ನಾಪೋಕ್ಲು: ಸ್ವಚ್ಛ ಕೊಡಗು - ಸುಂದರ ಕೊಡಗು ಸ್ವಚ್ಛತಾ ಅಭಿಯಾನಕ್ಕೆ ಸ್ಥಳೀಯ ಪಿಪಿ ಫೌಂಡೇಶನ್ ಬೆಂಬಲ ನೀಡಿತು.

ಅಭಿಯಾನದಲ್ಲಿ ಪಟ್ಟಣದಿಂದ ಸಂತೆ ಮೈದಾನದವರೆಗೆ ರಸ್ತೆಯ ಬದಿಗಳಲ್ಲಿದ್ದ ತ್ಯಾಜ್ಯವನ್ನು ಸಂಗ್ರಹಿಸಿ ಸ್ವಚ್ಛತೆಯನ್ನು ಮಾಡಲಾಯಿತು. ಈ ಸಂದರ್ಭ ಪಿಪಿ ಫೌಂಡೇಶನ್ ಅಧ್ಯಕ್ಷ ಸಲೀಂ ಹ್ಯಾರಿಸ್, ಅಬ್ದುಲ್ ರೆಹಮಾನ್ ಹಾಜಿ, ಪಿ.ಎ ಶಾಹಿದ್, ಅರಫತ್ ವರ್ತಕ ಎಂ.ಎ ಮನ್ಸೂರ್ ಆಲಿ , ಅಹಮದ್ ಪಿಪಿ ಫೌಂಡೇಶನ್ ಸದಸ್ಯರು ಇನ್ನಿತರರು ಭಾಗವಹಿಸಿದ್ದರು.ಮುಳ್ಳೂರು: ಸ್ವಚ್ಛ ಕೊಡಗು ಸುಂದರ ಕೊಡಗು ಅಭಿಯಾನ ಹಿನ್ನೆಲೆ ಕೊಡ್ಲಿಪೇಟೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟಿçÃಯ ಸೇವಾ ಯೋಜನೆ ಘಟಕದ ವತಿಯಿಂದ ಕೊಡ್ಲಿಪೇಟೆ ಗ್ರಾ.ಪಂ.ವ್ಯಾಪ್ತಿಯ ನಂದಿಪುರ ಗ್ರಾಮದಲ್ಲಿರುವ ನಂದಿನೇಸರ ಕೆರೆಯ ಉದ್ಯಾನವನದಲ್ಲಿ ಸ್ವಚ್ಚತೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಎನ್‌ಎಸ್‌ಎಸ್ ಘಟಕದ ವಿದ್ಯಾರ್ಥಿಗಳು ಉದ್ಯಾನವನ್ನು ಶ್ರಮದಾನದ ಮೂಲಕ ಸ್ವಚ್ಚಗೊಳಿಸಿದರು. ನಂತರ ವಿದ್ಯಾರ್ಥಿಗಳು ಕೊಡ್ಲಿಪೇಟೆ ಬಸ್ ನಿಲ್ದಾಣದಲ್ಲಿ ತ್ಯಾಜ್ಯವಸ್ತುಗಳನ್ನು ತೆಗೆದು ಶ್ರಮದಾನದ ಮೂಲಕವಾಗಿ ಸ್ವಚ್ಚಗೊಳಿಸಿದರು ಬಳಿಕ ವಿದ್ಯಾರ್ಥಿಗಳು ಸ್ವಚ್ಚ ಕೊಡಗು ಸುಂದರ ಕೊಡಗು ಅಭಿಯಾನ ಕಾರ್ಯಕ್ರಮದ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಿ ಅರಿವು ಮೂಡಿಸಿದರು.

