ಮಡಿಕೇರಿ, ಅ. ೨೬ : ಪ್ರಧಾನಿ ಮೋದಿ ಅವರ ತಿಂಗಳಾAತ್ಯದ ಮನ್ ಕೀ ಬಾತ್ ರೆಡಿಯೋ ಕಾರ್ಯಕ್ರಮದ ೧೨೭ ನೇ ಸಂಚಿಕೆಯಲ್ಲಿ ಈ ಬಾರಿ ಕೊಡಗೂ ಸೇರಿದಂತೆ ಕಾಫಿ ಉದ್ಯಮದ ಬಗ್ಗೆ ಪ್ರಸ್ತಾಪ ಮಾಡಿರುವುದು ಕಾಫಿ ಉದ್ಯಮಿಗಳು, ಕಾಫಿ ಕೃಷಿಕರಲ್ಲಿ ಸಂತೋಷಕ್ಕೆ ಕಾರಣವಾಗಿದೆ.

ಪ್ರತೀ ತಿಂಗಳಾAತ್ಯದ ಸಂಚಿಕೆಯಲ್ಲಿಯೂ ಪ್ರಧಾನಿ ಮೋದಿ ವಿಭಿನ್ನ ವಿಚಾರಗಳ ಬಗೆಗೆ ತಮ್ಮ ಅಭಿಪ್ರಾಯ ಹಂಚಿಕೊಳ್ಳುವುದರೊAದಿಗೆ ಯಾವುದಾದರು ಒಂದು ವಿಷಯದ ಬಗ್ಗೆ ವಿಶೇಷವಾಗಿ ಪ್ರಸ್ತಾಪಿಸುತ್ತಾರೆ. ಈ ಭಾನುವಾರ ಪ್ರಸಾರವಾದ ಮನದ ಮಾತು ಹೊಸ ಆವೃತ್ತಿಯಲ್ಲಿ ಕಾಫಿ ಬಗ್ಗೆ ಪ್ರಧಾನಿ ಮಾತನಾಡಿದ್ದಾರೆ.

ಇದು ಕಾಫಿ ಕೃಷಿ, ಉದ್ಯಮದಲ್ಲಿ ನವಸಂಚಲನಕ್ಕೆ ಕಾರಣವಾಗಿದೆ. ಸೂಕ್ತ ಸಮಯದಲ್ಲಿಯೇ ಮೋದಿಯವರು ಕಾಫಿ ಬಗ್ಗೆ ಪ್ರಸ್ತಾಪಿಸಿ ಕಾಫಿಯನ್ನು ಲೋಕಪ್ರಿಯವಾಗಿಸುವ ನಿಟ್ಟಿನಲ್ಲಿ ಹೊಸ ಹೆಜ್ಜೆ ಇರಿಸಿದ್ದಾರೆ ಎಂಬ ಮಾತುಗಳು ಕಾಫಿ ಪ್ರೇಮಿಗಳಿಂದ ವ್ಯಕ್ತವಾಗಿದೆ.

ಪ್ರಧಾನಿ ಮೋದಿ ಹೇಳಿದ್ದೇನು?

ಪ್ರೀತಿಯ ದೇಶವಾಸಿಗಳೇ.. ಟೀ ಜತೆ ನನಗಿರುವ ಬೆಸುಗೆ ನಿಮಗೆಲ್ಲಾ ತಿಳಿದಿದೆ. ಆದರೆ ನಾನಿವತ್ತು ಮನ್ ಕೀ ಬಾತ್‌ನಲ್ಲಿ ಕಾಫಿ ಬಗ್ಗೆ ಮಾತನಾಡಲಿಚ್ಚಿಸುತ್ತೇನೆ. ಕಳೆದ ವರ್ಷ ನಾನು ಅರಕು ಕಾಫಿ ಬಗ್ಗೆ ಮಾತನಾಡಿದ್ದು ನಿಮಗೆ ನೆನಪಿರಬಹುದು. ಕೆಲವು ಸಮಯದ ಹಿಂದೆ ಒರಿಸ್ಸಾದ ಕೆಲವರು ಕೋರಪುಟ್ ಕಾಫಿ ಬಗ್ಗೆ ಅಭಿಪ್ರಾಯ ಹಂಚಿಕೊAಡಿದ್ದರು. ಕೋರಪುಟ್ ಕಾಫಿ ಬಹಳ ಸ್ವಾದಿಷ್ಟವಾಗಿದೆ ಎಂದು ಕೇಳಿ ತಿಳಿದಿದ್ದೇನೆ. ಸ್ವಾದಿಷ್ಟತೆ ಮಾತ್ರವಲ್ಲ ಕಾಫಿ ಕೃಷಿ ಕೂಡ ಅನೇಕರಿಗೆ ಉಪಕಾರಿಯಾಗಿದೆ. ಅನೇಕ ಮಹಿಳೆಯರು ಕಾಫಿ ಬೆಳೆಯುವ ಮೂಲಕ ಕೃಷಿಯನ್ನು ನೆಚ್ಚಿಕೊಂಡಿದ್ದಾರೆ.

