ನಾಪೋಕು : ಕೊಡಗು ಹಕ್ಕು ಸಂರಕ್ಷಣಾ ಸಮಿತಿ ವತಿಯಿಂದ ವಿವಿಧÀ ಗ್ರಾಮಗಳ ಭಕ್ತರಿಗೆ ಕಾವೇರಿ ತೀರ್ಥ ವಿತರಿಸಲಾಯಿತು.
ಭಾಗಮಂಡಲದಿAದ ಕೊಡಗು ಹಕ್ಕು ಸಂರಕ್ಷಣಾ ಸಮಿತಿಯ ೩೦ನೇ ವರ್ಷದ ವತಿಯಿಂದ ರಥಯಾತ್ರೆ ಆರಂಭಗೊAಡು ಭಕ್ತರಿಗೆ ತೀರ್ಥ ವಿತರಣೆಯನ್ನು ಚೇರಂಗಾಲ, ಅಯ್ಯಂಗೇರಿ, ಪುಲಿಕೋಟು ಪೇರೂರು, ಬಲ್ಲಮಾವಟಿ, ಚೋನಕೆರೆ , ನಾಪೋಕ್ಲು ಗ್ರಾಮಗಳಲ್ಲಿ ಮಾಡಿ ಸಮೀಪದ ಪಾಲೂರಿನ ಹರಿಶ್ಚಂದ್ರ ದೇವಾಲಯದಲ್ಲಿ ಸಮಾಪ್ತಿಗೊಂಡಿತು. ಕೊಡಗು ಹಕ್ಕು ಸಂರಕ್ಷಣಾ ಸಮಿತಿಯ ಸಂಚಾಲಕ ಬಿದ್ದಾಟಂಡ ರೋಜಿ ಚಿಣ್ಣಪ್ಪ, ಬಿದ್ದಾಟಂಡ ಮಮತಾ ಚಿಣ್ಣಪ್ಪ, ನಿರ್ದೇಶಕರಾದ ಕಲಿಯಾಟಂಡ ಸುಮಿ ದೇವಯ್ಯ, ಚಿಲ್ಲನ ಕಿರಣ್, ನೆರವಂಡ ಸೋಮಣ್ಣ, ಎಳ್ತಂಡ ಭೀಮಯ್ಯ ಪಾಲ್ಗೊಂಡಿದ್ದರು.ಕುಶಾಲನಗರ: ತುಲಾ ಸಂಕ್ರಮಣ ಹಿನ್ನಲೆಯಲ್ಲಿ ಕುಶಾಲನಗರದಲ್ಲಿ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ ಪವಿತ್ರ ಕಾವೇರಿ ತೀರ್ಥವನ್ನು ಸಾರ್ವಜನಿಕರಿಗೆ ವಿತರಿಸಲಾಯಿತು.
ಕುಶಾಲನಗರ ಕೊಪ್ಪ ಗಡಿಭಾಗದ ಕಾವೇರಿ ಮಾತೆ ಪ್ರತಿಮೆ ಆವರಣದಲ್ಲಿ ಭಾರವಿ ಕನ್ನಡ ಸಂಘದ ನೇತೃತ್ವದಲ್ಲಿ ಪವಿತ್ರ ತೀರ್ಥ ವಿತರಣೆ ಕಾರ್ಯಕ್ರಮಕ್ಕೆ ಕುಶಾಲನಗರ ತಾಲೂಕು ತಹಶೀಲ್ದಾರ್ ಕಿರಣ್ ಜಿ. ಗೌರಯ್ಯ ಚಾಲನೆ ನೀಡಿದರು.
ಬೆಳಿಗ್ಗೆ ಹೋಮ ಮತ್ತಿತರ ಕಾರ್ಯಕ್ರಮಗಳ ನಂತರ ಮಾತೆಗೆ ವಿಶೇಷ ಪೂಜೆ ಸಲ್ಲಿಸಿ ಪವಿತ್ರ ತೀರ್ಥ ವಿತರಣೆ ನಡೆಯಿತು. ಕಾರ್ಯಕ್ರಮದ ಅಂಗವಾಗಿ ಕಾವೇರಿ ಪ್ರತಿಮೆಗೆ ಅಲಂಕಾರ ಮತ್ತು ಕಾವೇರಿ ನದಿ ಸೇತುವೆಗೆ ವಿದ್ಯುತ್ ಅಲಂಕಾರ ಮಾಡಲಾಗಿತ್ತು.
ಸಾವಿರಾರು ಸಂಖ್ಯೆಯ ಭಕ್ತಾದಿಗಳಿಗೆ ಭಾರವಿ ಕನ್ನಡ ಸಂWದÀ ಆಶ್ರಯದಲ್ಲಿ ಅನ್ನ ಸಂತರ್ಪಣೆ ತೀರ್ಥ ವಿತರಣಾ ಕಾರ್ಯ ನಡೆಯಿತು.
ಭಾರವಿ ಕನ್ನಡ ಸಂಘದ ಪ್ರಮುಖರಾದ ಬಬೀಂದ್ರ ಪ್ರಸಾದ್, ರವೀಂದ್ರ ಪ್ರಸಾದ್ ವಿಜಯೇಂದ್ರ ಪ್ರಸಾದ್ ಮತ್ತು ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಇದ್ದರು.ವೀರಾಜಪೇಟೆ :
ವೀರಾಜಪೇಟೆ ಹಿಂದೂ ಅಗ್ನಿ ದಳದ ವತಿಯಿಂದ ವೀರಾಜಪೇಟೆಯಲ್ಲಿ ಕಾವೇರಿ ತೀರ್ಥ ಪೂಜೆ ಹಾಗು ವಿತರಣೆ ನೆರವೇರಿತು.
ಈ ಸಂದರ್ಭ ಅಗ್ನಿ ದಳದ ಸದಸ್ಯರು,
ಹಾಜರಿದ್ದರು.ಕುಶಾಲನಗರ: ಕುಶಾಲನಗರÀ ಕೊಡವ ಸಮಾಜದಲ್ಲಿ ಪವಿತ್ರ ಕಾವೇರಿ ತೀರ್ಥ ಪೂಜೆ ನಡೆಸಿ ಸಮಾಜದ ಸದಸ್ಯರಿಗೆ ವಿತರಣೆ ಮಾಡಲಾಯಿತು. ಕುಶಾಲನಗರ ಕೊಡವ ಸಮಾಜದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮಾಜದ ಅಧ್ಯಕ್ಷ ವಾಂಚೀರ ಮನು ನಂಜುAಡ ಮತ್ತು ಪದಾಧಿಕಾರಿಗಳು, ಸದಸ್ಯರು ಇದ್ದರು.