ಅಭಿಯಾನ ಕಾರ್ಯಕ್ರಮದಲ್ಲಿ ಕಾಲೇಜು ಪ್ರಾಂಶುಪಾಲ ಎಂ.ಆರ್.ನಿರAಜನ್, ರಾಷ್ಟಿçÃಯ ಸೇವಾ ಯೋಜನಾಧಿಕಾರಿ ಕೆ.ಎಚ್.ಯೋಗೇಂದ್ರ, ಉಪನ್ಯಾಸಕರಾದ ಕೆ.ಕೆ.ಅಭಿಲಾಷ್‌ರೇಣುಕಾ, ಹರೀಶ್, ಕಾವ್ಯ, ಯೋಗಿತಾ, ರಮ್ಯಾ ಮುಂತಾದವರಿದ್ದರು.ವೀರಾಜಪೇಟೆ: ವೀರಾಜಪೇಟೆ ಪುರಸಭೆ ಹಾಗೂ ಡೊನೆಟರ್ಸ್ ಚಾರಿಟೇಬಲ್ ಟ್ರಸ್ಟ್ ಸೇರಿದಂತೆ ವಿವಿಧ ಸಂಸ್ಥೆಗಳ ವತಿಯಿಂದ ವೀರಾಜಪೇಟೆ ಕಾವೇರಿ ಕಾಲೇಜು ಬಳಿಯಿಂದ ನಗರದವರಗೆ ಸ್ವಚ್ಛತಾ ಕಾರ್ಯ ನಡೆಯಿತು. ಕೊಡಗು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಧರ್ಮಜ ಉತ್ತಪ್ಪ, ಪುರಸಭೆ ಅಧ್ಯಕ್ಷೆ ದೇಚಮ್ಮ ಕಾಳಪ್ಪ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದರು.

ಈ ಸಂದರ್ಭ ಪುರಸಭೆ ಸದಸ್ಯರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಜಿ ಪೂಣಚ್ಚ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಜಲೀಲ್, ಪುರಸಭೆ ಸದಸ್ಯರುಗಳಾದ ದಿನೇಶ್, ಆಗಸ್ಟೀನ್ ಬೆನ್ನಿ, ಎಸ್.ಹೆಚ್. ಮತೀನ್, ಮಹಮ್ಮದ್ ರಾಫಿ, ಹಮೀದ್, ಪುರಸಭೆ ಮುಖ್ಯಾಧಿಕಾರಿ ನಾಚಪ್ಪ, ಪರಿಸರ ಅಭಿಯಂತರಾದ ರೀತು ಸಿಂಗ್, ಆರೋಗ್ಯಾಧಿಕಾರಿ ಕೋಮಲ, ಕೆ.ಕೆ ಗ್ರೂಪ್‌ನ ಮಾಲೀಕರಾದ ಜಗತ್, ಕೊಡಗು ಕಲಾವಿದರ ಸಂಘದ ಬೀನಾ ಜಗದೀಶ್, ಡೊನೆಟರ್ಸ್ ಚಾರಿಟೇಬಲ್ ಟ್ರಸ್ಟ್ನ ಸದಸ್ಯರು, ನಿರ್ಮಲ ರಮಣ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸೇರಿದಂತೆ ಇನ್ನಿತರರು ಹಾಜರಿದ್ದರು.ವೀರಾಜಪೇಟೆ: ವೀರಾಜಪೇಟೆ ಪುರಸಭೆ ಹಾಗೂ ಡೊನೆಟರ್ಸ್ ಚಾರಿಟೇಬಲ್ ಟ್ರಸ್ಟ್ ಸೇರಿದಂತೆ ವಿವಿಧ ಸಂಸ್ಥೆಗಳ ವತಿಯಿಂದ ವೀರಾಜಪೇಟೆ ಕಾವೇರಿ ಕಾಲೇಜು ಬಳಿಯಿಂದ ನಗರದವರಗೆ ಸ್ವಚ್ಛತಾ ಕಾರ್ಯ ನಡೆಯಿತು. ಕೊಡಗು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಧರ್ಮಜ ಉತ್ತಪ್ಪ, ಪುರಸಭೆ ಅಧ್ಯಕ್ಷೆ ದೇಚಮ್ಮ ಕಾಳಪ್ಪ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದರು.

