ಮಡಿಕೇರಿ, ಅ. ೨೬: ಕೊಡಗು ಏಲಕ್ಕಿ ಮಾರಾಟ ಸಹಕಾರ ಸಂಘಕ್ಕೆ ಇಂದು ಚುನಾವಣೆ ನಡೆಯಿತು. ಒಟ್ಟು ೧೭ ಸ್ಥಾನಗಳ ಪೈಕಿ ೪ ಸ್ಥಾನಕ್ಕೆ ಈಗಾಗಲೇ ಅವಿರೋಧ ಆಯ್ಕೆ ನಡೆದಿದ್ದರಿಂದ ಉಳಿದ ೧೩ ಸ್ಥಾನಗಳಿಗೆ ಇಂದು ಚುನಾವಣೆ ನಡೆಯಿತು. ೮೧೨ ಅರ್ಹ ಮತದಾರರ ಪೈಕಿ ೭೦೬ ಮಂದಿ ಮತ ಚಲಾವಣೆ ಮಾಡಿದರು. ಮಡಿಕೇರಿ ತಾಲೂಕಿನ ೩೧೬ ಮಂದಿ ಮತದಾರರ ಪೈಕಿ ೨೭೬ ಮಂದಿ, ವೀರಾಜಪೇಟೆ ಹಾಗೂ ಪೊನ್ನಂಪೇಟೆ ತಾಲೂಕಿನಲ್ಲಿ ೨೦ ಮತದಾರರ ಪೈಕಿ ೬ ಮಂದಿ, ಸೋಮವಾರಪೇಟೆ ಹಾಗೂ ಕುಶಾಲನಗರ ತಾಲೂಕಿನ ೪೭ ಮತದಾರರ ಪೈಕಿ ೪೨೪ ಮಂದಿ ಮತದಾರರು ಮತ ಚಲಾಯಿಸಿದರು.
ಈ ನಡುವೆ ಸಂಘದ ಸಭೆಗೆ ಸರಿಯಾಗಿ ಹಾಜರಾಗದೆ ಸಂಘದಲ್ಲಿ ವ್ಯವಹಾರ ನಡೆಸದೆ ಮತದಾನದ ಹಕ್ಕು ಕಳೆದುಕೊಂಡಿದ್ದ ೩೫೬ ಮಂದಿ ಮತದಾರರ ಪೈಕಿ ೧೮೫ ಮಂದಿ ರಾಜ್ಯ ಉಚ್ಚ ನ್ಯಾಯಾಲಯದಿಂದ ಮತದಾನದ ಹಕ್ಕು ಪಡೆದಿದ್ದರು. ಚುನಾವಣಾ ಕಣದಲ್ಲಿದ್ದ ಒಂದು ತಂಡದಿAದ ೧೦೪ ಮಂದಿ ಹಾಗೂ ಮತ್ತೊಂದು ತಂಡದAತೆ ೭೧ ಮಂದಿ ನ್ಯಾಯಾಲಯದ ಮೂಲಕ ಮತದಾನದ ಹಕ್ಕನ್ನು ಪಡೆದುಕೊಂಡಿದ್ದು, ಒಟ್ಟು ೧೮೫ ಮಂದಿಯಲ್ಲಿ ೮೮ ಮಂದಿ ಇಂದು ಮತ ಚಲಾವಣೆ ಮಾಡಿದರು.
ಈಗಾಗಲೇ ಅರ್ಹತೆ ಪಡೆದಿದ್ದ ಮತದಾರರಿಗೆ ಹಾಗೂ ನ್ಯಾಯಾಲಯದ ಮೂಲಕ ಮತದಾನದ ಹಕ್ಕು ಪಡೆದುಕೊಂಡಿದ್ದ ಮತದಾರರಿಗೆ ಪ್ರತ್ಯೇಕವಾಗಿ ಮತ ಚಲಾವಣೆಗೆ ವ್ಯವಸ್ಥೆ ಮಾಡಲಾಗಿತ್ತು. ಮತದಾನದ ಬಳಿಕ ಎರಡು ಕಡೆಯ ಮತ ಪೆಟ್ಟಿಗೆಗಳನ್ನು ಖಜಾನೆಗೆ ಕೊಂಡೊಯ್ದು ಇಡಲಾಗಿದೆ. ಅನರ್ಹ ಮತದಾರರು ನ್ಯಾಯಾಲಯದ ಆದೇಶದೊಂದಿಗೆ ಮತ ಚಲಾವಣೆ ಮಾಡಿರುವ ಹಿನ್ನೆಲೆಯಲ್ಲಿ ಮತ ಎಣಿಕೆಗೂ ತಡೆ ಉಂಟಾಗಿದ್ದು, ಈ ಸಂಬAಧ ನ್ಯಾಯಾಲಯದ ಆದೇಶ ಬಂದ ಬಳಿಕ ಮತ ಎಣಿಕೆ ನಡೆಯಬೇಕಿದೆ.