ಭಾರತೀಯ ಕಾಫಿ ವಿಶ್ವದಾದ್ಯಂತ ಬಹಳ ಪ್ರಸಿದ್ದಿಯಾಗಿದೆ. ಕರ್ನಾಟಕದ ಚಿಕ್ಕಮಗಳೂರು, ಕೊಡಗು, ಹಾಸನ ಜಿಲ್ಲೆಗಳು. ಅಣ್ಣಮಲೈ ಸೇರಿದಂತೆ ತಮಿಳುನಾಡಿನ ಕೆಲವು ಜಿಲ್ಲೆಗಳು, ಕರ್ನಾಟಕ, ತಮಿಳುನಾಡು ಗಡಿಯಿಂದ ಬಿಳಿಗೇರಿ, ಕೇರಳದ ವೈನಾಡು, ಮಲಬಾರ್ ಪ್ರದೇಶಗಳು ಸೇರಿದಂತೆ ಭಾರತೀಯ ಕಾಫಿಯು ಗಮನಾರ್ಹ ರೀತಿಯಲ್ಲಿ ಬೆಳವಣಿಗೆ ಕಂಡಿದೆ. ಭಾರತದ ಈಶಾನ್ಯ ರಾಜ್ಯಗಳಲ್ಲಿಯೂ ಕಾಫಿ ಕೃಷಿ ಉತ್ತಮವಾಗಿದೆ ಎಂದು ಕೇಳಿದ್ದೇನೆ. ಇದು ಭಾರತೀಯ ಕಾಫಿ ಉದ್ಯಮದ ಬೆಳವಣಿಗೆಗೆ ಮತ್ತಷ್ಟು ಪುಷ್ಟಿ ನೀಡುತ್ತಿದೆ. ಹೀಗಾಗಿಯೇ ಕಾಫಿ ಪ್ರಿಯರು ಹೇಳುವಂತೆ.. ಕಾಫಿಯ ಸ್ವಾದ ಎಂದರೆ ಅದು ಭಾರತದ ಕಾಫಿ! ಭಾರತದಲ್ಲಿ ಬೆಳೆದ ಕಾಫಿ.. ವಿಶ್ವವ್ಯಾಪಿ ಪ್ರಿಯವಾಗಿದೆ. ೫ನೇ ಪುಟಕ್ಕೆ

ಪ್ರಧಾನಿ ಮೋದಿಯವರು ಭಾರತೀಯ ಕಾಫಿ ಸಂಬAಧಿತ ಮಾತನಾಡಿದ್ದು ಕಾಫಿ ಉದ್ಯಮರಂಗದಲ್ಲಿ ಹೊಸ ಉತ್ಸಾಹ ತಂದಿದೆ. ಸಾಮಾನ್ಯವಾಗಿ ಮೋದಿಯವರು ತಮ್ಮ ಜನಪ್ರಿಯ ಮನ್ ಕೀ ಬಾತ್ ನಲ್ಲಿ ಪ್ರಸ್ತಾಪಿಸಿದ ವಿಚಾರಧಾರೆಗಳು ಜಗತ್ತಿನಾದ್ಯಂತ ಗಮನ ಸೆಳೆಯುತ್ತದೆ. ಮೋದಿಯವರು ಯಾವುದೇ ವಿಚಾರ ತಿಳಿಸಿದರೂ ಅದು ಭಾರತದ ಬ್ರಾಂಡ್ ಎನಿಸಿಕೊಳ್ಳುತ್ತದೆ. ಹೀಗಾಗಿ ಕಾಫಿ ವಿಚಾರದಿಂದಾಗಿ ಭವಿಷ್ಯದಲ್ಲಿ ಭಾರತೀಯ ಕಾಫಿಯೂ ಜಗತ್ತಿನಾದ್ಯಂತ ಮಾರುಕಟ್ಟೆಯಲ್ಲಿ ಸಾಕಷ್ಟು ಬೇಡಿಕೆ ಪಡೆಯುವ ನಿರೀಕ್ಷೆ ಇದೆ. ಹಾಗೇ ಭಾರತದಲ್ಲಿಯೂ ಕಾಫಿ ಸೇವಿಸುವವರ ಸಂಖ್ಯೆಯೂ ವೃದ್ಧಿಯಾಗುವ ಸಂಭವ ಹೆಚ್ಚಾಗಿದೆ.

ಕಾಫಿ ಕ್ಷೇತ್ರದ ಪ್ರಮುಖರು ಏನನ್ನುತ್ತಾರೆ?

ಕಾಫಿ ಬೆಳೆಯುವ ಅನೇಕ ಪ್ರದೇಶಗಳನ್ನು ಮನ್ ಕೀ ಬಾತ್‌ನಲ್ಲಿ ಪ್ರಧಾನಿಯವರು ಉಲ್ಲೇಖಿಸಿದ್ದು ಕಾಫಿ ಕೃಷಿಕರು, ಉದ್ಯಮಿಗಳಲ್ಲಿ ಸಂತೋಷ ತಂದಿದೆ. ಪ್ರಧಾನಿಯವರ ಮಾತು ಕಾಫಿ ಉತ್ಪಾದನಾ ವಲಯಕ್ಕೆ ಪ್ರೇರಣೆ ಕೂಡ ಆಗಿದೆ. ಬಾಳೆಹೊನ್ನೂರಿನ ಕಾಫಿ ಸಂಶೋಧನಾ ಕೇಂದ್ರ ಸ್ಥಾಪನೆಯಾಗಿ ಶತಮಾನೋತ್ಸವ ಸಂಭ್ರಮದಲ್ಲಿರುವ ಸಂದರ್ಭ, ಪ್ರಧಾನಿಯವರ ಈ ಪ್ರೇರಣೆಯ ನುಡಿಗಳು ನಮಗೆ ಮುಂದಿನ ೧೦೦ ವರ್ಷಗಳಿಗೆ ಸೂಕ್ತ ಸಿದ್ಧತೆ ಕೈಗೊಳ್ಳಲು ಸಹಕಾರಿಯಾಗಿದೆ. ೭ ಬೀನ್ - ೭ ಲಕ್ಷ ಟನ್ ಎಂಬ ವಿನೂತನ ಯೋಜನಾಬದ್ಧ ಕಾರ್ಯಯೋಜನೆಯನ್ನು ಕಾಫಿ ಮಂಡಳಿಯಿAದ ಹಮ್ಮಿಕೊಂಡಿದ್ದೇವೆ.. ಕಾಫಿ ಸಂಬAಧಿತ ಮೋದಿಯವರ ಪ್ರೇರಣೆ ನಮ್ಮ ಯೋಜನೆಗೆ ಸಹಕಾರಿಯಾಗಿದೆ. ಕಾಫಿ ಕೃಷಿಕರು, ಉದ್ಯಮಿಗಳು ಪರವಾಗಿ ಪ್ರಧಾನಿಯವರಿಗೆ ಧನ್ಯವಾದಗಳನ್ನು ಕಾಫಿ ಮಂಡಳಿ ಪರವಾಗಿ ಸಲ್ಲಿಸುತ್ತೇನೆ ಎಂದು ಭಾರತೀಯ ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವವೃಂದ `ಶಕ್ತಿ'ಯೊಂದಿಗೆ ಹೇಳಿದ್ದಾರೆ.