ಈ ಸಂದರ್ಭ ಪುರಸಭೆ ಸದಸ್ಯರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಜಿ ಪೂಣಚ್ಚ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಜಲೀಲ್, ಪುರಸಭೆ ಸದಸ್ಯರುಗಳಾದ ದಿನೇಶ್, ಆಗಸ್ಟೀನ್ ಬೆನ್ನಿ, ಎಸ್.ಹೆಚ್. ಮತೀನ್, ಮಹಮ್ಮದ್ ರಾಫಿ, ಹಮೀದ್, ಪುರಸಭೆ ಮುಖ್ಯಾಧಿಕಾರಿ ನಾಚಪ್ಪ, ಪರಿಸರ ಅಭಿಯಂತರಾದ ರೀತು ಸಿಂಗ್, ಆರೋಗ್ಯಾಧಿಕಾರಿ ಕೋಮಲ, ಕೆ.ಕೆ ಗ್ರೂಪ್‌ನ ಮಾಲೀಕರಾದ ಜಗತ್, ಕೊಡಗು ಕಲಾವಿದರ ಸಂಘದ ಬೀನಾ ಜಗದೀಶ್, ಡೊನೆಟರ್ಸ್ ಚಾರಿಟೇಬಲ್ ಟ್ರಸ್ಟ್ನ ಸದಸ್ಯರು, ನಿರ್ಮಲ ರಮಣ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸೇರಿದಂತೆ ಇನ್ನಿತರರು ಹಾಜರಿದ್ದರು.ವೀರಾಜಪೇಟೆ: ಸ್ವಚ್ಚ ಕೊಡಗು ಸುಂದರ ಕೊಡಗು ಅಭಿಯಾನದ ಅಂಗವಾಗಿ ವೀರಾಜಪೇಟೆಯ ಆರ್ಜಿ ಗ್ರಾಮ ಪಂಚಾಯಿತಿ ಮತ್ತು ಬದ್ರಿಯಾ ವಿದ್ಯಾ ಸಂಸ್ಥೆ ಕಲ್ಲುಬಾಣೆ ಸಹಯೋಗದಲ್ಲಿ ಶ್ರಮದಾನ ನಡೆಯಿತು.

ಕಲ್ಲುಬಾಣೆ ರಸ್ತೆಯಿಂದ ಪಂಜರಪೇಟೆವರೆಗೆ ಸ್ವಚ್ಚತೆ ಕೈಗೊಳ್ಳಲಾಯಿತು. ಶಿಕ್ಷಕರಾದ ಆದಿರ ಮಕ್ಕಳಿಗೆ ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸಿದರು. ಈ ಸಂದರ್ಭ ಆರ್ಜಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಕವಿತಾ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಮೋದ್, ಕಾರ್ಯದರ್ಶಿ ರಾಜನ್, ಸದಸ್ಯರುಗಳಾದ ಉಪೇಂದ್ರ, ಬಷೀರ್ ಕೆ.ಟಿ. ಶಹಾದೀರ್ ಆಲಿ, ಹಕೀಮ್, ಬದ್ರಿಯ ವಿದ್ಯಾ ಸಂಸ್ಥೆ ಆಡಳಿತ ಮಂಡಳಿ ಸದಸ್ಯರು, ಶಾಲೆಯ ಮುಖ್ಯ ಶಿಕ್ಷಕರಾದ ಮಹದೇವ್, ಎಲ್ಲ ಶಿಕ್ಷಕರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ಕುಶಾಲನಗರ: ಅಭಿಯಾನ ಭಾಗವಾಗಿ ಕುಶಾಲನಗರದ ಅತಿಥಿ ರೆಸ್ಟೋರೆಂಟ್ ಸಿಬ್ಬಂದಿ ವರ್ಗದವರು ಸ್ವಚ್ಛತಾ ಕಾರ್ಯ ನಡೆಸಿದರು. ಅತಿಥಿ ರೆಸ್ಟೋರೆಂಟ್‌ನ ವ್ಯವಸ್ಥಾಪಕ ಗಲಾದ, ಸಿಬ್ಬಂದಿಗಳಾದ ಶ್ರೀಜಿತ್, ಚರಣ್, ಪವನ್, ಮುನೀರ್, ಹೇಮಂತ್, ಮುತ್ತುರಾಜು, ಸಿಪ್ರಿಯನ್, ಸಿಂಧು,ಮಾದೇಶ, ಕಮಲ್ ಭಾಗಿಯಾಗಿದ್ದರು. ಪೊನ್ನಂಪೇಟೆ: ಬಾಳೆಲೆ ಸಮೀಪದ ರಾಜಾಪುರ (ದೇವನೂರು) ಗ್ರಾಮಸ್ಥರು ಬಾಳೆಲೆಯಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಸ್ವಚ್ಛ ಕೊಡಗು -ಸುಂದರ ಕೊಡಗು ಯೋಜನೆಗೆ ಕೈಜೋಡಿಸಿರುವ ರಾಜಾಪುರ ಗ್ರಾಮಸ್ಥರು ಬಾಳೆಲೆಯ ಗಣೇಶ ದೇವಸ್ಥಾನದಿಂದ ಕಿಸ್ತೂರಿನವರೆಗಿನ ರಸ್ತೆಯ ಎರಡು ಭಾಗಗಳನ್ನು ಸಂಪೂರ್ಣ ಸ್ವಚ್ಛಗೊಳಿಸಿದರು.

ಒಟ್ಟು ೧೦ ಕಿ.ಮೀ. ಉದ್ದದ ರಸ್ತೆಯಲ್ಲಿ ಸ್ವಚ್ಛತಾ ಕಾರ್ಯವನ್ನು ಪೂರ್ಣಗೊಳಿಸಲಾಯಿತು. ಈ ಸಂದರ್ಭದಲ್ಲಿ ಸಂಗ್ರಹಿಸಿದ ತ್ಯಾಜ್ಯಗಳನ್ನು ವೈಜ್ಞಾನಿಕವಾಗಿ ವಿಲೇವಾರಿಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮದ ಪ್ರಮುಖರಾದ ಪಾರುವಂಗಡ ಎನ್. ಸೋಮಣ್ಣ, ಸ್ವಚ್ಛ ಕೊಡಗು ಸುಂದರ ಕೊಡಗು ಉತ್ತಮ ಪರಿಕಲ್ಪನೆಯಾಗಿದೆ. ಸ್ವಚ್ಛತೆ ಕುರಿತು ಜಾಗೃತಿ ಮೂಡಿಸಲು ಈ ಯೋಜನೆ ಹೆಚ್ಚು ಸಹಕಾರಿಯಾಗಿದೆ. ಕೊಡಗಿನ ಪ್ರತಿಯೊಬ್ಬರಲ್ಲೂ ಸ್ವಚ್ಛ ಕೊಡಗು ಕಲ್ಪನೆ ಸ್ವಯಂ ಪ್ರೇರಣೆಯಿಂದ ಮೂಡಿ ಬರಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕುಶಾಲನಗರ : ಸರ್ಕಾರಿ ಪ್ರಥಮ ದಜೆ ಕಾಲೇಜು, ರಾಷ್ಟಿçÃಯ ಸೇವಾ ಯೋಜನೆ, ರೇಂರ‍್ಸ್ ಮತ್ತು ರೋರ‍್ಸ್ ಹಾಗೂ ದೈಹಿಕ ಶಿಕ್ಷಣ ವಿಭಾಗಗಳ ಸಂಯುಕ್ತಾಶ್ರಯದಲ್ಲಿ ಸ್ವಚ್ಛ ಕೊಡಗು ಸುಂದರ ಕೊಡಗು ಅಭಿಯಾನವನ್ನು ಹಮ್ಮಿಕೊಂಡು ಕಾಲೇಜಿನ ಆವರಣ ಮತ್ತು ನಗರದ ಗೋಪಾಲ್ ಸರ್ಕಲ್‌ನ ಎರಡು ಕಡೆಗಳಲ್ಲಿ ಸ್ವಚ್ಛತಾ ಅಭಿಯಾನವನ್ನು ಕಾಲೇಜಿನ ಸುಮಾರು ೮೫ ವಿದ್ಯಾರ್ಥಿಗಳು, ಪ್ರಾಂಶುಪಾಲರು ನೆರವೇರಿಸಿದರು.ಮಡಿಕೇರಿ : ಸ್ವಚ್ಛ ಕೊಡಗು - ಸುಂದರ ಕೊಡಗು ಅಭಿಯಾನಕ್ಕೆ ಮಡಿಕೇರಿ ನಗರದ ಮಹದೇವಪೇಟೆಯ ಡಾ. ಅಬ್ದುಲ್ ಕಲಾಂ ಬಡಾವಣೆಯ ಡಾ. ಅಬ್ದುಲ್ ಕಲಾಂ ಬಡಾವಣೆ ಸೌಹಾರ್ದ ಸಮಿತಿ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿತು.

