ಕೂಡಿಗೆ, ಅ. ೨೬: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗ್ಗಡಹಳ್ಳಿ ಗ್ರಾಮದಲ್ಲಿರುವ ಶ್ರೀ ಶನೈಶ್ಚರ ದೇವಾಲಯದ ಆವರಣದಲ್ಲಿ ನ. ೫ ರಂದು ಅಣ್ಣಪ್ಪ ಹಾಗೂ ಪರಿವಾರ ದೈವಗಳ ನರ್ತನ ಸೇವೆ ಹಾಗೂ ಶ್ರೀ ಅಣ್ಣಪ್ಪ, - ಪಂಜುರ್ಲಿ - ಕರ್ಲ್ಲುಟ್ಟಿ ಹಾಗೂ ಚಾಮುಂಡಿ - ಗುಳಿಗ ದೈವಗಳ ನರ್ತನ ಸೇವೆಯು(ಕೋಲ)ವು ದೇವಾಲಯದ ಸಭಾಂಗಣದಲ್ಲಿ. ನ. ೫ ರಂದು ನಡೆಯಲಿದೆ.

ಅಂದು ಬೆಳಿಗ್ಗೆ ಗಣಯಾಗ, ದೈವಗಳಿಗೆ ನವಕ, ಪ್ರಧಾನ ಹೋಮ, ಶುದ್ಧಿ ಕಲಶ ನಡೆಯಲಿದೆ ಎಂದು ಶನೈಶ್ಚರ ದೇವಾಲಯದ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.