿನಲ್ಲಿ ಕಾವೇರಿ ಸಂಕ್ರಮಣದ ಪತ್ತಾಲೋದಿಯ ಪವಿತ್ರ ದಿನದಂದು ಈ ಸ್ಮಾರಕ ಲೋಕಾರ್ಪಣೆಗೊಳ್ಳುತ್ತಿದೆ. ಜನಪ್ರತಿನಿಧಿಗಳು, ಮಾಜಿ ಯೋಧರು, ಪ್ರಮುಖ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗಿಗಳಾಗಲಿದ್ದಾರೆ.

ಹೇಗಿದೆ ಸ್ಮಾರಕ..?

ಗ್ರಾ.ಪಂ. ನೀಡಿರುವ ೩ ಸೆಂಟ್ ಜಾಗದಲ್ಲಿ ೩೦x೩೦ ವಿಸ್ತೀರ್ಣದಲ್ಲಿ ಈ ಸ್ಮಾರಕ ಸ್ಥಾಪಿಸಲಾಗಿದೆ. ಐದು ಅಡಿ ಎತ್ತರದ ಸ್ತಂಭದೊAದಿಗೆ ರೈಫಲ್ ಹಾಗೂ ಹೆಲ್ಮೆಟ್ ಹೊಂದಿದ ಮಾದರಿಯಲ್ಲಿ ಸ್ಮಾರಕ ಗಮನ ಸೆಳೆಯಲಿದೆ. ಇದರ ಒತ್ತಿನಲ್ಲೇ ಮುಂದೆ ರಾಷ್ಟಿçÃಯ ಹಬ್ಬಗಳ ಆಚರಣೆ, ಸೈನಿಕರಿಗೆ ಸಂಬAಧಿಸಿದ ದಿನಗಳ ಆಚರಣೆಗೆ ಧ್ವಜಸ್ತಂಭವೊAದನ್ನು ನಿರ್ಮಿಸಲಾಗಿದೆ.

ಸ್ಮಾರಕ ಸಭಾಂಗಣ

ಅಮರ್ ಜವಾನ್ ಸ್ಮಾರಕದ ಒತ್ತಿನಲ್ಲೇ ಮತ್ತೊಂದು ಸಭಾಂಗಣವನ್ನು ನಿರ್ಮಿಸಲಾಗಿದೆ. ಸುಮಾರು ೧೦ ವರ್ಷಗಳ ಹಿಂದೆ ಹುದಿಕೇರಿ ವಿಭಾಗದ ಯೋಧ ಕೇಚಮಾಡ ತಿಲಕ್ ಅವರು ಹಿಮಪಾತದಲ್ಲಿ ಹುತಾತ್ಮರಾಗಿದ್ದು, ಇವರ ಹೆಸರಿನಲ್ಲಿ ಈ ಸಭಾಂಗಣ ನಿರ್ಮಿಸಲಾಗಿದೆ. ಇದರಲ್ಲಿ ಫೀ.ಮಾ. ಕಾರ್ಯಪ್ಪ, ಜನರಲ್ ತಿಮ್ಮಯ್ಯ ಸೇರಿದಂತೆ ಸೇನೆಗೆ ಸಂಬAಧಿಸಿದ ಭಾವಚಿತ್ರ-ಮಾಹಿತಿಗಳನ್ನು ಅಳವಡಿಸಲಾಗುವುದು ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.

ಸಂಘದ ಮೂಲಕ ಭವಿಷ್ಯದಲ್ಲಿ ಇನ್ನಷ್ಟು ಚಿಂತನೆಗಳಿವೆ. ಹಂತಹAತವಾಗಿ ಈ ಬಗ್ಗೆ ಯೋಜನೆ ರೂಪಿಸಲಾಗುವುದು, ಇದರೊಂದಿಗೆ ಐದು ಗ್ರಾಮ ವ್ಯಾಪ್ತಿಯಲ್ಲಿ ಮಾಜಿ ಯೋಧರು ಅವರ ಪತ್ನಿಯರ ಸಂಕಷ್ಟಕ್ಕೆ ಸ್ಪಂದಿಸುವುದು, ನಿಧನರಾದ ಸಂದರ್ಭದಲ್ಲಿ ಖುದ್ದಾಗಿ ತೆರಳಿ ಗೌರವ ಸೂಚಿಸುವ ಕೆಲಸವನ್ನೂ ಸಂಘ ನಿರ್ವಹಿಸಲಿದೆ ಎಂದು ಅವರುಗಳು ತಿಳಿಸಿದ್ದಾರೆ.

ಪದಾಧಿಕಾರಿಗಳು

ಹುದಿಕೇರಿ ಮಾಜಿ ಸೈನಿಕರ ಸಂಘದ ಅಧ್ಯಕ್ಷರಾಗಿ ಬಲ್ಯಮೀದೇರಿರ ಪ್ರಕಾಶ್, ಉಪಾಧ್ಯಕ್ಷರಾಗಿ ಚೆಕ್ಕೆರ ರಮೇಶ್, ಕಾರ್ಯದರ್ಶಿಯಾಗಿ ಬೊಜ್ಜಂಗಡ ತಿಮ್ಮಯ್ಯ, ಜಂಟಿ ಕಾರ್ಯದರ್ಶಿಯಾಗಿ ಬೊಳ್ಳಿಮಾಡ ದಿನು ಕುಮಾರ್, ಖಜಾಂಚಿಯಾಗಿ ಬೊಳ್ಳಜಿರ ಕಿಶೋರ್, ಜಂಟಿ ಖಜಾಂಚಿಯಾಗಿ ಬೊಜ್ಜಂಗಡ ಸುನಿಲ್, ಸಂಘಟನಾ ಕಾರ್ಯದರ್ಶಿಯಾಗಿ ಕಿರಿಯಮಾಡ ಮಿಲನ್ ಗಣಪತಿ, ನಿರ್ದೇಶಕರಾಗಿ ಮಲ್ಲೇಂಗಡ ಜಯಾ ಉತ್ತಯ್ಯ, ಸಲಹೆಗಾರರಾಗಿ ಹಿರಿಯರಾದ ಬಯವಂಡ ಯು. ಕಾಳಪ್ಪ, ಮಂಡಚAಡ ದಿನೇಶ್ ಚಿಟ್ಟಿಯಪ್ಪ ಕಾರ್ಯನಿರ್ವಹಿಸುತ್ತಿದ್ದಾರೆ.