ವೀರಾಜಪೇಟೆ, ಅ. ೧೨: ಬಿ. ಶೆಟ್ಟಿಗೇರಿ ವಿಭಾಗದ ಕಲ್ಲುಮೊಟ್ಟೆ ಗ್ರಾಮದ ದೇವಯ್ಯ ಅವರಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ವೀಲ್‌ಚೇರ್ ವಿತರಣೆ ಮಾಡಲಾಯಿತು.

ದೇವಯ್ಯ ಅವರು ಗ್ಯಾಂಗ್ರಿನ್ ಸಮಸ್ಯೆಯಿಂದ ಬಳಲುತ್ತಿದ್ದು, ಶಸ್ತç ಚಿಕಿತ್ಸೆ ಸಂದರ್ಭ ಬಲಗಾಲು ತುಂಡರಿಸಿದ್ದು, ಮನೆಯ ಆವರಣದಲ್ಲಿ ಓಡಾಡಲು ಯೋಜನೆ ವತಿಯಿಂದ ವೀಲ್ ಚೇರ್ ನೀಡುವಂತೆ ಅವರ ಪತ್ನಿ ಕಮಲ ಅವರು ಮನವಿ ನೀಡಿದ್ದರು.

ಅದರಂತೆ ಶ್ರೀ ಕ್ಷೇತ್ರದ ವತಿಯಿಂದ ವೀಲ್‌ಚೇರ್ ಕಳುಹಿಸಿದ್ದು, ಯೋಜನಾಧಿಕಾರಿ ಹರೀಶ್ ಆಗಮಿಸಿ ದೇವಯ್ಯ ಅವರಿಗೆ ವಿತರಿಸಿದರು.

ಮೇಲ್ವಿಚಾರಕ ನಾಗರಾಜ್ ಸೇವಾ ಪ್ರತಿನಿಧಿ, ಗೀತಾ, ನವಜೀವನ ಸಮಿತಿ ಸದಸ್ಯರಾದ ರಾಜೇಂದ್ರ, ಉಪಸ್ಥಿತರಿದ್ದರು.