ಎ.ವಿ. ಶಾಲೆಯ ಬಳಿ ಸೌಹಾರ್ದ ಸಮಿತಿಯ ಎಲ್ಲಾ ಪದಾಧಿಕಾರಿಗಳು ಹಾಗೂ ಸಮಿತಿಯ ಮಹಿಳಾ ವಿಭಾಗದವರು ಒಂದುಗೂಡಿ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿದ್ದರು. ಸಮಿತಿಯ ಅಧ್ಯಕ್ಷ ಎಂ.ಎ. ಸಾದಿಕ್ ಸಾಧು ಅವರು ಸ್ವಯಂ ಸ್ವಚ್ಛತೆ ಮಾಡುವುದರ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.

ಈ ಸಂದರ್ಭ ಸಮಿತಿಯ ಉಪಾಧ್ಯಕ್ಷ ಎಂ.ಬಿ. ಕೌಸರ್, ಪ್ರಧಾನ ಕಾರ್ಯದರ್ಶಿ ಬೈ.ಶ್ರೀ ಪ್ರಕಾಶ್, ಎಂಎ ನಜೀರ್ ಖುರೇಶಿ, ಮಹಮ್ಮದ್ ಅಸಿಸುದ್ದೀನ್, ಬಿ.ಎಂ. ಹರೀಶ್, ಖಾಲಿದ್, ಎಂ.ವೈ. ರಿಯಾಜ್, ಎಂ.ಕೆ. ಅಸೀಫ್, ಪ್ರಿಯಾ ಗುರುಕಿರಣ್, ಕಾಳಚಂಡ ಶಾಂತಿ ಜಾಲಿ, ಶುಭಾ ಹರೀಶ್, ಜಬಾನಾ ಅಬ್ರಾರ್, ಜಾಲಿ ಮಂದಣ್ಣ, ಎಂ.ಎ. ಭಾಷಾ ಮುಂತಾದವರು ಭಾಗವಹಿಸಿದ್ದರು.ಗೋಣಿಕೊಪ್ಪಲು : ಸ್ವಚ್ಛ ಕೊಡಗು - ಸುಂದರ ಕೊಡಗು ಅಭಿಯಾನದಡಿ ಕ್ಯಾಲ್ಸ್ ವಿದ್ಯಾರ್ಥಿಗಳು ಶ್ರಮದಾನ ಕೈಗೊಂಡರು. ಕೈಕೇರಿಯ ಮುಖ್ಯ ರಸ್ತೆಯಲ್ಲಿ ಬಿದ್ದಿದ್ದ ಕಸವನ್ನು ಹೆಕ್ಕಿ ಶುಚಿಗೊಳಿಸಿದರು. ಅಂಗಡಿ ಮುಂಗಟ್ಟುಗಳ ಮಾಲೀಕರಿಗೆ ಓಡಾಡುವ ಪಾದಚಾರಿಗಳಿಗೆ ಹಾಗೂ ವಾಹನ ಚಾಲಕರಿಗೆ ಬೀದಿ ಬದಿ ಕಸ ಎಸೆಯದಂತೆ, ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವಂತೆ ಜಾಗೃತಿ ಮೂಡಿಸಿದರು.