ಸಿದ್ದಾಪುರ/ ವೀರಾಜಪೇಟೆ, ಅ. ೧೨: ಇತ್ತೀಚೆಗೆ ವೀರಾಜಪೇಟೆ ತಾಲೂಕಿನ ಪಾಲಿಬೆಟ್ಟ ಸಮೀಪದ ಚೆನ್ನಯ್ಯನಕೋಟೆ ನಿವಾಸಿ ಅಣ್ಣಪ್ಪ ಎಂಬವರು ಅನಾರೋಗ್ಯಕ್ಕೀಡಾಗಿದ್ದ ಸಂದರ್ಭ ಅವರಿಗೆ ಸೂಕ್ತ ಚಿಕಿತ್ಸೆ ನೀಡಲು ಸಹಕರಿಸಿದ ಶಾಸಕ ಪೊನ್ನಣ್ಣ ಅವರನ್ನು ಇಂದು ಶಾಸಕರ ಗೃಹ ಕÀಚೇರಿಯಲ್ಲಿ ಅಣ್ಣಪ್ಪ ಕುಟುಂಬದವರು ಸನ್ಮಾನಿಸಿ ಗೌರವಿಸಿದರು.

ಚೆನ್ನಯ್ಯನಕೋಟೆ ನಿವಾಸಿ ಅಣ್ಣಪ್ಪ ಎಂಬವರಿಗೆ ಗಂಟಲಿನಲ್ಲಿ ಊತ ಕಂಡು ಬಂದ ಹಿನ್ನೆಲೆಯಲ್ಲಿ, ಅವರಿಗೆ ಚಿಕಿತ್ಸೆ ನೀಡಲು ಮೈಸೂರಿನ ಖಾಸಗಿ ಆಸ್ಪತ್ರೆಗೆ ಪರಿಶೀಲನೆಗೆ ಕರೆದುಕೊಂಡು ಹೋದಾಗ, ಅಣ್ಣಪ್ಪ ಅವರ ಗಂಟಲಿನಲ್ಲಿ ಕ್ಯಾನ್ಸರ್ ಗೆಡ್ಡೆ ಬೆಳೆದಿದ್ದು ಶಸ್ತçಚಿಕಿತ್ಸೆ ಮಾಡಲೇಬೇಕಾದ ಅನಿವಾರ್ಯತೆ ಉಂಟಾದ ಹಿನ್ನಲೆ ಶಸ್ತçಚಿಕಿತ್ಸೆಗೆ ಸುಮಾರು ಅಂದಾಜು ೮ ಲಕ್ಷ ರೂಪಾಯಿ ವೆಚ್ಚವಾಗಬಹುದು ಎಂದು ಅಲ್ಲಿನ ವೈದ್ಯರು ಮಾಹಿತಿ ನೀಡಿದ್ದರು.

ತಕ್ಷಣ ಅಣ್ಣಪ್ಪ ಅವರ ಸಹೋದರ ಮಣಿಕಂಠ ಅವರು, ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ಕುಂಡಚ್ಚಿರ ಮಂಜು ದೇವಯ್ಯ ಹಾಗೂ ಸ್ಥಳೀಯ ಕಾಂಗ್ರೆಸ್ ಮುಖಂಡರಿಗೆ ಮಾಹಿತಿ ನೀಡಿ ಶಾಸಕ ಪೊನ್ನಣ್ಣ ಅವರ ಮೊರೆ ಹೋಗಿದ್ದರು. ತಕ್ಷಣವೇ ಆಸ್ಪತ್ರೆಯ ಉನ್ನತ ಅಧಿಕಾರಿಗಳ ಜೊತೆ ಮಾತನಾಡಿ ಶಸ್ತçಚಿಕಿತ್ಸೆ ಮಾಡುವಂತೆ ಶಾಸಕರು ಸೂಚಿಸಿದ್ದರು.

ಶಸ್ತçಚಿಕಿತ್ಸೆಗೆ ಬೇಕಾದ ಹಣವನ್ನು ಆಯುಷ್ಮಾನ್ ಭಾರತ, ಅರೋಗ್ಯ ಕರ್ನಾಟಕ ಯೋಜನೆಯ ಮುಖಾಂತರ ಪಾವತಿ ಮಾಡಲು ತಿಳಿಸಿದರು. ಶಾಸಕರ ಸೂಚನೆಯಂತೆ ಸಾಮಾಜಿಕ ಕಾರ್ಯಕರ್ತ ಚೋಕಂಡ ಸಂಜು ಸುಬ್ಬಯ್ಯ ಅವರಿಗೆ ಈ ಚಿಕಿತ್ಸೆಯ ಸಂಪೂರ್ಣ ಜವಾಬ್ದಾರಿ ನೀಡಲಾಗಿತ್ತು.