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಪರವಾಗಿ ಪ್ರಧಾನಿ ಮೋದಿಯವರ ಹೇಳಿಕೆಯನ್ನು ಸ್ವಾಗತಿಸುವುದಾಗಿ ಹೇಳಿರುವ ಎಫ್.ಕೆ.ಸಿ..ಸಿ.ಐ.ನ ಅಧ್ಯಕ್ಷೆ ಉಮಾರೆಡ್ಡಿ , ಕಾಫಿ ಉದ್ಯಮದ ಬಗ್ಗೆ ಮೋದಿಯವರ ಹೇಳಿಕೆ ಕಾಫಿ ಉದ್ಯಮಕ್ಕೆ ಪ್ರೋತ್ಸಾಹ ನೀಡಿದಂತಾಗಿದೆ. ಕಾಫಿ ಉದ್ಯಮದ ಸಮಸ್ಯೆ ಪರಿಹಾರದ ನಿಟ್ಟಿನಲ್ಲಿಯೂ ಪ್ರಧಾನಿಯವರ ಹೇಳಿಕೆ ಪ್ರಯೋಜನಕಾರಿ. ಇತ್ತೀಚಿನ ವμðಗಳಲ್ಲಿ ಜಗತ್ತಿನಲ್ಲಿ ಭಾರತೀಯ ಕಾಫಿಗೆ ಬಹಳ ಮಹತ್ವ ದೊರಕುತ್ತಿದೆ. ಭಾರತೀಯ ಕಾಫಿಯ ಸ್ವಾದಿಷ್ಟತೆ ಜಗತ್ತಿಗೆ ತಿಳಿಯುತ್ತಿದೆ. ಭಾರತದಲ್ಲಿಯೇ ಅತ್ಯಧಿಕ ಕಾಫಿ ಬೆಳೆಯುವ ಕರ್ನಾಟಕದ ಕಾಫಿ ಜಿಲ್ಲೆಗಳಾದ ಕೊಡಗು, ಚಿಕ್ಕಮಗಳೂರು, ಹಾಸನದ ಕಾಫಿ ಉದ್ಯಮವೂ ಚೇತರಿಕೆಯ ಹಾದಿಯಲ್ಲಿದೆ. ಕಾಫಿ ಕೃಷಿ ಭೂಮಿಯಿಂದ ಕಾಫಿ ಟೇಬಲ್ ನವರೆಗೆ ತರುವವರೆಗೆ ಕೃಷಿಕರು, ಉದ್ಯಮಿಗಳ ಶ್ರಮಕ್ಕೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಸೂಕ್ತ ಯೋಜನೆ ರೂಪಿಸಬೇಕು. ಕಾಫಿಯನ್ನು ಕೃಷಿ ಭೂಮಿಯಿಂದ ಬಂದರಿಗೆ ಸಾಗಾಣೆ ಮಾಡಿ ದೇಶ,, ವಿದೇಶಗಳಿಗೆ ಮಾರುಕಟ್ಟೆ ಮಾಡಲು ಉಭಯ ಸರ್ಕಾರಗಳೂ ಕಾರ್ಯತಂತ್ರ ವೃದ್ಧಿಸಬೇಕಾಗಿದೆ. ಉದಾಹರಣೆಗೆ ಕೊಡಗಿನಿಂದ ಮಂಗಳೂರಿನ ಬಂದರಿಗೆ ಕಾಫಿ ಸಾಗಾಣೆಗಾಗಿ ಉತ್ತಮ ಗುಣಮಟ್ಟದ ರಸ್ತೆ ಸೌಲಭ್ಯ ಅಗತ್ಯ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಗಮನ ಹರಿಸಬೇಕಾಗಿದ್ದು, ವಿಮಾನ, ಹಡಗಿನಲ್ಲಿಯೂ ಕಾಫಿ ಸಾಗಾಣೆ ಸಂಬAಧಿತ ಆಧುನಿಕ ವ್ಯವಸ್ಥೆಯ ಸೌಕರ್ಯಗಳನ್ನೂ ಕೇಂದ್ರ ¸ರ್ಕಾರ ನೀಡುವತ್ತ ಗಮನ ನೀಡಬೇಕು. ಮನ್ ಕೀ ಬಾತ್ ಮೂಲಕ ಕಾಫಿ ಉದ್ಯಮ ಹೊಸ ಭರವಸೆಯ ಜಾರಿಯನ್ನು ನಿರೀಕ್ಷೆ ಮಾಡುತ್ತಿದೆ ಎಂದೂ ಉಮಾರೆಡ್ಡಿ ಶಕ್ತಿಯೊಂದಿಗೆ ಪ್ರತಿಕ್ರಿಯಿಸಿದರು.

ಭಾರತದಂತೆ ಕಾಫಿ ಉದ್ಯಮ ಕೂಡ ಪ್ರಗತಿಯ ಹಾದಿಯಲ್ಲಿದೆ. ದೇಶದಲ್ಲಿ ಕಾಫಿ ಉತ್ಪಾದನೆ ಕೂಡ ಹೆಚ್ಚಾಗುತ್ತಲೇ ಇದೆ. ಸೂಕ್ತ ಬೆಲೆ ಕೂಡ ಬೆಳೆಗಾರರಿಗೆ ದೊರಕಿದೆ. ಭಾರತೀಯ ಕಾಫಿಯ ಗುಣಮಟ್ಟದ ಬಗ್ಗೆಯೂ ಜಾಗತಿಕವಾಗಿ ಸೂಕ್ತ ಸ್ಥಾನಮಾನ ದೊರಕಿದೆ. ಭಾರತದ ಸ್ಪೆಷಾಲಿಟಿ ಕಾಫಿಗೂ ಬೇಡಿಕೆ ದೊರಕುತ್ತಿದೆ. ಕಾಫಿ ಉದ್ಯಮಕ್ಕೆ ಕಾಫಿ ಕೆಫೆಯೂ ಕ್ರಾಂತಿಕಾರಿಯಾಗಿ ಏರಿಕೆ ಕಂಡಿದೆ. ಕಾಫಿಯ ಆಂತರಿಕ ಬಳಕೆಯೂ ಹೆಚ್ಚಾಗಿದೆ. ಪ್ರಧಾನಿಯವರು ಕಾಫಿ ಬಗ್ಗೆ ಹೇಳಿರುವ ಮೆಚ್ಚುಗೆಯ ಮಾತುಗಳು ಕಾಫಿ ಕೃಷಿಕರು, ಕಾಫಿ ಉದ್ಯಮಿಗಳ ಮನೋಸ್ಥೆöÊರ್ಯ ಹೆಚ್ಚಿಸುವಂತಿದೆ ಎಂದು ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಷನ್ ಕಾರ್ಯಕಾರಿ ಮಂಡಳಿ ಸದಸ್ಯ ಕೆ.ಕೆ. ವಿಶ್ವನಾಥ್ ಹೇಳಿದರು.

ಕಾಫಿಯ ಬಗೆಗಿನ ಪ್ರಧಾನಿ ಮೋದಿಯವರ ಅಭಿನಂದನಾತ್ಮಕ ನುಡಿಗಳು ಭಾರತೀಯ ಕಾಪಿಗೆ ದೊರಕಿದ ಬೂಸ್ಟರ್ ಡೋಸ್ ಎಂದೇ ಹೇಳಬೇಕು. ರಾಷ್ಟçದ ಪ್ರಧಾನಿಯೋರ್ವರು ಕಾಫಿ ವಿಚಾರ ಸಂಬAಧಿತ ತೋರಿದ ಕಾಳಜಿಗೆ ಅವರ ನುಡಿಗಳು ಉದಾಹರಣೆಯಾಗಿ ದಾಖಲಾಗುತ್ತದೆ. ಕಾಫಿಯ ಮಹತ್ವದ ಬಗ್ಗೆ ಬಾರತೀಯರಿಗಷ್ಟೇ ಅಲ್ಲ, ವಿಶ್ವವ್ಯಾಪಿಯ ಜನತೆಗೂ ಮೋದಿಯವರ ಮಾತುಗಳು ಕಾಫಿ ಸೇವಿಸಿಲು ಪ್ರೇರಣೆಯಾದಂತಿದೆ ಎಂದು ಹೆಮ್ಮೆಯಿಂದ ಹೇಳಿದರು. ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ನಿರ್ದೇಶಕ ಕೆ.ಬಿ. ಗಿರೀಶ್ ಗಣಪತಿ.

ಒಟ್ಟಿನಲ್ಲಿ ಪ್ರಧಾನಿ ಮೋದಿಯವರ ಬಹು ಜನಪ್ರಿಯ ಮನ್ ಕೀ ಬಾತ್‌ನಲ್ಲಿ ಕಾಫಿ ಸಂಬAಧಿತ ವಿಚಾರ ಪ್ರಸ್ತಾಪವಾಗಿರುವುದು ಕಾಫಿ ಕ್ಷೇತ್ರದ ಭವಿಷ್ಯದ ದೃಷ್ಟಿಯಿಂದ ಹೊಸ ನಿರೀಕ್ಷೆ, ನವ ಭರವಸೆಗಳನ್ನು ಸೃಷ್ಟಿಸಿದೆ. ಕಾಫಿ ಲೋಕ ಹೊಸ ಮನ್ವಂತರಗಳೊAದಿಗೆ, ಹೊಸ ಚಿಂತನೆಗಳೊAದಿಗೆ ನಾಗಾಲೋಟದಿಂದ ಮುನ್ನುಗ್ಗುತ್ತಿರುವ ಸಂದರ್ಭವೇ ಪ್ರಧಾನಿ ಮೋದಿಯವರ ಕಾಫಿ ಉಲ್ಲೇಖ ಭಾರತೀಯ ಮೂಲದ ಕಾಫಿಯನ್ನು ಲೋಕಪ್ರಿಯವಾಗಿಸುವ ಎಲ್ಲಾ ಸಾಧ್ಯತೆಯಿದೆ.

ಭಾರತದ ಪ್ರಧಾನಿಯವರ ಕಾಫಿ ಶ್ಲಾಘನೆಯ ಮನದ ಮಾತು ವಿಶ್ವದ ಜನತೆಯ ಮನಸೆಳೆದು ಅವರ ಮನದ ಮಾತೂ ಆಗುತ್ತದೆಯೋ.. ಕಾಲವೇ ಉತ್ತರಿಸಬೇಕು!